ಕನ್ನಡ ಕಿರುತೆರೆ ನಟಿ ಜ್ಯೋತಿ ರೈ, ಸದ್ಯ ತೆಲುಗಿನಲ್ಲಿ ಸಖತ್ ಸೌಂಡ್ ಮಾಡ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು ಪೋಸ್ಟ್ ಮಾಡಿರುವ ನಟಿ ದುಬಾರಿ ಕಾರಿನ ಮುಂದೆ ನಿಂತು ಆಟಿಟ್ಯೂಡ್ ತೋರಿಸುತ್ತಾ ನಿಂತಿದ್ದಾರೆ. ಇದನ್ನ ನೋಡಿ ಪಡ್ಡೆಗಳು ಏನಂದ್ರು ನೋಡಿ.
ಕನ್ನಡ ಕಿರುತೆರೆಯಲ್ಲಿ ಒಂದು ಕಾಲದಲ್ಲಿ ಸೂಪರ್ ಹಿಟ್ ಸೀರಿಯಲ್ ಗಳಲ್ಲಿ ನಾಯಕಿಯಾಗಿ ಮಿಂಚಿ, ಇದೀಗ ತೆಲುಗು ಚಿತ್ರರಂಗದಲ್ಲಿ ಸೂಪರ್ ಹೀರೋ ನಾಯಕಿಯಾಗಿ ಮಿಂಚುತ್ತಿರುವ ನಟಿ ಜ್ಯೋತಿ ರೈ (Jyothi Rai) ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೊಗಳನ್ನು ಶೇರ್ ಮಾಡಿದ್ದಾರೆ.
26
ದುಬಾರಿ ಕಾರಿನ ಮುಂದೆ ಜ್ಯೋತಿ ರೈ
ಜ್ಯೋತಿ ರೈ ದುಬಾರಿ ಆಡಿ ಕಾರಿನ ಮುಂದೆ ನಿಂತು ಪೋಸ್ ಮಾಡಿದ್ದು, ಇದರ ಜೊತೆಗೆ Parked the car, but the attitude’s still in motion ಎಂದು ಕ್ಯಾಪ್ಶನ್ ಹಾಕಿದ್ದಾರೆ. ಕೆಂಪು ಟೀ ಶರ್ಟ್ ಮತ್ತು ಜೀನ್ಸ್ ಧರಿಸಿ ಕಾರಿನ ಮುಂದೆ ಸ್ಟೈಲ್ ಆಗಿ ನಿಂತಿದ್ದಾರೆ.
36
ಜ್ಯೋತಿ ಪರ್ಫೆಕ್ಟ್ ಫಿಗರ್ ಮೇಲೆ ಪಡ್ಡೆಗಳ ಕಣ್ಣು
ಜ್ಯೋತಿ ರೈ, ಜೀನ್ಸ್ ಟಾಪಲ್ಲಿ ಸಖತ್ ಕ್ಯೂಟ್ ಆಗಿ ಕಾಣಿಸುತ್ತಿದ್ದು, ಜೊತೆಗೆ ನಟಿಯ ಪರ್ಫೆಕ್ಟ್ ಫಿಗರ್ ನೋಡಿ ಪಡ್ಡೆಗಳು ಕಾಮೆಂಟ್ ಸೆಕ್ಷನ್ ಪೂರ್ತಿ ಹೊಗಳಿಕೆಯ ಮಾತುಗಳನ್ನೇ ಆಡಿದ್ದಾರೆ. ನಿಮ್ಮನ್ನು ನೋಡೋದ ಅಥವಾ ಕಾರನ್ನು ನೋಡೋದ ಗೊತ್ತಾಗ್ತಿಲ್ಲ ಎಂದಿದ್ದಾರೆ.
ಜ್ಯೋತಿ ರೈ ಅನುರಾಗ ಸಂಗಮ, ಜೋಗುಳ, ಗೆಜ್ಜೆಪೂಜೆ, ಲವಲವಿಕೆ, ಕನ್ಯಾದಾನ, ಗೆಜ್ಜೆಪೂಜೆ, ಪ್ರೇರಣಾ, ಕಿನ್ನರಿ, ಮೂರು ಗಂಟು, ಕಸ್ತೂರಿ ನಿವಾಸ ಸೇರಿ 18ಕ್ಕೂ ಹೆಚ್ಚು ಕನ್ನಡದ ಧಾರಾವಾಹಿಗಳಲ್ಲಿ ನಟಿಸಿ ಕನ್ನಡಿಗರ ಮನ ಗೆದ್ದಿದ್ದರು. ಇದರ ಜೊತೆಗೆ ತೆಲುಗು ಸೀರಿಯಲ್ ನಲ್ಲೂ ನಟಿಸಿದ್ದರು.
56
ತೆಲುಗು ವೆಬ್ ಸೀರೀಸ್
ತೆಲುಗು ನಿರ್ದೇಶಕ ಪೂರ್ವಜ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಜ್ಯೋತಿ ರೈ ತೆಲುಗು ವೆಬ್ ಸೀರೀಸ್ ಹಾಗೂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವೆಬ್ ಸೀರೀಸ್ ಗಳಲ್ಲಿ (web series) ಸಖತ್ ಬೋಲ್ಡ್ ಆಗಿ ನಟಿಸುವ ಮೂಲಕ ಅಚ್ಚರಿ ಮೂಡಿಸಿದ್ದರು.
66
ತೆಲುಗು ಸಿನಿಮಾಗಳು
ಜ್ಯೋತಿ ರೈ ಕಿಲ್ಲರ್ ಸಿನಿಮಾದಲ್ಲಿ ಸೂಪರ್ ವುಮೆನ್ ಆಗಿ ನಟಿಸಿದ್ದು, ಈ ಸಿನಿಮಾದ ಅವರ ಬೋಲ್ಡ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇದೀಗ ಗಂಡನ ಸಿನಿಮಾದಲ್ಲೂ ಸಹ ಜ್ಯೋತಿ ರೈ ನಟಿಸಿದ್ದಾರೆ.