ನೀವಿಲ್ಲದೆ ಅಭಿಮಾನಕ್ಕೆ ಬೆಲೆ ಇಲ್ಲ, ಬದುಕಿಗೆ ಕಳೆ ಇಲ್ಲ …. ಅಪ್ಪು ನೆನೆದು ಅನುಶ್ರೀ ಭಾವುಕ ಪೋಸ್ಟ್

First Published | Oct 29, 2024, 11:19 AM IST

ನಿರೂಪಕಿ ಅನುಶ್ರೀಯವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಗ್ಗೆ ಭಾವುಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. 
 

ಅಭಿಮಾನಿಗಳ ಮಹಾಸಾಗರವನ್ನೇ ಹೊಂದಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Powerstar Puneeth Rakumar) ಅವರ ದೊಡ್ಡ ಅಭಿಮಾನಿಗಳಲ್ಲಿ ನಿರೂಪಕಿ ಅನುಶ್ರೀ ಕೂಡ ಒಬ್ಬರು. ತಮ್ಮ ಪೋಸ್ಟ್ ಗಳ ಮೂಲಕ, ತಮ್ಮ ಮಾತಿನ ಮೂಲಕ ಅನುಶ್ರೀ ಪುನೀತ್ ಬಗ್ಗೆ ತಮಗಿರುವ ಅಭಿಮಾನವನ್ನು ತೋರಿಸುತ್ತಲೇ ಇರುತ್ತಾರೆ. 
 

ಇಂದು ಪುನೀತ್ ರಾಜಕುಮಾರ್ ಅವರ ಮೂರನೇ ವರ್ಷದ ಪುಣ್ಯ ಸ್ಮರಣೆಯ ಹಿನ್ನೆಲೆಯಲ್ಲಿ ಅನುಶ್ರೀ (Anchor Anushree) ಸೋಶಿಯಲ್ ಮೀಡಿಯಾದಲ್ಲಿ ನಗುವಿನ ಒಡೆಯನನ್ನು ನೆನೆದು ಭಾವುಕ ಪೋಸ್ಟ್ ಮಾಡಿದ್ದಾರೆ. ಪವರ್ ಸ್ಟಾರ್ ಹಾಡಿರುವ ಹಾಡಿನ ಸಾಲುಗಳನ್ನು ಬರೆಯುವ ಮೂಲಕ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ ನಿರೂಪಕಿ ಅನುಶ್ರೀ. 
 

Tap to resize

ಅನುಶ್ರೀಯವರು ಪುನೀತ್ ರಾಜ್ ಕುಮಾರ್ ಅವರ ಎಷ್ಟು ದೊಡ್ಡ ಅಭಿಮಾನಿ ಎಂಬುದು ಇಡೀ ಕರುನಾಡಿಗೆ ಗೊತ್ತಿದೆ. ತಮ್ಮ ನಿರೂಪಣೆ ಇರಲಿ, ಇಂಟರ್ವ್ಯೂ ಇರಲಿ, ಅಥವಾ ಏನೇ ನಿದರ್ಶನ ನೀಡುವುದೇ ಆಗಿರಲಿ, ಅನುಶ್ರೀ ಮಾತಿನಲ್ಲಿ ಸದಾ ಪುನೀತ್ ರಾಜಕುಮಾರ್ ಇದ್ದೇ ಇರುತ್ತಾರೆ. ತಮ್ಮ ಸೋಶಿಯಲ್ ಮೀಡಿಯಾದಲ್ಲೂ ಅನುಶ್ರೀ ತಮ್ಮ ಹೆಸರಿನ ಜೊತೆಗೆ ಅಪ್ಪು ಅಭಿಮಾನಿ ಅಂತ ಬರೆದುಕೊಂಡಿದ್ದಾರೆ. 
 

ಇದೀಗ ತಮ್ಮ ಇನ್’ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದು, ನಮ್ಮ ಕಂಗಳ ಬಿಸಿಯ ಹನಿಗಳು ನೂರು ಬಾರಿ ಕೂಗಿದೆ… ನಿಮ್ಮ ನಗುವ ಮೊಗವ ನೋಡಲು ಕೋಟಿ ಕಂಗಳು ಕಾಯುತ್ತಿವೆ…ಮಿಸ್ ಯು ಸರ್ ಎಂದು ಪುನೀತ್ ರಾಜ್ ಕುಮಾರ್ ಅವರ ಹಾಡನ್ನೆ ಅವರಿಗೆ ಅರ್ಪಿಸಿದ್ದಾರೆ. 
 

ಇದರ ಜೊತೆಗೆ ಅನುಶ್ರೀ ನೀವಿಲ್ಲದೇ ಅಭಿಮಾನ ಇಲ್ಲ, ನೀವಿಲ್ಲದ ಅಭಿಮಾನಕ್ಕೆ ಬೆಲೆ ಇಲ್ಲ… ನೀವಿಲ್ಲದ ಬದುಕಿಗೆ ಕಳೆ ಇಲ್ಲ ಎಂದು ಬರೆದುಕೊಂಡು ಕ್ಯಾಪ್ಶನ್ ನಲ್ಲಿ ಲವ್ ಯೂ ಅಪ್ಪು ಸರ್… ಯಾವಾಗ್ಲೂ ನಿಮ್ಮನ್ನ ಮಿಸ್ ಮಾಡಿಕೊಳ್ಳುತ್ತೇವೆ ಎಂದು ಬರೆದಿದ್ದಾರೆ. 
 

ಅನುಶ್ರೀಯವರು ಬರೆದ ಪ್ರತಿಯೊಂದು ಸಾಲಿನಲ್ಲೂ ಅವರ ಮೇಲಿದ್ದ ಅಭಿಮಾನ ಎದ್ದು ಕಾಣುತ್ತದೆ. ಇದು ಕೇವಲ ಅನುಶ್ರೀಯವರ ಮನದ ಮಾತಲ್ಲ, ಪುನೀತ್ ರಾಜ್ ಕುಮಾರ್ ಅವರನ್ನು ಪ್ರೀತಿಸುವ ಪ್ರತಿಯೊಬ್ಬ ಅಭಿಮಾನಿಯ ಮನದ ಮಾತುಗಳು ಇವು. ಇವತ್ತಿಗೂ ಪ್ರತಿಯೊಬ್ಬರೂ ಪವರ್ ಸ್ಟಾರ್ ನ್ನು ಮಿಸ್ ಮಾಡ್ತಿದ್ದಾರೆ. 
 

ಇವತ್ತು ಒಬ್ಬ ವ್ಯಕ್ತಿ ಸತ್ತರೆ, ನಾಳೆಯೇ ಅವರನ್ನು ಮರೆಯುವ ಜನರ ನಡುವೆ, ಪಪರ್ ಸ್ಟಾರ್ ನಮ್ಮನ್ನ ಅಗಲಿ ವರ್ಷ ಮೂರು ಸಂದರೂ ಸಹ ಇಂದಿಗೂ ಪ್ರತಿ ಮನ ಮನದಲ್ಲೂ ಪುನೀತ್ ಹೆಸರು ರಾರಾಜಿಸುತ್ತಿವೆ, ಇಂದಿಗೂ ಪುನೀತ್ ಹೆಸರನ್ನು ಸೆಲೆಬ್ರೇಟ್ ಮಾಡುತ್ತಾರೆ ಜನ. ಇಂದಿಗೂ ಪುನೀತ್ ರಾಜಕುಮಾರ್ ನಗು ಮತ್ತು ಒಳ್ಳೆಯತನವನ್ನ ಕೊಂಡಾಡುತ್ತಾರೆ ಜನ. ಸಣ್ಣ ಪಾಪುವಿನಿಂದ ಹಿಡಿದು, ಹಣ್ಣು ಹಣ್ಣು ಮುದುಕರವರೆಗೂ, ಸೆಲೆಬ್ರೆಟಿಗಳಿಂದ ಹಿಡಿದು, ರಾಜಕಾರಣಿಗಳವರೆಗೂ ಎಲ್ಲರ ಮನಸಲ್ಲೂ ಅಂದಿಗೂ ಇಂದಿಗೂ ಎಂದೆಂದಿಗೂ ಅಪ್ಪು ಅಮರ. 
 

Latest Videos

click me!