Reels ಲೋಕದಲ್ಲಿ ಕಿಚ್ಚು ಹಚ್ಚಿದ ನಿವೇದಿತಾ ಗೌಡ-ಕಿಶನ್ ಜೋಡಿ: ವೈರಲ್ ಆಯ್ತು ರೊಮ್ಯಾಂಟಿಕ್ ಡ್ಯಾನ್ಸ್!

Published : Jun 18, 2026, 09:20 PM IST

Social Media Viral Video: ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿರುವ 'ಹೇ ನವಿಲೇ' ರೀಲ್ಸ್‌ನಲ್ಲಿ ನಿವೇದಿತಾ ಗೌಡ ಮತ್ತು ಕಿಶನ್ ಬಿಲಗಲಿ ಮನಮೋಹಕ ಹೆಜ್ಜೆ ಹಾಕಿದ್ದು, ಪ್ರೇಕ್ಷಕರ ಗಮನ ಸೆಳೆದಿದ್ದಾರೆ.

PREV
16
ಸಾಕಷ್ಟು ಜನಪ್ರಿಯತೆ

ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ಡ್ಯಾನ್ಸರ್ ಕಿಶನ್ ಬಿಲಗಲಿ ತಮ್ಮ ವಿಭಿನ್ನ ಡ್ಯಾನ್ಸ್ ರೀಲ್ಸ್‌ಗಳ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ.

26
ರೊಮ್ಯಾಂಟಿಕ್ ಹಾಡುಗಳಿಗೆ ಹೆಜ್ಜೆ

ನಟಿಯರೊಂದಿಗೆ ರೊಮ್ಯಾಂಟಿಕ್ ಹಾಡುಗಳಿಗೆ ಹೆಜ್ಜೆ ಹಾಕುವ ಮೂಲಕ ಯುವಜನರ ಮೆಚ್ಚುಗೆ ಪಡೆದಿರುವ ಕಿಶನ್, ಇದೀಗ ನಿವೇದಿತಾ ಗೌಡ ಜೊತೆಗಿನ ಹೊಸ ರೀಲ್ಸ್ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.

36
ವಿಶೇಷ ಲುಕ್‌

'ಹೇ... ನವಿಲೇ' ಹಾಡಿಗೆ ನಿವೇದಿತಾ ಗೌಡ ಮತ್ತು ಕಿಶನ್ ಬಿಲಗಲಿ ಜೋಡಿಯಾಗಿ ಮನಮೋಹಕ ಹೆಜ್ಜೆ ಹಾಕಿದ್ದಾರೆ. ನವಿಲಿನ ಥೀಮ್ ಆಧಾರಿತ ಈ ವಿಡಿಯೋದಲ್ಲಿ ಇಬ್ಬರೂ ವಿಶೇಷ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಪ್ರೇಕ್ಷಕರ ಗಮನ ಸೆಳೆದಿದ್ದಾರೆ.

46
ನೆಟ್ಟಿಗರಿಂದ ಭಾರೀ ಮೆಚ್ಚುಗೆ

ನವಿಲುಗರಿಯಿಂದ ಪ್ರೇರಿತವಾದ ಕಾಸ್ಟ್ಯೂಮ್‌ನಲ್ಲಿ ನಿವೇದಿತಾ ಮಿಂಚಿದರೆ, ಕಿಶನ್ ಕೂಡ ನವಿಲಿನ ಬಣ್ಣಗಳ ಶೈಲಿಯಲ್ಲೇ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ. ಸರಳವಾದರೂ ಆಕರ್ಷಕ ನೃತ್ಯ ಸಂಯೋಜನೆಯೊಂದಿಗೆ ಮೂಡಿಬಂದಿರುವ ಈ ರೀಲ್ಸ್‌ಗೆ ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

56
ಲಕ್ಷಾಂತರ ವೀಕ್ಷಣೆ

ಅಪ್‌ಲೋಡ್ ಆದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿರುವ ವಿಡಿಯೋಗೆ ಸಾವಿರಾರು ಲೈಕ್ಸ್ ಹಾಗೂ ಕಾಮೆಂಟ್‌ಗಳು ಹರಿದುಬಂದಿವೆ. ಕಾಮೆಂಟ್ ವಿಭಾಗದಲ್ಲಿ ಫೈರ್ ಹಾಗೂ ಹಾರ್ಟ್ ಇಮೋಜಿಗಳ ಸುರಿಮಳೆಯೇ ಹರಿದಿದೆ.

66
ಸಖತ್ ವೈರಲ್

"ಅಮೇಜಿಂಗ್", "ಡ್ಯಾಶಿಂಗ್ ಜೋಡಿ", "ಪರ್ಫೆಕ್ಟ್ ಕೆಮಿಸ್ಟ್ರಿ" ಎಂಬ ಪ್ರತಿಕ್ರಿಯೆಗಳು ಹೆಚ್ಚಾಗಿ ಕಂಡುಬಂದಿವೆ. ಒಟ್ಟಾರೆ, ಕಿಶನ್ ಬಿಲಗಲಿ ಮತ್ತು ನಿವೇದಿತಾ ಗೌಡ ಅವರ ಈ ಹೊಸ ಡ್ಯಾನ್ಸ್ ರೀಲ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿ ನೆಟ್ಟಿಗರ ಮನ ಗೆಲ್ಲುತ್ತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories