ಜೈದೇವ್ ಪಾಪದ ಕೊಡ ತುಂಬಿದೆ… ಎಲ್ಲಾ ಕಡೆಯಿಂದಲೂ ಲಾಕ್ ಆದ ಜೆಡಿ… ಇನ್ನು ಜೈಲೇ ಗತಿ!

First Published | Oct 4, 2024, 4:09 PM IST

ಅಮೃತಧಾರೆ ಧಾರಾವಾಹಿಯಲ್ಲಿ ಜೈ ದೇವ್ ರಿಯಲ್ ಫೇಸ್ ಒಂದೊಂದಾಗಿ ಬಿಚ್ಚಿಕೊಳ್ಳುತ್ತಿದ್ದು, ಇಲ್ಲಿವರೆಗೆ ಆತ ಮಾಡಿದ ಎಲ್ಲಾ ಪಾಪಕಾರ್ಯಗಳು ರಿವೀಲ್ ಆಗಿದೆ. ಇನ್ನುಮುಂದೆ ಇದೆ ಜೆಡಿಗೆ ಮಾರಿ ಹಬ್ಬ. 
 

ಅಮೃತಧಾರೆ ಸೀರಿಯಲ್ (Amruthadhare serial) ಕಥೆ ಓಡುತ್ತಿರುವ ಸ್ಪೀಡ್ ನೋಡಿ ವೀಕ್ಷಕರು ಸಖತ್ ಥ್ರಿಲ್ ಆಗಿದ್ದಾರೆ. ಎಲ್ಲಾ ಸೀರಿಯಲ್ ಗಳಂತೆ, ನಿಧಾನವಾಗಿ ಕಥೆ ಸಾಗೋದು, ಸಾಕ್ಷಿ ಕೈ ತಪ್ಪಿ ಹೋಗೋದು ಇದು ಯಾವುದೂ ಆಗದೇ ಎಲ್ಲಾ ಸತ್ಯಗಳು ರಿವೀಲ್ ಆಗ್ತಿರೋದು ವೀಕ್ಷಕರಿಗೆ ಖುಷಿ ಕೊಟ್ಟಿದೆ. ಅದಕ್ಕಾಗಿಯೇ ಜನ ಇಷ್ಟ ಪಟ್ಟು ಅಮೃತಧಾರೆ ಸೀರಿಯಲ್ ನೋಡ್ತಿದ್ದಾರೆ. 
 

ಸದ್ಯ ಆಗಿರೋದು ಏನಂದ್ರೆ ಇಲ್ಲಿವರೆಗೂ ಎಲ್ಲರ ಕಣ್ಣಿಗೆ ಮಣ್ಣೆರಚಿ ಅನ್ಯಾಯದ ಮೇಲೆ ಅನ್ಯಾಯ ಮಾಡ್ತಾ ಬರ್ತಿದ್ದ ಜೈದೇವ್ ಆಲಿಯಾಸ್ ಜೆಡಿ ಮುಖವಾಡ ಒಂದೊಂದಾಗಿ ಕಳಚಿ ಬಿದ್ದಿದೆ. ಭೂಮಿಕಾ, ಮಲ್ಲಿ, ಪಾರ್ಥ, ಆನಂದ್, ಅಪರ್ಣಾ ಎದುರು ಎಲ್ಲವೂ ತೆರೆದುಕೊಂಡಿದೆ. 
 

Tap to resize

ಒಂದೆಡೆ ಪಾರ್ಥನಿಗೆ ಜೈ ದೇವ್ (Jai Dev) ರೂಮಿನಲ್ಲಿ ಫೈಲ್ ಗಾಗಿ ಹುಡುಕಾಡುತ್ತಿದ್ದಾಗ ಜೆಡಿ, ಗೌತಮ್ ದಿವಾನ್ ಕಂಪನಿಗೆ ಮೋಸ ಮಾಡಿ, ಟೆಂಡರ್ ಕದ್ದಿರೋ ವಿಷ್ಯ ಗೊತ್ತಾಗುತ್ತೆ, ಅಲ್ಲದೇ ರೂಮಲ್ಲಿ ಮಫ್ಲರ್ ನೋಡಿ, ಅವತ್ತು ತನ್ನನ್ನು ಕೊಲೆ ಮಾಡೋಕೆ ಬಂದಿರೋದು ಅಣ್ಣ ಜೈದೇವ್ ಅನ್ನೋದು ಪಾರ್ಥನಿಗೆ ಗೊತ್ತಾಗುತ್ತೆ. 
 

ಇನ್ನೊಂದೆಡೆ ಇಲ್ಲಿವರೆಗೆ ತನ್ನ ಆಕ್ಸಿಡೆಂಟ್ ಮಿಸ್ ಆಗಿ ನಡೆದದ್ದು ಎಂದುಕೊಂಡಿದ್ದ ಆನ್ಂದ್ ಗೆ ಈಗ ಅದನ್ನೂ ಕೂಡ ಜೈದೇವ್ ಮಾಡಿಸಿದ್ದು ಅನ್ನೋದು ಗೊತ್ತಾಗುತ್ತೆ. ಮತ್ತೊಂದೆಡೆ ಮಲ್ಲಿಯನ್ನು ಆಸ್ಪತ್ರೆಯಲ್ಲಿ ಕೊಲ್ಲೋದಕ್ಕೆ ಜೈದೇವ್ ಪ್ರಯತ್ನ ಪಟ್ಟಿದ್ದು ಸಹ ಗೊತ್ತಾಗುತ್ತೆ. 
 

ಮಲ್ಲಿ ಕೂಡ ಜೈ ದೇವ್ ನ ನಕಲಿ ಕಾಳಜಿಯನ್ನು ತಿರಸ್ಕರಿಸಿ, ಅವನ ಅಸಲಿ ಮುಖ ಏನು ಅನ್ನೋದನ್ನ ಅವನಿಗೆ ತಿಳಿಸ್ತಾಳೆ. ದಿಯಾ ಜೊತೆಗಿನ ಸಂಬಂಧವನ್ನು ಪ್ರಶ್ನಿಸಿ, ತನ್ನನ್ನ ಪ್ರೀತಿ ಹೆಸರಲ್ಲಿ ಯೂಸ್ ಮಾಡಿರೋದಕ್ಕೆ ಜೈದೇವ್ ಕಾಲರ್ ಹಿಡಿದು ಪ್ರಶ್ನಿಸುತ್ತಾಳೆ. 
 

ಇದೀಗ ಎಲ್ಲರೂ ಸೇರಿ, ಎಲ್ಲಾ ಸಾಕ್ಷಿಗಳನ್ನು ಪಡೆಯಲು ಮುಂದಾಗಿದ್ದು, ಜೊತೆಯಾಗಿ ಸೇರಿನೇ ಗೌತಮ್ ಎದುರು ಜೈದೇವ್ ನ ಮುಖವಾಡವನ್ನು ಕಳಚೋದಕ್ಕೆ ತಯಾರಾಗ್ತಿದ್ದಾರೆ. ಅಂದ್ರೆ ಇಲ್ಲಿವರೆಗೆ ಎಲ್ಲರನ್ನೂ ತನ್ನ ಮಾತುಗಳಿಂದ ನಂಬಿಸಿ, ಎಲ್ಲಾ ಸಂದರ್ಭವನ್ನು ತನಗೆ ಬೇಕಾದಂತೆ ಬದಲಿಸಿ ಆಸ್ಕರ್ ಲೆವೆಲ್ ಗೆ ನಟಿಸುತ್ತಿದ್ದ ಜೈ ದೇವ್ ನ ಎಲ್ಲಾ ಆಟಕ್ಕೂ ಬ್ರೇಕ್ ಬೀಳೋ ಸಮಯ ಬಂದಾಗಿದೆ. ಇನ್ನು ಗೌತಮ್ ಎದುರು ರಿವೀಲ್ ಆಗೋದೊಂದೇ ಬಾಕಿ. 
 

ಆದರೆ ಇನ್ನೊಂದು ಕಡೆ ಭೂಮಿ ನಡೆ ಶಾಕುಂತಾಳಿಗೆ ಅನುಮಾನ ಮೂಡಿಸಿದ್ದು, ಭೂಮಿಕಾ ಏನನ್ನೋ ಮಾಡೋದಕ್ಕೆ ಹೊರಟಿದ್ದಾಳೆ ಅನ್ನೋದು ಗೊತ್ತಾಗುತ್ತೆ. ಇನ್ನು ಎಲ್ಲಾ ಸತ್ಯ ರಿವೀಲ್ ಆಗಿ ಜೈದೇವ್ ಗೆ ಶಿಕ್ಷೆಯಾಗುತ್ತಾ? ಅಥವಾ ಶಾಕುಂತಲಾ ಎಲ್ಲಾದಕ್ಕೂ ಅಡ್ಡಿಯಾಗ್ತಾಳಾ? ಅಥವಾ ಜೈದೇವ್ ಮತ್ತೆ ತಪ್ಪಿಸಿಕೊಳ್ತಾನಾ ಅನ್ನೋದನ್ನ ಕಾದು ನೋಡಬೇಕು. 
 

Latest Videos

click me!