ಮೇಕಪ್ ಮಾಡದೇ ಇದ್ರೂ ಅಪ್ಪಟ ದೇವತೆ… ಮೋಕ್ಷಿತಾ ಗುಣ, ಅಂದಕ್ಕೆ ವೀಕ್ಷಕರು ಫಿದಾ.. ಹೊಸ ಕ್ರಶ್ ಆದ್ರು ಪಾರು!

Published : Oct 04, 2024, 05:12 PM ISTUpdated : Oct 04, 2024, 06:36 PM IST

ಬಿಗ್ ಬಾಸ್ ಸೀಸನ್ 11 ಜಗಳ, ಗುದ್ದಾಟಗಳಿಂದಲೇ ಸದ್ದು ಮಾಡ್ತಿರೋ ನಡುವೆ ಕಿರುತೆರೆ ನಟಿ ಮೋಕ್ಷಿತಾ ಪೈ ಅಂದಕ್ಕೆ ಗುಣಕ್ಕೆ ವೀಕ್ಷಕರು ಫಿದಾ ಆಗಿದ್ದಾರೆ, ಹೊಸ ಕ್ರಶ್ ಸಿಕ್ರು ಅಂತಿದ್ದಾರೆ.   

PREV
17
ಮೇಕಪ್ ಮಾಡದೇ ಇದ್ರೂ ಅಪ್ಪಟ ದೇವತೆ… ಮೋಕ್ಷಿತಾ ಗುಣ, ಅಂದಕ್ಕೆ ವೀಕ್ಷಕರು ಫಿದಾ.. ಹೊಸ ಕ್ರಶ್ ಆದ್ರು ಪಾರು!

ಝೀಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿದ್ದ ಪಾರು ಸೀರಿಯಲ್ ನಲ್ಲಿ ನಾಯಕಿ ಪಾರ್ವತಿ ಆಲಿಯಾಸ್ ಪಾರು ಆಗಿ ಗುರುತಿಸಿಕೊಂಡ ಮುದ್ದು ಮುಖದ ಚೆಲುವೆ ಮೋಕ್ಷಿತಾ ಪೈ. ಮೋಕ್ಷಿತಾ ಸೀರಿಯಲ್ ನಲ್ಲಿ ಎಷ್ಟು ಮುಗ್ಧೆಯಾಗಿ ಕಾಣಿಸಿಕೊಂಡಿದ್ದರೋ ನಿಜ ಜೀವನದಲ್ಲಿ ಕೂಡ ಅಷ್ಟೇ ಮುಗ್ಧ ಮತ್ತು ಮುದ್ದು ಮನಸ್ಸಿನ ಹುಡುಗಿ. 
 

27

ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವ್ ಕಾಮೆಂಟ್, ಟ್ರೋಲ್ ಆಗದೇ ಇರೋ ಒಬ್ಬ ನಟಿ ಅಂದ್ರೆ ಅದು ಮೋಕ್ಷಿತಾ ಪೈ (Mokshitha Pai) ಇರಬೇಕು. ಯಾಕಂದ್ರೆ ನೀವೇ ಇವರ ಸೋಶಿಯಲ್ ಮೀಡಿಯಾ ಚೆಕ್ ಮಾಡಬಹುದು, ಎಲ್ಲೂ ಇವರ ಬಗ್ಗೆ ಒಂದೇ ಒಂದು ನೆಗೆಟಿವ್ ಕಾಮೆಂಟ್ ಕಾಣೋದಿಲ್ಲ. ಅದರಲ್ಲೂ ಇವರು ತಮ್ಮ ಸಹೋದರ ಕಾಳಜಿ ವಹಿಸುವ ಬಗೆ, ಅವನ ಮೇಲಿನ ಪ್ರೀತಿ ನೋಡಿ ಇವರೊಬ್ಬ ಸ್ಟ್ರಾಂಗ್ ವುಮೆನ್ ಅನ್ನೋದು ಈಗಾಗಲೇ ಜನರಿಗೆ ಗೊತ್ತಾಗಿದೆ. 

37

ಪಾರು ಸೀರಿಯಲ್ (Paaru serial) ಬಳಿಕ ಮೋಕ್ಷಿತಾರನ್ನು ಮತ್ತೊಂದು ಸೀರಿಯಲ್, ಸಿನಿಮಾದಲ್ಲಿ ನೋಡಲು ಅಭಿಮಾನಿಗಳು ಕಾಯುತ್ತಿದ್ದರು. ಇದೀಗ ಮೋಕ್ಷಿತಾ ಪೈ ಬಿಗ್ ಬಾಸ್ ಸೀಸನ್ 11ಕ್ಕೆ ಎಂಟ್ರಿ ಕೊಟ್ಟಿದ್ದು, ಈಗಾಗಲೇ ಬಿಗ್ ಬಾಸ್ ಆರಂಭವಾಗಿ 5 ದಿನವಾಗಿದೆ. ಅಷ್ಟರಲ್ಲಿ ಏನೇನು ನಡೆದು ಹೋಗಿದೆ ಅನ್ನೋದು ಗೊತ್ತಾಗಿದೆ. 
 

47

ಬಿಗ್ ಬಾಸ್ (Bigg Boss Season 11) ಆರಂಭವಾದ ಮೊದಲ ದಿನವೇ ಬಿಗ್ ಬಾಸ್ ನಲ್ಲಿ ಜಗಳ, ಮಾತಿಗೆ ಮಾತು, ಮಾತಿ ಭರಾಟೆ, ಗಲಾಟೆ ಎಲ್ಲವೂ ನಡೆದಿದೆ. ಇವೆಲ್ಲದರ ನಡುವೆ ಮೋಕ್ಷಿತಾ ಪೈ, ಅಂದ, ಚೆಂದ ಮತ್ತು ಗುಣಗಳಾ ಬಗ್ಗೆ ಹೊರಗಡೆ ಸಿಕ್ಕಾಪಟ್ಟೆ ಜನ ಮಾತನಾಡಿಕೊಳ್ಳುತ್ತಿದ್ದಾರೆ. 
 

57

ಬಿಗ್ ಬಾಸ್ ಆರಂಭವಾದಾಗಿನಿಂದ ಮೋಕ್ಷಿತಾ ಮೇಕಪ್ ಇಲ್ಲದೇ ಕಾಣಿಸಿಕೊಳ್ಳುತ್ತಿದ್ದು, ಮೇಕಪ್ ಇದ್ರೆ ಮಾತ್ರ ಅಲ್ಲ, ಮೇಕಪ್ ಇಲ್ಲದೇ ಇದ್ರೂ ಹುಡುಗೀರೂ ದೇವತೆ ಥರ ಕಾಣಿಸ್ತಾರೆ ಅನ್ನೋದು ಗೊತ್ತಾಗಿದ್ದೆ ಮೋಕ್ಷಿತಾ ನೋಡಿ, ಈಕೆ ಅಪ್ಸರೆ, ಸುಂದರಿ ಎಂದು ಹೇಳ್ತಿದ್ದಾರೆ ಜನ. 

67

ಮೋಕ್ಷಿತಾ ಆರಂಭದಲ್ಲೇ ನರಕಕ್ಕೆ ಎಂಟ್ರಿಯಾಗಿದ್ದು, ಹಾಗಾಗಿ ಜನ ದಯವಿಟ್ಟು ಈ ಅಪ್ಸರೆಯನ್ನು ಸ್ವರ್ಗಕ್ಕೆ ಕಳುಹಿಸಿ, ನರಕ ಈ ದೇವತೆಗೆ ಹೇಳಿ ಮಾಡಿಸಿದ ಜಾಗ ಅಲ್ವೇ ಅಲ್ಲ ಅಂತಿದ್ದಾರೆ. ಅಷ್ಟೇ ಅಲ ಮೋಕ್ಷಿತಾ ಗುಣಕ್ಕೂ ಜನ ಫಿದಾ ಆಗಿದ್ದು, ಈಕೆ ನಿಜವಾಗಿಯೂ ಕರುಣೆಯ ಪೈರು ಪಾರುನೇ ಅಂತ ಹೇಳ್ತಿದ್ದಾರೆ. 

77

ವೀಕ್ಷಕರು ಅದರಲ್ಲೂ ಹುಡುಗರಂತೂ ಮೋಕ್ಷಿತಾ ನಮ್ಮ ಹೊಸ ಕ್ರಶ್ ಆಗ್ಬಿಟ್ಟಿದ್ದಾಳೆ, ತುಂಬಾನೆ ಒಳ್ಳೆ ಹುಡುಗಿ, ಜಗಳ ಇಲ್ಲ, ಓವರ್ ಆಗಿ ಆಡೋದು ಇಲ್ಲ. ಆಟ ಬಂದ್ರೆ ಚೆನ್ನಾಗಿ ಆಡ್ತಾರೆ, ಇವರು ಗೆದ್ದು ಬಂದ್ರೆ ನಮಗೆ ಖುಷಿ, ಇವರಿಗೆ ಓಟ್ ಮಾಡಿ ಗೆಲ್ಲಿಸೋದು ನಮಗೆ ಖುಷಿ ಅಂತಿದ್ದಾರೆ ಜನ. 

Read more Photos on
click me!

Recommended Stories