ವೈರಲ್ ಆಗ್ತಿದೆ ಕಮಲಿ -ರಿಷಿ ಫೋಟೋ…. ರಿಯಲ್ ಕಪಲ್ ಆಗಿದ್ರೆ ಇನ್ನೂ ಚೆನ್ನ ಎಂದ ಫ್ಯಾನ್ಸ್

Published : Mar 15, 2024, 04:04 PM IST

ಕಮಲಿ ಸೀರಿಯಲ್ ಮೂಲಕ ಸದ್ದು ಮಾಡಿದ್ದ ಜೋಡಿ ಕಮಲಿ ಮತ್ತು ರಿಷಿ. ಈ ಜೋಡಿಯ ಫೋಟೋ ಇದೀಗ ಮತ್ತೆ ವೈರಲ್ ಆಗ್ತಿದ್ದು, ಜನ ಮತ್ತೆ ಇಬ್ಬರನ್ನು ಜೊತೆಯಾಗಿ ನೋಡಲು ಕಾಯ್ತಿದ್ದಾರೆ.   

PREV
17
ವೈರಲ್ ಆಗ್ತಿದೆ ಕಮಲಿ -ರಿಷಿ ಫೋಟೋ…. ರಿಯಲ್ ಕಪಲ್ ಆಗಿದ್ರೆ ಇನ್ನೂ ಚೆನ್ನ ಎಂದ ಫ್ಯಾನ್ಸ್

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಕಮಲಿ (Kamali). ಗ್ರಾಮದಿಂದ ಬಂದ ಕಮಲಿ, ಬೆಂಗಳೂರಲ್ಲಿ ಕಾಲೇಜು ಓದಲು ಬಂದು, ಅಲ್ಲಿ ಲೆಕ್ಚರರ್ ಆಗಿರುವ ರಿಷಿ ಸರ್ ಪ್ರೀತಿಯಲ್ಲಿ ಬೀಳುವ ಒಂದು ವಿಭಿನ್ನ ಕಥೆ ಇದಾಗಿತ್ತು. 
 

27

ಧಾರಾವಾಹಿಯಲ್ಲಿ ಕಮಲಿಯಾಗಿ ಅಮೂಲ್ಯ ಗೌಡ (Amulya Gowda), ರಿಷಿ ಸರ್ ಆಗಿ ನಿರಂಜನ್ (Niranjan) ನಟಿಸಿದ್ದರು. ಅಲ್ಲದೇ ಈ ಸೀರಿಯಲ್ ನಲ್ಲಿ ಪದ್ಮ ವಾಸಂತಿ, ಚಂದ್ರಕಲ ಮೋಹನ, ಗ್ಯಾಬ್ರಿಯಾಲ್ಲ, ಮೈಕೋ ಮಂಜು, ಯಮುನಾ ಸನ್ನಿಧಿ, ಮೊದಲಾದವರು ನಟಿಸಿದ್ದರು. 
 

37

ವಿಭಿನ್ನ ಕಥೆಯನ್ನು ಹೊಂದಿದ್ದ ಈ ಸೀರಿಯಲ್, ಹಲವು ಟ್ವಿಸ್ಟ್ ಟರ್ನ್ ಗಳನ್ನು ತೆಗೆದುಕೊಂಡು ಕೊನೆಗೂ ರಿಷಿ ಮತ್ತು ಕಮಲಿ ಮದುವೆಯಾಗಿ, ಅಲ್ಲೂ ಹಲವು ಟ್ವಿಸ್ಟ್ ಗಳನ್ನು ನೀಡುವ ಮೂಲಕ ಜನರಿಗೆ ಮತ್ತಷ್ಟು ಕುತೂಹಲ ಹೆಚ್ಚುವಂತೆ ಮಾಡಿತ್ತು. 

47

ಒಟ್ಟಲ್ಲಿ ರಿಷಿ ಸರ್ ನ ಅಪಾರ ಪ್ರೀತಿ, ಕಮಲಿಯ ಮುಗ್ಧತೆ, ಪ್ರೀತಿ ಒಟ್ಟಿಗೆ ಸೇರಿ ಇಬ್ಬರನ್ನೂ (Rishi and Kamali) ಅಂದು ಜನರ ಮೋಸ್ಟ್ ಫೇವರಿಟ್ ಜೋಡಿ ಆಗಿಸಿದ್ದಂತೂ ನಿಜ. ಇಬ್ಬರು ಜನಮೆಚ್ಚಿದ ಜೋಡಿ ಪ್ರಶಸ್ತಿಯನ್ನು ಸಹ ಗೆದ್ದಿದ್ದರು. ಇದೀಗ ಸೀರಿಯಲ್ ಮುಗಿದು ವರ್ಷಗಳ ಬಳಿಕ ಮತ್ತೆ ಇಬ್ಬರ ಫೋಟೋ ವೈರಲ್ ಆಗುತ್ತಿದೆ. 

57

ಕಪ್ಪು ಬಣ್ಣದ ಆಫ್ ಶೋಲ್ಡರ್ ಬ್ಲೌಸ್, ಜೊತೆಗೆ ಸೀರೆ ಧರಿಸಿದ ಕಮಲಿ ಆಲಿಯಾಸ್ ಅಮೂಲ್ಯ ಗೌಡ ಮತ್ತು ಬಿಳಿ ಬಣ್ಣದ ಶರ್ಟ್ ಧರಿಸಿದ ಹೂನಗೆ ಚೆಲ್ಲಿದ ರಿಷಿ ಆಲಿಯಾಸ್ ನಿರಂಜನ್ ಜೋಡಿಯನ್ನು ಮತ್ತೊಮ್ಮೆ ನೋಡಿ ಜನ ಮತ್ತೆ ಇಬ್ಬರನ್ನು ಜೊತೆಯಾಗಿ ನೋಡಲು ಬಯಸುತ್ತಿದ್ದಾರೆ. 

67

ಇಬ್ಬರನ್ನು ಮತ್ತೆ ಜೊತೆಯಾಗಿ ನೋಡಿದ ಜನ ಇಂಥಾ ಮುದ್ದಾದ ಜೋಡಿ ಮತ್ತೊಂದಿಲ್ಲ, ತೆರೆ ಮೇಲಿನ ಬೆಸ್ಟ್ ಜೋಡಿಗಳು ಇವರು. ಇವರು ನಿಜ ಜೀವನದಲ್ಲೂ ಒಂದಾದ್ರೆ ಎಷ್ಟು ಚೆನ್ನಾಗಿರ್ತಿತ್ತು ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. 

77

ಸದ್ಯ ಅಮೂಲ್ಯ ಗೌಡ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಶ್ರೀಗೌರಿ (Shree Gouri) ಸೀರಿಯಲ್ ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದರೆ, ನಿರಂಜನ್ ತೆಲುಗು ಸೀರಿಯಲ್ ಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಇಬ್ಬರನ್ನು ಮತ್ತೆ ಜೊತೆಯಾಗಿ ನೋಡೋ ವೀಕ್ಷಕರ ಆಸೆ ಮಾತ್ರ ಯಾವಾಗ ನೆರವೇರುತ್ತೋ ಗೊತ್ತಿಲ್ಲ. 

Read more Photos on
click me!

Recommended Stories