ಕಾಂತಮ್ಮತ್ತೆಯ ನಟನೆಗೆ ವೀಕ್ಷಕರು ಫಿದಾ…. ಆಕ್ಟಿಂಗ್ ನೋಡಿ ನಿಮ್ ಮೇಲೆ ಲವ್ ಆಗ್ತಿದೆ ಎಂದ ಅಭಿಮಾನಿ!

First Published | Dec 5, 2024, 4:43 PM IST

ಝೀ ಕನ್ನಡದ ಜನಪ್ರಿಯ ಧಾರಾವಾಹಿ ಶ್ರಾವಣಿ -ಸುಬ್ರಹ್ಮಣ್ಯದ ಕಾಂತಮ್ಮನ ನಟನೆಗೆ ವೀಕ್ಷಕರು ಫಿದಾ ಆಗಿದ್ದು, ನಿಮ್ಮ ನಟನೆ ನೋಡಿ ಲವ್ ಆಗ್ತಿದೆ ನಿಮ್ ಮೇಲೆ ಅಂತಿದ್ದಾರೆ. 
 

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು ಶ್ರಾವಣಿ ಸುಬ್ರಹ್ಮಣ್ಯ (Shravani Subramanya). ಈ ಸೀರಿಯಲ್ ನ ಪ್ರತಿಯೊಂದು ಪಾತ್ರಗಳು ಸಹ ಅದ್ಭುತವಾಗಿದೆ. ಶ್ರಾವಣಿ ಆಗಿರಬಹುದು, ಸುಬ್ಬು, ಸುಬ್ಬು ಅಮ್ಮ,ಅಪ್ಪ ಎಲ್ಲರ ಪಾತ್ರವೂ ತುಂಬಾನೆ ಸುಂದರವಾಗಿ ಮೂಡಿ ಬರುತ್ತಿದೆ. ಇತ್ತೀಚೆಗಂತೂ ಮತ್ತೊಂದು ಪಾತ್ರ ಜನಮನ ಗೆಲ್ಲುತ್ತಿದೆ. 
 

ಹೌದು, ಜನಮನ ಗೆಲ್ಲುತ್ತಿರುವ ಮತ್ತೊಂದು ಪಾತ್ರ ಅಂದ್ರೆ ಅದು ಕಾಂತಮ್ಮನ ಪಾತ್ರ. ಇತ್ತೀಚಿನ ದಿನಗಳಲ್ಲಂತೂ ಕಾಂತಮ್ಮನನ್ನು ವೀಕ್ಷಕರು ಸಿಕ್ಕಾಪಟ್ಟೆ ಇಷ್ಟಪಡುತ್ತಿದ್ದಾರೆ. ಕಾಂತಮ್ಮನ ನಟನೆ, ಡೈಲಾಗ್, ಅವರು ನಡೆದುಕೊಳ್ಳುವ ರೀತಿ ಎಲ್ಲವೂ ಜನರಿಗೆ ತುಂಬಾನೆ ಇಷ್ಟವಾಗಿದ್ದು, ಸಿಕ್ಕಾಪಟ್ಟೆ ಹೊಗಳುತ್ತಿದ್ದಾರೆ. 
 

Tap to resize

ಕಾಂತಮ್ಮ (Kanthamma) ಸುಬ್ಬುವಿನ ಅಕ್ಕನ ಗಂಡನ ಅಮ್ಮ, ಅಂದ್ರೆ ಸುಬ್ಬುವಿಗೂ ಅತ್ತೆ. ಮಗನ ಸಮೇತ ಸೊಸೆಯ ಮನೆಯಲ್ಲಿಯೇ ನೆಲೆಯೂರಿರುವ ಹೆಂಗಸು ಕಾಂತಮ್ಮ. ಮೊದಲಿಗೆ ಕುತಂತ್ರಿಯಾಗಿದ್ದ ಕಾಂತಮ್ಮ, ನಂತ್ರದ ದಿನಗಳಲ್ಲಿ ಶ್ರಾವಣಿ ಮಾಡಿದ ವಾರ್ನಿಂಗ್ ಗೆ ಹೆದರಿ ಸುಬ್ಬು ಮನೆಯಲ್ಲಿ ತನ್ನ ಆಟ ಆಡೋದನ್ನ ನಿಲ್ಲಿಸಿದಳು, ಜೊತೆಗೆ ಮಗನಿಗೂ ಸಹ ಸರಿಯಾಗಿ ಇರುವಂತೆ ಬುದ್ದಿ ಹೇಳಿದ್ಲು ಕಾಂತಮ್ಮ. 
 

ಆದರೆ ಕಾಂತಮ್ಮನಿಗೆ ಯಾವಾಗ ಶ್ರಾವಣಿ, ಸುಬ್ಬುವನ್ನು ಇಷ್ಟ ಪಡ್ತಿದ್ದಾಳೆ ಅನ್ನೋದು ಗೊತ್ತಾಯ್ತೋ? ಆವಾಗಿನಿಂದ ಸಂಪೂರ್ಣವಾಗಿ ಬದಲಾಗಿದ್ದಾಳೆ. ಹೇಗಾದ್ರು ಮಾಡಿ, ಕಾರ್ತಿಕೇಯ ಮತ್ತು ಶ್ರಾವಣಿಯನ್ನು ಒಂದು ಮಾಡಿದ್ರೆ, ಮಿನಿಸ್ಟರ್ ಮನೆಯವರ ಅಳಿಯನಾಗ್ತಾನೆ ಸುಬ್ಬು, ಇದರಿಂದ ತಾನು ಕೂಡ ಮೆರಿಬಹುದು ಅನ್ನೋ ಭ್ರಮೆಯಲ್ಲಿ ಅವರಿಬ್ಬರನ್ನು ಒಂದು ಮಾಡಲು ಏನು ಸಾಧ್ಯವೋ ಅದೆಲ್ಲವನ್ನೂ ಮಾಡ್ತಿದ್ದಾಳೆ. 
 

ಈ ಸಂದರ್ಭದಲ್ಲಿ ಕಾಂತಮ್ಮನ ಕಾಮಿಡಿ ಟೈಮಿಂಗ್, ಪಂಚ್ ಡೈಲಾಗ್ , ನಟನೆಯನ್ನು ಜನ ಸಿಕ್ಕಾಪಟ್ಟೆ ಮೆಚ್ಚಿಕೊಂಡಿದ್ದು, ಕಾಂತಮ್ಮವ್ರೇ ನಿಮ್ಮ ಆಕ್ಟಿಂಗ್ ನೋಡಿದ್ರೆ ನನ್ಗೇ ನಿಮ್ಮ ಮೇಲೆ ಲವ್ ಆಗ್ತಿದೆ ಎಂದಿದ್ದಾರೆ. ಅಷ್ಟೇ ಅಲ್ಲ ಕಾಂತಮ್ಮ ಕಾಮಿಡಿ ಡೈಲಾಗ್ ಸೂಪರ್ ಆಗಿದೆ ಅಂತಾನೂ ಹೇಳಿದ್ದಾರೆ. 
 

ಕಾಂತಮ್ಮತ್ತೆ ನಿಮ್ಮ ನಟನೆ ಸೂಪರೋ ಸೂಪರ್, ಕಾಂತಮ್ಮ ಪಾತ್ರಕ್ಕೆ ಜೀವ ತುಂಬಿ ನಟಿಸುತ್ತಿದ್ದೀರಿ ಎಂದೆಲ್ಲಾ ಜನ ಹೊಗಳುತ್ತಿದ್ದಾರೆ. ಅಷ್ಟಕ್ಕೂ ಈ ಕಾಂತಮ್ಮ ಅವರ ನಿಜವಾದ ಹೆಸರು ಭವಾನಿ ಪ್ರಕಾಶ್ (Bhavani Prakash). ಇವರು ಹಲವಾರು ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಅದರಲ್ಲೂ ಹೆಚ್ಚಾಗಿ ವಿಲನ್ ಪಾತ್ರಕ್ಕೆ ಜೀವ ತುಂಬಿದವರು ಇವರು. ಇದೀಗ ಮೊದಲ ಬಾರಿಗೆ ಕಾಮಿಡಿ ಪಾತ್ರ ಮಾಡುತ್ತಿದ್ದಾರೆ. ಅದರಲ್ಲೂ ಸೈ ಎನಿಸಿಕೊಂಡಿದ್ದಾರೆ. 
 

ಭವಾನಿ ಪ್ರಕಾಶ್ ಇಲ್ಲಿವರೆಗೆ ದೊರೆಸಾನಿ, ಕಥೆಯೊಂದು ಶುರುವಾಗಿದೆ, ಅನಾವರಣ, ಹೂಮಳೆ ಧಾರಾವಾಹಿಗಳಲ್ಲೂ ನಟಿಸಿದ್ದರು. ಅಷ್ಟೇ ಅಲ್ಲ ಹಲವು ಸಿನಿಮಾಗಳಿಗೂ ಇವರು ಬಣ್ಣ ಹಚ್ಚಿದ್ದಾರೆ. ಅದರಲ್ಲೂ ಉರ್ವಿ ಸಿನಿಮಾಗೆ ಅತ್ಯುತಮ ಪೋಷಕ ನಟಿಯಾಗಿ ಫಿಲಂ ಫೇರ್ ಅವಾರ್ಡ್ ಕೂಡ ಪಡೆದಿದ್ದಾರೆ. 
 

Latest Videos

click me!