ತ್ರಿವಿಕ್ರಮ್ - ಮೋಕ್ಷಿತಾ ನಡುವೆ ಶುರುವಾಗಿದೆ ಫೈಟ್… ಪಾರು ಮುಖವಾಡ ಕಳಚಿ ಬಿತ್ತು ಅಂತಿದ್ದಾರೆ ವೀಕ್ಷಕರು!

Published : Oct 29, 2024, 01:35 PM ISTUpdated : Oct 29, 2024, 02:35 PM IST

ಬಿಗ್ ಬಾಸ್ ಮನೆಯಲ್ಲಿ ಇಲ್ಲಿವರೆಗೆ ಶಾಂತವಾಗಿದ್ದ ನಟಿ ಮೋಕ್ಷಿತಾ ಪೈ, ಇದೀಗ ಉಗ್ರ ರೂಪ ತಾಳಿದ್ದು, ತ್ರಿವಿಕ್ರಮ್ ಮೇಲೆ ತಿರುಗಿ ಬಿದ್ದಿದ್ದಾರೆ. ಮೋಕ್ಷಿತಾ ನಿಜವಾದ ಗೋಮುಖ ವ್ಯಾಘ್ರ ಅಂತಿದ್ದಾರೆ ಜನ.   

PREV
16
ತ್ರಿವಿಕ್ರಮ್ - ಮೋಕ್ಷಿತಾ ನಡುವೆ ಶುರುವಾಗಿದೆ ಫೈಟ್… ಪಾರು ಮುಖವಾಡ ಕಳಚಿ ಬಿತ್ತು ಅಂತಿದ್ದಾರೆ ವೀಕ್ಷಕರು!

ಮೋಕ್ಷಿತ ಪೈ (Mokshitha Pai) ಬಿಗ್ ಬಾಸ್ ಮನೆಗೆ ಕಾಲಿಟ್ಟಾಗಿನಿಂದ ಇಲ್ಲಿವರೆಗೂ ತಮ್ಮ ಮೃದು ಸ್ವಭಾವ, ಮೃದುವಾದ ಮಾತುಗಳಿಂದಲೇ ಜನರ ಮನ ಗೆದ್ದಿದ್ದರು. ಇವರು ಕೇವಲ ಸೀರಿಯಲ್ ನಲ್ಲಿ ಮಾತ್ರವಲ್ಲ ನಿಜ ಜೀವನದಲ್ಲೂ ಕರುಣೆಯ ಪೈರು ಪಾರು ಅಂತ ಜನ ಆಡಿಕೊಳ್ಳುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಮೋಕ್ಷಿತಾ ಉಗ್ರ ರೂಪ ತಾಳಿರೋದು ಕಾಣಿಸ್ತಿದೆ. 
 

26

ಮೊನ್ನೆ ತ್ರಿವಿಕ್ರಮ್ ಜೊತೆ ಮಾತಿಗೆ ಮಾತು ಬೆಳೆಸಿದ ಮೋಕ್ಷಿತಾ… ಯಾರು ಕೊನೆ ವಾರದವರೆಗೂ ಇರ್ತಾರೆ ಇರಲ್ಲ ಅನ್ನೋದನ್ನ ನೋಡೋಣ, ಇನ್ನು ಮುಂದೆ ನನ್ನ ಆಟ ಶುರು ಅಂತ ಹೇಳಿದ್ರು. ಇದೀಗ ಕ್ಯಾಪ್ಟನ್ಸಿ ಬಗ್ಗೆ ಮಾತನಾಡುತ್ತಾ, ಮತ್ತೆ ತ್ರಿವಿಕ್ರಮ್ ಮೇಲೆ ತಿರುಗಿ ಬಿದ್ದಿದ್ದಾರೆ ಮೋಕ್ಷಿತಾ. 

36

ಎಲಿಮಿನೇಶನ್ ಟಾಸ್ಕ್ ಬಳಿಕ ನನ್ನನ್ನು ನಾಮಿನೇಟ್ ಮಾಡಿ, ಆಚೆ ಹಾಕಬೇಕು ಅಂತ ಇಲ್ಲಿ ನಾಲ್ಕಾರು ಜನ ಪ್ಲ್ಯಾನ್ ಮಾಡ್ತಿದ್ದಾರೆ. ಈ ಮನೆಯಲ್ಲಿ ಯಾರು ಹತ್ತು ವಾರ ಇರ್ತಾರೆ ಅಂತ ನಾನು ನೋಡ್ತೀನಿ. ನಾವೇನು ಹೊರಗಡೆ ಏನು ಕಡಿದು ಕಟ್ಟೆ ಹಾಕದೇ ಇದ್ದೀವಾ? ತ್ರಿವಿಕ್ರಮ್ ನೀವೊಬ್ಬ ಗೋಮುಖ ವ್ಯಾಘ್ರ ಅಂತ ಹೇಳಿದ್ರು. 

46

ಇದೀಗ ಮತ್ತೆ ದೊಡ್ಮನೆಯಲ್ಲಿ ತ್ರಿವಿಕ್ರಮ್ ಹಾಗೂ ಐಶ್ವರ್ಯಾ (Aishwarya) ಮಧ್ಯೆ ಯಾರಿಗೆ ಕ್ಯಾಪ್ಟನ್ ಆಗಲು ಅರ್ಹತೆ ಇಲ್ಲ ಎನ್ನುವ ಪ್ರಶ್ನೆ ಬಂದಿದ್ದು. ಆಗ ಮೋಕ್ಷಿತಾ ಪೈ, ‘ಕ್ಯಾಪ್ಟನ್ ಆಗಿ ಎಲ್ಲರನ್ನು ಒಂದೇ ರೀತಿ ನೋಡಬೇಕು ಅಂತ ಹೇಳ್ತಾರೆ. ರೂಲ್ ಈಸ್ ಈ ರೂಲ್, ಇವನ್ ಫಾರ್ ಅ ಫೂಲ್ ಅಂತ ಹೇಳ್ತಾರೆ. ಕ್ಯಾಪ್ಟನ್ ಆಗಲು ತ್ರಿವಿಕ್ರಮ್‌ಗೆ(Trivikram) ಅರ್ಹತೆ ಇಲ್ಲ’ ಎಂದಿದ್ದಾರೆ.
 

56

ಮೋಕ್ಷಿತಾ ಪೈ ಬದಲಾದ ಅವತಾರ ಕಂಡು ಅಭಿಮಾನಿಗಳು ಸಹ ಶಾಕ್ ಆಗಿದ್ದು, ಮಂಜನ ತಾಳಕ್ಕೆ ಕುಣಿಯೋ ಗೌತಮಿ ಮೊಕ್ಷಿತ ಬಕೆಟ್, ಈಗ ಮೋಕ್ಷಿತಾ ಅಸಲಿ ಮುಖ ಹೊರಗೆ ಬರ್ತಿದೆ, ಮೋಕ್ಷಿತಾ ಮುಖವಾಡ ಕಳಚುತ್ತಿದೆ ಎಂದಿದ್ದಾರೆ. ಅಷ್ಟೇ ಅಲ್ಲ ನಿಜವಾದ ಗೋಮುಖ ವ್ಯಾಘ್ರ ಮೋಕ್ಷಿತ ಪೈ ಅಂತಾನೂ ಹೇಳ್ತಿದ್ದಾರೆ ಜನ. 
 

66

ಮೋಕ್ಷಿತಾ ಅವರೇ ನಿಮ್ಮ ಮೇಲೆ ನಮಗೆ ಅಪಾರ ಗೌರವ ಇತ್ತು. ಆದ್ರೆ ಹಣಮಂತನಿಗೆ ನೀವು ಮಂಜ ಮತ್ತು ಗೌತಮಿ ಜೊತೆ ಮಾತಾಡೋವಾಗ ಇಲ್ಲಿಗೆ ಬರಬೇಡ ನಾವು ಮಾತಾಡ್ತಿದಿವಿ ಅಂತಾ ಹೇಳಿದ್ರಲ್ಲ ಅದರಲ್ಲಿ ಸ್ವಲ್ಪ ಅಹಂಕಾರ ಕಾಣಿಸ್ತು. ಯಾಕೋ ಸೀರಿಯಲ್ ನಿಂದ ಪಡೆದ ಪ್ರೀತಿ, ದಿನೇ ದಿನೇ ಅಹಂಕಾರವಾಗಿ ಬದಲಾಗುತ್ತಿರೋ ಹಾಗೆ ಕಾಣ್ತಿದೆ, ಒಂದು ವೇಳೆ ಅದು ಅಹಂಕಾರನೇ ಆಗಿದ್ದರೆ ಈ ವಾರ ಮಾನಸ ಅಲ್ಲಾ ಅವಳ ಬದಲು ಮೋಕ್ಷಿತಾ ಹೋಗ್ಬೇಕು ಅಂತಾನೂ ಹೇಳಿದ್ದಾರೆ ಜನ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories