ಸೀತಾ-ರಾಮ: ಸಿಹಿ - ಸತ್ಯಜಿತ್ ನಟನೆಗೆ ಸಲಾಂ ಹೊಡೆದ ನೆಟ್ಟಿಗರ, ಇನ್ನಾದ್ರೂ ಕುಡಿಯೋದು ಬಿಡಿ ಅಂದ್ರು

First Published | May 12, 2024, 5:00 PM IST

ಸೀತಾರಾಮ ಸೀರಿಯಲ್ ವಿಭಿನ್ನ ಕಥೆಯ ಮೂಲಕ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದೀಗ ಸೀರಿಯಲ್ ನಲ್ಲಿ ಸಿಹಿ ಮತ್ತು ಸತ್ಯಜಿತ್ ಅವರ ದೃಶ್ಯ ಪ್ರಸಾರವಾಗಿದ್ದು, ಇಬ್ಬರ ಅಭಿನಯಕ್ಕೆ ವೀಕ್ಷಕರು ಮನಸೋತಿದ್ದಾರೆ. 

ಝೀಕನ್ನಡದಲ್ಲಿ (Zee Kannada) ಬರುವಂತಹ ಸೀತಾರಾಮ(Sita Rama) ಸೀರಿಯಲ್ ಜನರ ಮೆಚ್ಚಿನ ಸೀರಿಯಲ್ ಗಳಲ್ಲಿ ಒಂದಾಗಿದೆ. ಸೀತಾ -ಸಿಹಿ ಜೋಡಿ, ಸಿಹಿ - ಫ್ರೆಂಡ್ ರಾಮ ಜೋಡಿ ಎಲ್ಲರಿಗೂ ತುಂಬಾನೆ ಇಷ್ಟವಾಗಿದೆ. ಇದೀಗ ಸಿಹಿ ಮತ್ತು ಸತ್ಯಜಿತ್ ಕಾಂಬಿನೇಷನ್ ನ್ನು ಕೂಡ ಜನ ತುಂಬಾನೆ ಇಷ್ಟಪಟ್ಟಿದ್ದಾರೆ. 
 

ಸೀತಾ ರಾಮರ ಮದುವೆಗೆ ತಾತನು ಒಪ್ಪಿಗೆ ಕೊಟ್ಟಾ ಬಳಿಕ ಇದೀಗ ರಾಮ್ ಮನೆಯಲ್ಲಿ ನಡೆಯುತ್ತಿರುವ ಪೂಜೆಗೆ ಮೊದಲ ಬಾರಿಗೆ ತನ್ನ ಮನೆಯವರೊಂದಿಗೆ ಸೀತಾ ಬಂದಿದ್ದಾಳೆ. ಸೀತಾಳ ಜೊತೆಗೆ ಸಿಹಿ ಕೂಡ ಮನೆಗೆ ಕಾಲಿಟ್ಟಿದ್ದಾಳೆ. ಸೀತಾ ರಾಮ ಜೊತೆಯಾಗಿರಬೇಕು ಅಂದ್ರೆ ತಾನು ದೂರ ಹೋಗಬೇಕ ಎಂದು ತಾತನ ಬಳಿ ಮುದ್ದಾಗಿ ಕೇಳುವ ಸಿಹಿಯ ಮಾತುಗಳೇ ಜನರಿಗೆ ಕಣ್ಣೀರು ತರಿಸಿತ್ತು. 
 

Tap to resize

ಇದೀಗ ಸಿಹಿ ಮತ್ತು ಸತ್ಯಜಿತ್ (Sihi and Satyajith) ನಡುವಿನ ಕಾಂಬಿನೇಶನ್ ಮತ್ತು ಇಬ್ಬರ ಮಾತುಕತೆ ವೀಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ. ಇಬ್ಬರ ಮುದ್ದಾದ ಮಾತು, ಇಬ್ಬರ ಅದ್ಭುತವಾದ ಅಭಿನಯ ನೋಡಿ ವೀಕ್ಷಕರು ಮೆಚ್ಚಿ ಶುಭ ಹಾರೈಸಿದ್ದಾರೆ. 
 

ಅನಿಕೇತ್ ನನ್ನು ಹುಡುಕಿಕೊಂಡು ಮನೆ ಮಹಡಿಗೆ ಬರುವ ಸಿಹಿಗೆ ಅಲ್ಲಿ ಕುಡಿದು ನಶೆಯಲ್ಲಿ ಮಲಗಿದ್ದ ಸತ್ಯಜಿತ್ ಎದುರಾಗುತ್ತಾನೆ. ಸತ್ಯಜಿತ್ ನನ್ನು ಎಬ್ಬಿಸಿ, ನೀವ್ಯಾಕೆ ಪೂಜೆಗೆ ಬಂದಿಲ್ಲ ಎಂದು ಕೇಳುತ್ತಾ, ತನ್ನ ಕೈಯಲ್ಲಿದ್ದ ಪ್ರಸಾದವನ್ನು ಸತ್ಯಜಿತ್ ಗೆ ನೀಡುತ್ತಾಳೆ ಸಿಹಿ. ಇದನ್ನು ನೋಡಿದ ಸತ್ಯಜಿತ್, ಇಷ್ಟು ಸಣ್ಣ ವಯಸಲ್ಲಿ ತನ್ನಲ್ಲಿದ್ದದ್ದನ್ನು ಇನ್ನೊಬ್ಬರಿಗೆ ಕೊಡುವ ಗುಣ ಎಲ್ಲಿಂದ ಬಂತು ಮಗು ಎಂದು ಮುದ್ದಾಗಿ ಕೇಳ್ತಾನೆ ಸತ್ಯಜಿತ್. 
 

ಸತ್ಯಜಿತ್ ಪ್ರಸಾದವನ್ನು ನೀನೆ ತಿನ್ನು ಎಂದು ಸಿಹಿ ಪುಟ್ಟನಿಗೆ ಹೇಳಿದಾಗ, ಸಿಹಿ ತನಗೆ ಶುಗರ್ ಇರೋ ವಿಷ್ಯವನ್ನು ಹೇಳ್ತಾಳೆ, ಜೊತೆಗೆ ತಾನು ಇನ್ಸುಲಿನ್ ತೆಗೆದುಕೊಳ್ಳುವ ಬಗ್ಗೆಯೂ ಹೇಳ್ತಾಳೆ. ಇದನ್ನೆಲ್ಲಾ ಕೇಳಿ ಸತ್ಯಜಿತ್ ಕಣ್ಣೀರಿಡುತ್ತಾನೆ. ಇಷ್ಟು ಚಿಕ್ಕ ವಯಸ್ಸಿಗೆ ಸಕ್ಕರೆ ಕಾಯಿಲೇನಾ? ನನಗೆ ಒಂಚೂರು ಆರೋಗ್ಯ ಅಂತ ಇದ್ರೆ, ಅದೆಲ್ಲಾ ನಿನಗೆ ಇರಲಿ ಕಂದ, ನಿನ್ನ ಕಾಯಿಲೆ ನನಗಿರಲಿ ಎಂದು ಆಶೀರ್ವಾದ ಮಾಡ್ತಾನೆ ಸತ್ಯಜಿತ್. 
 

ದೇವರು ಕೊಟ್ಟಂತಹ ಪ್ರಸಾದ ನೀನೇ ಇನ್ನು ಮುಂದೆ ನಮ್ಮ ಜೊತೆಯಲ್ಲಿ ಇರೋವಾಗ ಇನ್ಯಾವ ಪ್ರಸಾದವು ಬೇಡ ಎಂದು ಹೇಳುತ್ತಾ, ಸಿಹಿಯ ಕೈಯನ್ನು ತನ್ನ ಕಣ್ಣಿಗೆ ಒತ್ತುವ ಸತ್ಯಜಿತ್ ಅಭಿನಯ ವೀಕ್ಷಕರನ್ನು ಭಾವುಕರನ್ನಾಗಿದೆ. ಅಲ್ಲದೇ ಇಬ್ಬರ ಕಾಂಬಿನೇಷನ್ ತುಂಬಾನೆ ಚೆನ್ನಾಗಿದೆ, ಇದು ತುಂಬಾನೆ ಮುದ್ದಾದ ಸೀನ್ ಎಂದು ಸಹ ಹೇಳಿದ್ದಾರೆ. 
 

ಆದರೆ ವೀಕ್ಷಕರಿಗೆ ಒಂದೇ ಒಂದು ಬೇಜಾರು ಅಂದ್ರೆ, ಸತ್ಯಜಿತ್ ಕುಡಿತದ ಚಟ. ಹಾಗಾಗಿ ಹೆಚ್ಚಿನ ಜನ ದಯವಿಟ್ಟು ಸತ್ಯ ಅವರ ಕ್ಯಾರೆಕ್ಟರ್ ಬೇಗ ಕುಡಿತದಿಂದ ಬಿಡಿಸಿ ಬದಲಾಯಿಸಿ, ಅವರು ಒಳ್ಳೆ ನಟರು ಈ ಕ್ಯಾರೆಕ್ಟರ್ ನಿಂದ ಅವರ ಮುಖ ನೋಡೋಕೆ ಬಹಳ ಬೇಜಾರಾಗುತ್ತೆ ಎಂದಿದ್ದಾರೆ. ಸತ್ಯಜಿತ್ ಅದ್ಭುತ ನಟರಾಗಿದ್ದು, ಅವರಿಗೆ ಮತ್ತಷ್ಟು ಅತ್ಯುತ್ತಮ ಪಾತ್ರಗಳು ಬರಲಿ ಎಂದು ಸಹ ಹಾರೈಸಿದ್ದಾರೆ. 
 

Latest Videos

click me!