ವೀಕ್ಷಕರ ಎದೆಯಲ್ಲಿ ಕಚಗುಳಿಯಿಟ್ಟ ಗೌತಮ್ - ಭೂಮಿ‌ ರೊಮ್ಯಾಂಟಿಕ್ ಮಾತು...ಬೇಗ ಗುಡ್ ನ್ಯೂಸ್ ಕೊಡಿ ಅಂತಿದ್ದಾರೆ

First Published | Oct 14, 2024, 6:09 PM IST

ಗೌತಮ್ ಮತ್ತು ಭೂಮಿಕಾ ತುಂಬಾನೆ ಮುದ್ದಾನೆ ಜೋಡಿ ಅನ್ನೋದು ಗೊತ್ತಿದೆ, ಇದೀಗ ಇಬ್ಬರ ಪ್ರೀತಿಯ ಸಂಭಾಷಣೆ ಕೇಳಿ ವೀಕ್ಷಕರ ಎದೆಯಲ್ಲಿ ಕಚಗುಳಿ ಇಟ್ಟ ಅನುಭವ ನೀಡಿದೆ. 
 

ಅಮೃತಧಾರೆ ಧಾರಾವಾಹಿಯಲ್ಲಿ (Amruthadhare serial) ಕಳೆದ ಒಂದೆರಡು ತಿಂಗಳಿನಿಂದ, ಮನೆಯ ಸಮಸ್ಯೆಗಳನ್ನು ಸರಿಪಡೆಸೋದ್ರಲ್ಲೆ ಗೌತಮ್ ಭೂಮಿಕಾ ಕಥೆ ಕಳೆದು ಹೋಗಿತ್ತು. ಮೊದಲಿಗೆ ಪಾರ್ಥ ಮತ್ತು ಅಪೇಕ್ಷಾ ಮದುವೆ ವಿಚಾರದಲ್ಲಿ ಅತ್ತೆ ಮತ್ತು ಸೊಸೆ ನಡುವೆ ಮೌನ ಸಮರ ನಡೆದು, ಎಲ್ಲಾ ಕಡೆಯಿಂದಲೂ ಭೂಮಿಕಾ ಸಿಕ್ಕಿಹಾಕಿಕೊಳ್ಳುವ ಸ್ಥಿತಿ ಬಂದಿತ್ತು, ಕೊನೆಗೆ ಅಪ್ಪಿ- ಪಾರ್ಥ ಮದ್ವೆನೂ ಆಗಿ, ಇದೀಗ ಅಪೇಕ್ಷಾ ದ್ವೇಷಕ್ಕೆ ಭೂಮಿಕಾ ಬಲಿಯಾಗಿದ್ದಾಳೆ. 
 

ಇದಾಗಿ ಸ್ವಲ್ಪ ಸಮಯದಲ್ಲೇ ಜೈದೇವನ ಒಂದೊಂದೇ ಮುಖವಾಡ ಕಳಚಿ ಬೀಳೋದಕ್ಕೆ ಶುರುವಾಗಿತ್ತು. ಮೊದಲಿಗೆ ಪಾರ್ಥ- ಅಪೇಕ್ಷಾರ ಕೊಲೆಗೆ ಸಂಚು, ಅದನ್ನ ಅರಿತ ಆನಂದ್ ನನ್ನು ಕೊಲೆ ಮಾಡೋದಕ್ಕೆ ಸಂಚು, ಭೂಮಿಕಾ ಕಿಡ್ನಾಪ್ ಸಂಚು, ಮಲ್ಲಿಯ ಕೊಲೆ ಪ್ರಯತ್ನ, ದಿಯಾ ಜೊತೆ ಅಫೇರ್.. ಇದೆಲ್ಲದರ ನಡುವೆ ಭೂಮಿ ಮತ್ತು ಡುಮ್ಮ ಸರ್ ನಡುವಿನ ರೊಮ್ಯಾನ್ಸ್ ಕಡಿಮೆಯೇ ಆಗಿತ್ತು. 
 

Tap to resize

ಇದೀಗ ಎಲ್ಲಾ ಒಂದು ಹಂತಕ್ಕೆ ಬಂದಿತ್ತು, ಇದೀಗ ಮತ್ತೆ ಭೂಮಿಕಾ -ಗೌತಮ್ ರೊಮ್ಯಾಂಟಿಕ್ ಮಾತುಗಳನ್ನ ಕೇಳಿ ವೀಕ್ಷಕರ ಎದೆಯಲ್ಲಿ ಕಚಗುಳಿಯುಟ್ಟ ಅನುಭವ ಆಗಿದೆ. ಪ್ರಭುದ್ಧ ಜೋಡಿಗಳ ಮುದ್ದು ಮುದ್ದು ಮಾತುಗಳು, ಅವರ ಆ ರೊಮ್ಯಾಂಟಿಕ್ ಕ್ಷಣ, ಇಬ್ಬರ ಅಮೋಘ ಅಭಿನಯ ನೋಡಿ ಗಂಡ ಹೆಂಡ್ತಿ ಅಂದ್ರೆ ಹೀಗೆ ಇರಬೇಕು ಅಂತಿದ್ದಾರೆ ಜನ. 
 

ಮಲಗಿರುವ ಗಂಡನ ಮುದ್ದಾದ ಮುಖ ನೋಡಿ ಕಳೆದು ಹೋಗಿರುವ ಭೂಮಿಕಾ, ಎಷ್ಟು ಮುದ್ದಾಗಿದ್ದೀರಾ? ಆಪಲ್ ತರ ಇದ್ದೀರಾ, ಕಚ್ಚಿ ತಿನ್ಬೇಕು ಅನಿಸ್ತಿದೆ, ಆಪಲ್ ಅಲ್ಲ, ಗುಲಾಬ್ ಜಾಮೂನ್, ರಸಗುಲ್ಲ, ರಸಮಲೈ, ಬಾದೂಶಾ, ಮೈಸೂರ್ ಪಾಕ್ ಹೀಗೆ ಸ್ವೀಟ್ ಅಂಗಡಿಯ ಐಟಂಗಳನ್ನೆಲ್ಲಾ ಹೇಳುತ್ತಾ ಭೂಮಿಕಾ ಕಳೆದು ಹೋದ್ರೆ, ಎಲ್ಲಾ ಕೇಳಿಸ್ಕೊಂಡು ನಿದ್ರಿಸುತ್ತಿರುವಂತೆ ನಟಿಸೋ ಗೌತಮ್, ತನ್ನ ತುಂಟತನದಿಂದ ಭೂಮಿಕಾನ ಕಾಡ್ತಾನೆ, ಇದನ್ನ ನೋಡೋದೆ ವೀಕ್ಷಕರ ಕಣ್ಣಿಗೆ ಹಬ್ಬವಾಗಿದೆ. 
 

ಎಷ್ಟೋ ಸಮಯದ ನಂತ್ರ ಭೂಮಿಕಾ- ಗೌತಮ್ (Goutham and Bhumika) ರನ್ನು ಈ ರೀತಿ ನೋಡಿದ ಜನರು ನೀವಿಬ್ಬರೂ ಯಾವಾಗ್ಲೂ ಹೀಗೆ ಇರಿ.  ಭೂ ಎಷ್ಟು ಹೊಗುಳ್ತಾ ಇದ್ದೀಯಾ ಡುಮ್ಮ ಸರ್ ನ , ಅಯ್ಯೋ ನಮ್ಗೆ ನಾಚಿಕೆ ಆಗುತ್ತೆ. ಪರಕಾಯ ಪ್ರವೇಶ ಮಾಡಿ ನಟನೆ ಮಾಡ್ತಿಯಾ ಭೂ ಹ್ಯಾಟ್ಸ್ ಆಫ್ ಅಂತಾನೂ ಜನ ಕಾಮೆಂಟ್ ಮಾಡಿದ್ದಾರೆ. ಅಷ್ಟೇ ಅಲ್ಲ, ತುಂಬಾ ದಿನದ ನಂತ್ರ ಇಂತಹ ಮುದ್ದಾದ ಸೀನ್ ಕ್ರಿಯೇಟ್ ಮಾಡಿದ್ದಕ್ಕೆ ಥ್ಯಾಂಕ್ಯೂ ಡೈರೆಕ್ಟರ್, ಆ ಗೂಬೆ ಜಯದೇವನಿಂದ ನಿಮ್ಮಿಬ್ಬರ ಮುಖದಲ್ಲಿ ನಗು ನೋಡಿ ಎಷ್ಟೋ ವರ್ಷ ಆಗಿತ್ತು ಅನಿಸಿತ್ತು, ಈಗ ಎಷ್ಟು ಖುಷಿ ಆಗ್ತಿದೆ ಅಂದ್ರೆ ಹೇಳಕ್ಕಾಗಲ್ಲ ಅಂತಾನೂ ಹೇಳಿದ್ದಾರೆ. 
 

ನಿಜವಾಗ್ಲೂ ನಿಮ್ಮಿಬ್ಬರನ್ನ ನೋಡ್ತಾ ಇದ್ರೆ ಖುಷಿ ಕಾರಂಜಿ ತರ ಚಿಮ್ಮುತ್ತೆ. ಹಾರ್ಟ್ ಬೀಟ್ ಏರುಪೇರಾಗುತ್ತೆ , ಸಮಯ ನಿಂತ ನೀರಾಗುತ್ತೆ , ನಿಮ್ಮಿಬ್ಬರ ಆಕ್ಟಿಂಗ್ , ಆ ಬಿಜಿಎಂ, ಆ ಡೈಲಾಗ್ ಎಲ್ಲಾ ಸೇರಿ ನಿಜಕ್ಕೂ ಮ್ಯಾಜಿಕ್ ಮಾಡ್ಬಿಟ್ಟಿದೀರಾ. ನಿಮಗಿಂತ ಅದ್ಭುತವಾದ ಜೋಡಿ ಇಲ್ಲ ಅಂತ ಮತ್ತೆ ಪ್ರೂವ್ ಮಾಡ್ಬಿಟ್ಟಿದೀರ . ಅಮೇಜಿಂಗ್ ಜೋಡಿ ನೀವು ಅಂತ ಹಾಡಿ ಹೊಗಳಿದ್ದಾರೆ ಜನ. 
 

ಅಷ್ಟೇ ಅಲ್ಲ ಈ ವರ್ಷದ ಬೆಸ್ಟ್ ಜೋಡಿ ಅವಾರ್ಡ್ ಇವ್ರಿಗೆ ಕೊಡ್ಬೇಕು. ಯಾವ್ ಸೀರಿಯಲ್ ಅಲ್ಲೂ ಇಷ್ಟ್ ಚೆನ್ನಾಗಿರೋ ಜೋಡಿ, ಒಳ್ಳೆ ಮನಸಿರೋರು ಯಾರು ಇಲ್ಲ. ಬೆಸ್ಟ್ ಜೋಡಿ ಇವರು. ಜೀವನದಲ್ಲಿ ಗಂಡ ಹೆಂಡತಿ ನಡುವೆ ಅನ್ಯೋನ್ಯತೆ ಅಂದರೆ ಹೀಗೆ ಇರಬೇಕು, ಮುದ್ದು ಜೋಡಿಗೆ ಯಾರ ದೃಷ್ಟಿಯೂ ಬೀಳದಿರಲಿ ಎಂದು ಹಾರೈಸಿದ್ದಾರೆ. ಅಷ್ಟೇ ಅಲ್ಲ  ಗೌತಮ್ ಮತ್ತು ಭೂಮಿಕಾ ಯಾವಾಗ ಅಪ್ಪ ಆಗಿ ಗುಡ್ ನ್ಯೂಸ್ ಕೊಡ್ತೀರಾ ಅಂತಾನೂ ಕೇಳಿದ್ದಾರೆ. 
 

Latest Videos

click me!