ಸಂಗೀತ ಶೃಂಗೇರಿ ಹೊಸ ಲುಕ್‌ ಗೆ ಕ್ಲೀನ್ ಬೌಲ್ಡ್ ಆದ ಹುಡುಗ್ರು... ಕರ್ನಾಟಕದ ಕ್ರಶ್ ಅಂತಿದ್ದಾರೆ

First Published | Oct 29, 2024, 12:31 PM IST

ನಟಿ ಹಾಗೂ ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿ ಸಂಗೀತ ಶೃಂಗೇರಿಯವರ ಹೊಸ ಫೋಟೊ ಶೂಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಫ್ಯಾನ್ಸ್ ಸಿಂಹಿಣಿ ತುಂಬಾನೆ ಕ್ಯೂಟ್ ಅಂತಿದ್ದಾರೆ. 
 

ಬಿಗ್ ಬಾಸ್ ಸೀಸನ್ 10 (Bigg Boss Season 10) ರ ಮೂಲಕ ಭಾರಿ ಸದ್ದು ಮಾಡಿದ ನಟಿ ಅಂದ್ರೆ ಅದು ಸಂಗೀತ ಶೃಂಗೇರಿ. ತಮ್ಮ ನೇರವಾದ ಮಾತು, ಬಿಗ್ ಫೈಟ್, ಕಠಿಣ ಸ್ಪರ್ಧೆ ನೀಡುತ್ತೆ, ಸ್ಟ್ರಾಂಗ್ ಕಂಟೆಸ್ಟಂಟ್ ಆಗಿ ಕೊನೆಯವರೆಗೂ ಉಳಿದುಕೊಂಡಿದ್ದ ಸ್ಪರ್ಧಿ ಅಂದ್ರೆ ಅದು ಸಂಗೀತ ಶೃಂಗೇರಿ. 
 

ಇದೀಗ ಸೀಸನ್ 11 ಆದ್ರೂ ಕೂಡ ಸಂಗೀತ ಕ್ರೇಜ್ ಕಡಿಮೆಯಾಗಿಲ್ಲ. ಈಗ ಸಂಗೀತ (Sangeetha Sringeri) ಅವರ ಒಂದಿಷ್ಟು ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಸ್ಟ್ರೀಟ್ ಫೋಟೊಗ್ರಾಫರ್ ಒಬ್ಬರು ಶೂಟ್ ಮಾಡಿದಂತಹ ಫೋಟೊಗಳು ಇದಾಗಿದ್ದು, ನಟಿ ಸಖತ್ ಸ್ಟೈಲಿಶ್ ಆಗಿ ಕಾಣಿಸುತ್ತಿದ್ದಾರೆ. 
 

Tap to resize

ಸಂಗೀತ ಶೃಂಗೇರಿಯ ಹೊಸ ಲುಕ್ ನೋಡಿ ಫ್ಯಾನ್ಸ್ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಈ ಫೋಟೊಗಳಿಗೆ ಈಗಾಗಲೇ 2 ಲಕ್ಷಕ್ಕೂ ಅಧಿಕ ಲೈಕ್ಸ್ , ಸಾವಿರಾರು ಕಾಮೆಂಟ್ಸ್ ಗಳೂ ಬಂದಿವೆ. ಯಾವಾಗ್ಲೂ ಸಿಂಪಲ್ ಆಗಿ ಕಾಣಿಸಿಕೊಳ್ಳುವ ಸಂಗೀತ ಇಲ್ಲಿ ಮಾಡರ್ನ್ ಆಗಿ ಜೊತೆ ತುಂಬಾನೆ ಸ್ಟೈಲಿಶ್ ಆಗಿ ಕಾಣಿಸುತ್ತಿದ್ದು, ಕಣ್ಣುಗಳಲ್ಲಿ ಆ ಬೋಲ್ಡ್ ನೆಸ್ ಕಾಣಿಸುತ್ತಿದೆ. 
 

ಸಂಗೀತ ಡೆನಿಮ್ ಡಂಗ್ರಿ ಡ್ರೆಸ್ ಧರಿಸಿದ್ದು, ಅದಕ್ಕೆ ಪರ್ಪಲ್ ಬಣ್ಣದ ಟೀ ಶರ್ಟ್ ಧರಿಸಿದ್ದಾರೆ. ಇದರ ಜೊತೆಗೆ ಹೈ ಹೀಲ್ಡ್ ಶೂಸ್ ಧರಿಸಿ, ಎರಡು ಜಡೆ ಕಟ್ಟಿದ್ದು , ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ. ಇವರ ಬೋಲ್ಡ್ ಲುಕ್ ನೋಡಿ ಅಭಿಮಾಮಿಗಳ ಕಾಮೆಂಟ್ ಸುರಿಮಳೆಯೇ ಸುರಿದಿದೆ. 
 

ಸಿಂಹಿಣಿ ಕೂಡಾ ಇಷ್ಟು ಕ್ಯೂಟ್ ಆಗಿ ಕಾಣ್ತದಾ ಮಾರ್ರೆ ಎಂತ ಒಬ್ರು ಹೇಳಿದ್ರೆ, ಮತ್ತೊಬ್ಬರು ತುಂಬಾ ದಿನದಿಂದ ಸಂಗೀತ ಅವರನ್ನ ಈ ರೀತಿಯಾಗಿ ನೋಡಬೇಕು ಅಂದ್ಕೊಂಡಿದ್ವಿ ಫೈನಲೀ ಆ ಆಸೆ ಈಡೇರಿದೆ, ಅಬ್ಬಬ್ಬಾ ಸುಂದರಿ ಕಣೇ ನೀನು... ಲೇಡಿ ಟೈಗರ್ ಕ್ರಶ್ ಆಫ್ ಕರ್ನಾಟಕ (Crush of Karnataka). ಟ್ರೆಂಡಿಂಗ್ ಕ್ವೀನ್ ಅಂತೆಲ್ಲಾ ಕಾಮೆಂಟ್ ಮಾಡಿದ್ದಾರೆ. 
 

ಇನ್ನೂ ಕೆಲವರು ಯಾವ ಮೂವಿಗೆ ರೆಡಿಯಾಗ್ತಿದ್ದೀರಿ ಎಂದು ಕೇಳಿದ್ದಾರೆ,  ಪಕ್ಕಾ ದೃಷ್ಟಿಯಾಗುತ್ತೆ, ಅಮ್ಮನಿಗೆ ಹೇಳಿ ದೃಷ್ಟಿ ತೆಗೆಸಿಕೊಳ್ಳೋದು ಒಳ್ಳೇದು ಅಂತಾನೂ ಹೇಳಿದ್ದಾರೆ. ಮತ್ತೊಬ್ಬರು ಎವ್ವ ನಿನ್ನ ಅವತಾರ್ ನೋಡ್ಕೋ....ನಮ್ಮ ಸಂಸ್ಕೃತಿ ಹಾಳ್ ಮಾಡ್ಬೇಡ  ಅಂತಾ ಬುದ್ದೀನು ಹೇಳಿದ್ದಾರೆ. 
 

ಬಿಗ್ ಬಾಸ್ ನಿಂದ ಹೊರಗೆ ಬಂದ ಮೇಲೆ ಸಂಗೀತ ಒಂದು ಸಿನಿಮಾ ಬಿಡುಗಡೆಯಾಗಿತ್ತು, ಅದು ದಿಗಂತ್ ಜೊತೆಗಿನ ಮಾರಿಗೋಲ್ಡ್. ಸದ್ಯ ಸಂಗೀತಾ ಧ್ಯಾನ. ಯೋಗ, ಮೆಡಿಟೇಷನ್ ಅಂತ ಬ್ಯುಸಿಯಾಗಿದ್ದಾರೆ. ಅಷ್ಟೇ ಅಲ್ಲ ಕ್ರಿಸ್ಟಲ್ ಗಳನ್ನು ಮಾರಾಟ ಮಾಡಲು ಸಿಂಹಿಣಿ ಬೈ ಸಂಗೀತ ಎನ್ನುವ ಆನ್ ಲೈನ್ ಸ್ಟೋರ್ ಕೂಡ ತೆರೆದಿದ್ದಾರೆ. 
 

Latest Videos

click me!