ಜೀ ಕನ್ನಡದ ಪಾರೂ ಸೀರಿಯಲ್ ಸಹ ಮುಗೀತಾ ಇದೆ, ಕಡೆ ದಿನದ ಶೂಟಿಂಗ್ ಮುಗಿಸಿದ ತಂಡ

First Published | Mar 15, 2024, 5:32 PM IST

ಕಳೆದ ಆರು ವರ್ಷಗಳಿಂದ ಜನಕ್ಕೆ ಮನೋರಂಜನೆ ನೀಡುತ್ತಾ ಬಂದಿರುವ ಪಾರು ಸೀರಿಯಲ್ ಇದೀಗ ಕೊನೆಯ ಹಂತಕ್ಕೆ ಬಂದು ನಿಂತಿದೆ. ಕೊನೆಯ ದಿನದ ಶೂಟಿಂಗ್ ಕ್ಷಣಗಳು ಸೀರಿಯಲ್ ತಂಡ ಹಂಚಿಕೊಂಡಿದೆ. 
 

ಕಿರುತೆರೆಯಲ್ಲಿನ ಜನಪ್ರಿಯ ಸೀರಿಯಲ್ಸ್ ಒಂದರ ಹಿಂದೆ ಒಂದು ಕೊನೆಗೊಳ್ಳುತ್ತಿದೆ. ಕಳೆದ ಆರು ವರ್ಷಗಳಿಂದ ಜನಕ್ಕೆ ಭರಪೂರ ಮನರಂಜನೆ ನೀಡಿ ಜನಪ್ರಿಯತೆ ಗಳಿಸಿದ್ದ ಪಾರು ಸೀರಿಯಲ್ (Paaru serial) ಕೂಡ ಶೀಘ್ರದಲ್ಲೇ ಮುಕ್ತಾಯವಾಗಲಿದೆ. 
 

2018 ರಿಂದ ಆರಂಭವಾಗಿ 2024ರ ತನಕ ಬರೋಬ್ಬರಿ 6 ವರ್ಷಗಳ ಕಾಲ, ಉತ್ತಮ ಕಥೆ, ಚಿತ್ರಕಥೆಯೊಂದಿಗೆ, ಟ್ವಿಸ್ಟ್ ನೀಡುತ್ತಾ ಜನರನ್ನು ರಂಜಿಸುತ್ತಾ ಬಂದಿದ್ದ ಧಾರಾವಾಹಿ ಪಾರು. ಆರು ವರ್ಷಗಳಿಂದಲೂ ತನ್ನ ಕಥೆಯಿಂದ ಜನರನ್ನು ಸೆಳೆಯುತ್ತಲೇ ಬಂದಿದೆ. 
 

Tap to resize

ಮೋಕ್ಷಿತಾ ಪೈ (Mokshitha Pai) ಪಾರು ಪಾತ್ರದಲ್ಲಿ, ವಿನಯ ಪ್ರಸಾದ್ (Vinaya Prasad) ಅಖಿಲಾಂಡೇಶ್ವರಿ ಪಾತ್ರದಲ್ಲಿ ನಟಿಸಿದ ಈ ಧಾರಾವಾಹಿಯಲ್ಲಿ, ಶರತ್ ಪದ್ಮನಾಭ್, ಸಿದ್ಧು ಮೂಲಿಮನಿ, ಎಸ್ ನಾರಾಯಣ್, ಸಿತಾರ, ನಾಗೇಂದ್ರ ಶಾ, ನಾಗೇಶ್, ಪವಿತ್ರಾ ನಾಯ್ಕ್ ಮೊದಲಾದವರು ಈ ಧಾರಾವಾಹಿಯಲ್ಲಿ ನಟಿಸಿದ್ದರು. 
 

ಧಾರಾವಾಹಿ ಮುಗಿಯುವ ಬಗ್ಗೆ ಜೀ ಕನ್ನಡ ತನ್ನ ಸೋಷಿಯಲ್ ಮೀಡಿಯಾ ಪೇಜಿನಲ್ಲಿ ಹೇಳಿ ಕೊಂಡಿತ್ತು. ಈಗ ಸೀರಿಯಲ್ಲ್‌ನಲ್ಲಿ ನಟಿಸುತ್ತಿರುವ ಸಿತಾರ ಅವರು ಸೀರಿಯಲ್ ನ ಕೊನೆಯ ದಿನ ಕೇಕ್ ಕತ್ತರಿಸುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಮಾಹಿತಿ ನೀಡಿದ್ದಾರೆ. 
 

ಪಾರು ಸೀರಿಯಲ್ ನಿನ್ನೆಗೆ ಮುಗಿಯಿತು. ಸೀರಿಯಲ್ ನಟರು, ಟೆಕ್ನೀಶಿಯನ್ ಎಲ್ಲರೂ ಒಂದೇ ಜೇನುಗೂಡಿನಂತೆ ಇದ್ದೆವು. ಪ್ರೇಕ್ಷಕರೇ ನಿಮ್ಮ ಪ್ರೀತಿಯಿಂದ ಇಷ್ಟೇಲ್ಲಾ ಜನಪ್ರಿಯತೆ ಪಡೆಯಲು ಸಾಧ್ಯವಾಯಿತು, ನಿಮಗೆ ಕೋಟಿ ನಮನಗಳು ಎಂದು ಸೋಶಿಯಲ್ ಮೀಡಿಯಾದಲ್ಲಿ (social media) ಬರೆದುಕೊಂಡಿದ್ದಾರೆ. 
 

ಇನ್ನು ಕಥೆಯ ಬಗ್ಗೆ ಹೇಳೋದಾದರೆ ಸೀರಿಯಲ್ ನಲ್ಲಿ ಪಾರು ಮತ್ತು ಜನನಿ ನಡುವೆ ಶತ್ರುತ್ವ ಮೂಡಿದೆ. ಜನನಿ ಮಗು ಹುಟ್ಟುವಾಗಲೇ ಸಾವನ್ನಪ್ಪಿದ್ದು ಪಾರು ತನ್ನ ಮಗುವನ್ನು ಆಕೆಗೆ ನೀಡಿದ್ದಾಳೆ, ಆದರೆ ಆ ವಿಷ್ಯ ಆಕೆಗೂ ಗೊತ್ತಿಲ್ಲ. ತನ್ನ ಮಗು ಪಾರು ಹತ್ತಿರ ಹೋಗದೇ ತನ್ನ ಬಳಿಯೇ ಇರುವಂತೆ ಮಾಡುತ್ತಿದ್ದಾಳೆ ಜನನಿ. ಇದರಿಂದ ಪಾರುಗೆ ನೋವಾಗಿದೆ. 
 

ಅಕ್ಕ ತಂಗಿಯರ ಒಳ ಜಗಳವನ್ನು ಸರಿ ಮಾಡಲು ನಿರ್ಧರಿಸಿರುವ ಅಖಿಲಾಂಡೇಶ್ವರಿ ಜನನಿಗೆ ಬುದ್ಧಿ ಕಲಿಸಲು ಪಾರು ಮಾಡುತ್ತಿರುವ ಮನೆ ಕೆಲಸವನ್ನು ಜನನಿಗೆ ಹಾಗೂ ಜನನಿ ಮಾಡುತ್ತಿರುವ ಆಫೀಸ್ ಜವಾಬ್ಧಾರಿಯನ್ನು ಪಾರು ನೋಡಿಕೊಳ್ಳುವಂತೆ ಮಾಡಿದ್ದಾರೆ. ಮುಂದೆ ಏನಾಗುತ್ತದೆ ಅನ್ನೋದು ಇನ್ನೂ ತಿಳಿದಿಲ್ಲ. 
 

ಅಲ್ಲದೇ ಜನನಿ ಗಂಡ ಪ್ರೀತು ಕೂಡ ಹಲವು ಸಮಯದಿಂದ ಸೀರಿಯಲ್ ನಲ್ಲಿ ಕಾಣಿಸಿಕೊಳ್ಳಲೇ ಇಲ್ಲ.ಇದೀಗ ನೋಡಿದ್ರೆ ಸೀರಿಯಲ್ ಕೊನೆಯ ಎಪಿಸೋಡ್ ಶೂಟಿಂಗ್ ಕೂಡ ನಡೆದು ಹೋಗಿದೆ. ಹಾಗಿದ್ರೆ ಸೀರಿಯಲ್ ನ ಕೊನೆಯ ಎಪಿಸೋಡ್ ಗಳಲ್ಲಿ ಏನು ಟ್ವಿಸ್ಟ್ ಇರಲಿದೆ ಅನ್ನೋದನ್ನು ಕಾದು ನೋಡಬೇಕು. 
 

Latest Videos

click me!