ಭುವಿ - ಹರ್ಷ, ರಂಜನಿ - ಸಾಗರ್ : ಸೋಶಿಯಲ್ ಮೀಡಿಯಾದಲ್ಲಿ ನಡಿತಿದೆ ಯಾವ ಜೋಡಿ ಬೆಸ್ಟ್ ಅನ್ನೋ ಚರ್ಚೆ!

First Published | Sep 5, 2024, 11:54 AM IST

ರಂಜನಿ ರಾಘವನ್ ಇತ್ತೀಚೆಗೆ ತಮ್ಮ ಜೀವನ ಸಂಗಾತಿಯಾಗುವ ಹುಡುಗನ ಫೋಟೊ ಹಂಚಿಕೊಂಡಿದ್ದರು. ಇದಾದ ನಂತರ ಸೋಶಿಯಲ್ ಮೀಡಿಯಾದಲ್ಲಿ ರಂಜನಿ ಮತ್ತು ಸಾಗರ್ ಹಾಗೂ ಭುವಿ ಮತ್ತು ಹರ್ಷ ಜೋಡಿ ಬಗ್ಗೆ ಚರ್ಚೆ ನಡೆಯುತ್ತಿದೆ. 
 

ಪುಟ್ಟ ಗೌರಿಯ ಮದುವೆ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟು, ಕನ್ನಡತಿ ಧಾರಾವಾಹಿ ಮೂಲಕ ಕನ್ನಡಿಗರ ಮನ ಗೆದ್ದ ನಟಿ ಅಂದ್ರೆ ಅದು ರಂಜನಿ ರಾಘವನ್. ತಮ್ಮ ಅದ್ಭುತ ನಟನೆಯ ಮೂಲಕ ವೀಕ್ಷಕರನ್ನು ರಂಜಿಸಿದ ನಟಿ ಇತ್ತೀಚೆಗೆ ಒಂದು ಗುಡ್ ನ್ಯೂಸ್ ಕೊಟ್ಟಿದ್ದರು. 
 

ನಟನೆಯ ಜೊತೆಗೆ ಸಾಹಿತಿಯಾಗಿಯೂ ಗುರುತಿಸಿಕೊಂಡಿರುವ ರಂಜನಿ ರಾಘವನ್ (Ranjani Raghavan), ಈಗಾಗಲೇ ಕಥೆ ಡಬ್ಬಿ ಎನ್ನುವ ಕಥಾ ಸಂಕಲನ ಹಾಗೂ ಸ್ವೈಪ್ ರೈಟ್ ಎನ್ನುವ ಕಥೆಯನ್ನು ಬರೆಯುವ ಮೂಲಕ ಓದುಗರಿಗೂ ಹತ್ತಿರವಾಗಿದ್ದರು. ಮುಂದಿನ ಪುಸ್ತಕ ಯಾವುದು? ಸಿನಿಮಾ ಯಾವುದು? ಎಂದು ಕಾಯುತ್ತಿದ್ದವರಿಗೆ ನಟಿ ಸರ್ಪ್ರೈಸ್ ಕೊಟ್ಟಿದ್ದರು. 

Tap to resize

ಇತ್ತೀಚೆಗೆ ನಟಿ ರಂಜಿನಿ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಬೆಸ್ಟ್ ಫ್ರೆಂಡ್ ಜೀವನ ಸಂಗಾತಿಯಾದ್ರೆ ಚೆನ್ನಾಗಿರುತ್ತೆ, ಅವರು ನಮ್ಮನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರ್ತಾರೆ. ಅರ್ಥ ಮಾಡ್ಕೊಳೊ ಹುಡುಗ ಸಿಕ್ರೆ, ಅದಕ್ಕಿಂತ ಇನ್ನೇನು ಬೇಕು ಜೀವನದಲ್ಲಿ ಎಂದು ಹೇಳಿದ್ದರು. 
 

ರಂಜನಿ ಸಂದರ್ಶನ ಸೋಶಿಯಲ್ ಮಿಡಿಯಾದಲ್ಲಿ (social media) ಸದ್ದು ಮಾಡುತ್ತಿದ್ದಂತೆ, ನಟಿ ತಮ್ಮ ಜೀವನ ಸಂಗಾತಿಯಾಗುವ ಹುಡುಗನ ಜೊತೆಗಿನ ಫೋಟೊವನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡು ನನ್ನ ಹುಡುಗ, ಲೈಫ್ ಪಾರ್ಟ್ನರ್ ಎಂದು ಬರೆದುಕೊಳ್ಳುವ ಮೂಲಕ ಮೊದಲ ಬಾರಿಗೆ ತಮ್ಮ ಬಾಯ್ ಫ್ರೆಂಡ್ ಪರಿಚಯ ಮಾಡಿದ್ದರು. 
 

ಸೋಶಿಯಲ್ ಮೀಡಿಯಾದಲ್ಲಿ ರಂಜನಿ ಫೋಟೊ ಹಾಕುತ್ತಿದ್ದಂತೆ, ಭಾರಿ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಇದಕ್ಕೆ ಕಾರಣ ಏನೆಂದರೆ ಹರ್ಷ -ಭುವಿ (Harsha and Bhuvi) ಜೋಡಿ. ಕನ್ನಡತಿಯ ಹರ್ಷ ಮತ್ತು ಭುವಿ ಜೋಡಿಯನ್ನು ಇಷ್ಟಪಟ್ಟಿದ್ದ ಜನರಿಗೆ ಇದೀಗ, ಸಾಗರ್ ಮತ್ತು ರಂಜನಿ ಜೋಡಿ ಇಷ್ಟವಾಗ್ತಿಲ್ಲ, ಹಾಗಾಗಿ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. 
 

ಕನ್ನಡತಿ ಧಾರಾವಾಹಿ(kannadathi serial)  ಎಷ್ಟೊಂದು ಜನಪ್ರಿಯತೆ ಪಡೆದಿತ್ತು ಅಂದ್ರೆ, ಹರ್ಷ ಮತ್ತು ಭುವಿ ಜೋಡಿಗೆ ಸಾಕಷ್ಟು ಫ್ಯಾನ್ ಪೇಜ್ ಗಳೆ ಸೃಷ್ಟಿಯಾಗಿತ್ತು. ಪ್ರಬುದ್ಧ ಜೋಡಿಗಳಾದ ಹರ್ಷ ಮತ್ತು ಭುವಿ, ನಿಜ ಜೀವನದಲ್ಲೂ ಜೊತೆಯಾಗಿರಬೇಕು ಎಂದು ಕನಸು ಕಂಡವರು ಸಾಕಷ್ಟು ಜನ. ಸೀರಿಯಲ್ ಮುಗಿದು ವರ್ಷಗಳು ಕಳೆದರೂ ಸಹ ಜನರು ಹರ್ಷ -ಭುವಿ ಗುಂಗಿನಿಂದ ಹೊರ ಬಂದಿಲ್ಲ. ಹಾಗಾಗಿ ಹರ್ಷ ಭುವಿ ಜೊತೆಯಾಗ್ಲಿ ಅಂತಾನೆ ಹಾರೈಸ್ತಿದ್ದಾರೆ. 
 

ಇನ್ನು ಕೆಲವರು ರಿಯಲ್ ಮತ್ತು ರೀಲ್ ಲೈಫ್ ಹೋಲಿಕೆ ಮಾಡ್ಬೇಡಿ. ರಂಜನಿ ಆಯ್ಕೆಗೆ ಗೌರವ ನೀಡಿ ಎಂದಿದ್ದಾರೆ, ಅಲ್ಲದೇ ರೀಲ್ ಅಲ್ಲಿ ಹರ್ಷ ಭುವಿ ಜೋಡಿ ಚಂದ ಇರಬಹುದು. ಆದರೆ ಇದು ರಿಯಲ್ ಲೈಫ್ ಆಕೆ ಏನು ಆಯ್ಕೆ ಮಾಡಿದ್ದಾಳೋ, ಅದೇ ಚಂದ, ರಂಜನಿ ಪರ್ಸನಲ್ ಲೈಫ್ ಗೆ ಗೌರವ ಕೊಡಿ ಎಂದಿದ್ದಾರೆ ಜನ. 

Latest Videos

click me!