ಇಷ್ಟುದಿನ ಯಾಮಾರಿಸಿದ್ದಾಯ್ತು; ಈಗ ವೀಕ್ಷಕರಿಗೆ ದಿಗ್ಭ್ರಮೆ ಆಗುವಂತೆ ಮಾಡ್ತಾ Ninna Jothe Nanna Kathe Serial?

Published : Mar 12, 2026, 03:44 PM IST

Ninna Jothe Nanna Kathe Serial: ನಿನ್ನ ಜೊತೆ ನನ್ನ ಕಥೆ ಧಾರಾವಾಹಿಯಲ್ಲಿ ಭೂಮಿ, ಅಜಿತ್‌ ರಾಮ್‌ನಾರಾಯಣ್‌ ಯಾವಾಗ ಒಂದಾಗ್ತಾರೆ ಎನ್ನೋದೇ ದೊಡ್ಡ ಚಿಂತೆಯಾಗಿದೆ. ಇವರಿಬ್ಬರು ಪರಸ್ಪರ ಲವ್‌ ಹೇಳಿಕೊಂಡರೂ ಕೂಡ, ಪರಸ್ಪರ ನಂಬುತ್ತಿಲ್ಲ. ಈಗ ಅಜಿತ್‌ ಅಂತೂ ಭೂಮಿಯಿಂದ ದೂರ ಆಗುವ ಯೋಚನೆಯಲ್ಲಿದ್ದಾನೆ. 

PREV
15
ಲವ್‌ ಮಾಡ್ತಿದ್ದಾರೆ, ಗೊತ್ತಿಲ್ಲ

ಅಜಿತ್‌ ಹಾಗೂ ಭೂಮಿ ಒಪ್ಪಂದದ ಮ್ಯಾರೇಜ್‌ ಆಗಿದ್ದರು. ತನ್ನ ಅತ್ತೆ ಮಗಳನ್ನು ಮದುವೆ ಆಗೋದನ್ನು ತಪ್ಪಿಸಿಕೊಳ್ಳಲು ಅಜಿತ್‌ ಹೀಗೆ ಮಾಡಿದ್ದನು. ಈಗ ಪರಸ್ಪರ ಇವರಿಬ್ಬರೂ ಲವ್‌ನಲ್ಲಿದ್ದಾರೆ. ಎಲ್ಲರೂ ಇವರಿಬ್ಬರು ನಿಜವಾಗಿಯೂ ಪ್ರೀತಿಯಲ್ಲಿದ್ದಾರೆ ಎಂದುಕೊಂಡಿದ್ದಾರೆ. ಇವರಿಬ್ಬರೂ ಲವ್‌ನಲ್ಲಿದ್ದರೂ ಕೂಡ, ಪರಸ್ಪರ ಗೊತ್ತೇ ಇಲ್ಲ.

25
ಇಬ್ರೂ ಒಂದಾಗಿಲ್ಲ

ಇವರಿಬ್ಬರಿಗೂ ಯಾವಾಗ ಪರಸ್ಪರ ಲವ್‌ ಇದೆ ಎಂದು ಗೊತ್ತಾಗುತ್ತೆ? ಇವರು ಯಾವಾಗ ಒಂದಾಗ್ತಾರೆ ಎಂದು ವೀಕ್ಷಕರು ತಲೆಕೆಡಿಸಿಕೊಂಡಿದ್ದರು. ಬಹಳ ದಿನಗಳಿಂದ ಇದರ ಸುತ್ತ ಕಥೆ ಸಾಗುತ್ತಿದ್ದರೂ ಕೂಡ, ಇವರು ಒಂದಾಗಿರಲಿಲ್ಲ.

35
ಸತ್ಯ ಹೇಳಿದ ಭೂಮಿ

ಈಗ ಹೋಳಿ ಹುಣ್ಣಿಮೆ ಪ್ರಯುಕ್ತ, ಭೂಮಿಗೆ ಅಶ್ವಿನಿ ರಾಮರಸ ಕುಡಿಸಿದ್ದಾಳೆ. ಈಗ ಅವಳು ಸತ್ಯವನ್ನು ಬಾಯಿ ಬಿಟ್ಟಿದ್ದಾಳೆ. ಭೂಮಿ ಹೇಳಿದ್ದನ್ನು ಕೇಳಿ ಅಜಿತ್‌ ಕೂಡ ಆಶ್ಚರ್ಯಪಟ್ಟಿದ್ದಾನೆ, ಖುಷಿಪಟ್ಟಿದ್ದಾನೆ.

45
ಪ್ರೇಮ ನಿವೇದನೆ ಮಾಡಿದ ಭೂಮಿ

ರಾಮರಸ ಕುಡಿದ ಭೂಮಿ, ಅಜಿತ್‌ ಮುಂದೆ ಒಂದಿಷ್ಟು ಸತ್ಯವನ್ನು ಹೇಳಿದ್ದಾಳೆ. “ನೀವು ನನ್ನ ಸಾಹೇಬರು ಅಂತ ಗೊತ್ತಿದ್ದೇ ನಾನು ನಿಮಗೆ ಐ ಲವ್‌ ಯು ಹೇಳಿದ್ದೀನಿ. ಮನಸಾರೆ ನಾನು ನಿಮ್ಮನ್ನು ಲವ್‌ ಮಾಡ್ತಿದೀನಿ, ಐ ಲವ್‌ ಯು ಸಾಹೇಬರೇ” ಎಂದು ಭೂಮಿ, ಅಜಿತ್‌ ಮುಂದೆ ಹೇಳಿದ್ದಾಳೆ. ಇದನ್ನು ಕೇಳಿ ಅಜಿತ್ ಆಶ್ಚರ್ಯಪಟ್ಟಿದ್ದಾನೆ.

55
ಈಗ ನಿಜ ಆಗುತ್ತಾ?

ಈಗಲಾದರೂ ಇವರಿಬ್ಬರು ಒಂದಾಗಿದ್ದಾರಾ? ಇಲ್ಲವಾ ಎಂಬ ಡೌಟ್‌ ಇದ್ದೇ ಇದೆ. ಪ್ರತಿಸಲ ಒಂದಾಗ್ತಾರೆ ಎಂದು ಸೀರಿಯಲ್‌ ಟೀಂ ಯಾಮಾರಿಸುತ್ತಿತ್ತು, ಈಗ ನಿಜವಾಗಿಯೂ ಒಂದಾಗಲಿ ಎಂಬ ಆಶಯ ಇದೆ. ಮುಂದಿನ ದಿನಗಳಲ್ಲಿ ಏನಾಗಲಿದೆ ಎಂದು ಕಾದು ನೋಡಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories