ಕಲರ್ಸ್ ಕನ್ನಡದಲ್ಲಿ ಮೇ 22 ರಿಂದ ಮಧ್ಯಾಹ್ನ ಮನರಂಜನೆಯ ಧಮಾಕ

Published : May 19, 2023, 03:04 PM IST

ಹೊಸ ಹೊಸ ಕಥೆಗಳ ಮೂಲಕ ಜನರಿಗೆ ಹೆಚ್ಚು ಹತ್ತಿರವಾಗುತ್ತಿರುವ ಕಲರ್ಸ್ ಕನ್ನಡ ವಾಹಿನಿಯಲ್ಲಿ ಇನ್ನು ಮೇ  22 ರಿಂದ ಮತ್ತಷ್ಟು ಮನರಂಜನೆ ಸಿಗಲಿದೆ. ಮದ್ಯಾಹ್ನ ಸ್ಪೆಷಲ್ ಮೀಲ್ಸ್ ರೆಡಿ ಮಾಡಿಕೊಂಡಿರುವ ಕಲರ್ಸ್‌ನಲ್ಲಿ ಯಾವೆಲ್ಲಾ ಹೊಸ ಸೀರಿಯಲ್ ಆರಂಭವಾಗಲಿವೆ?

PREV
18
ಕಲರ್ಸ್ ಕನ್ನಡದಲ್ಲಿ ಮೇ 22 ರಿಂದ ಮಧ್ಯಾಹ್ನ ಮನರಂಜನೆಯ ಧಮಾಕ

ವಿಭಿನ್ನ ರೀತಿಯ ಕಥೆ, ಹೊಸ ಹೊಸ ನಟ -ನಟಿಯರನ್ನು ತೆರೆಗೆ ತರುವಲ್ಲಿ ಸದಾ ಮುಂದಿರುವ ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಇದೀಗ ಜನರಿಗೆ ಮಧ್ಯಾಹ್ನದ ಸ್ಪೆಷಲ್ ಮೀಲ್ ರೆಡಿಮಾಡುತ್ತಿದೆ. ಮೇ  22 ರಿಂದ ಹೊಸ ಸೀರಿಯಲ್ಸ್ ಆರಂಭವಾಗಲಿದೆ. 

28

ಮೇ  22 ರಿಂದ ಮಧ್ಯಾಹ್ನ 2 ಗಂಟೆಗೆ ಗೃಹಪ್ರವೇಶ, 2.30 ಗೆ ಗಂಡ ಹೆಂಡ್ತಿ ಮತ್ತು 3 ಗಂಟೆಗೆ ಶಾಂತಂ ಪಾಪಂ ಧಾರವಾಹಿ ಪ್ರಸಾರವಾಗಲಿದೆ. ಹಾಗಾಗಿ ಇನ್ನು ಮುಂದೆ ಪ್ರೇಕ್ಷಕರು ಮದ್ಯಾಹ್ನದಿಂದ ರಾತ್ರಿವರೆಗೆ ಸೀರಿಯಲ್ ಗಳನ್ನು ನೋಡುತ್ತಾ ಎಂಜಾಯ್ ಮಾಡಬಹುದು. 

38

ಗೃಹ ಪ್ರವೇಶ
'ಗೃಹ ಪ್ರವೇಶ' (Gruhapravesha) ಸೀರಿಯಲ್ ಮಧ್ಯಾಹ್ನ 2 ಗಂಟೆಗೆ ಪ್ರಸಾರವಾಗಲಿದ್ದು, ಇದರಲ್ಲಿ ಸ್ಪಂದನಾ ಸೋಮಣ್ಣ ಅವರು ನಾಯಕಿಯಾಗಿ ನಟಿಸಲಿದ್ದಾರೆ. ಸ್ಪಂದನಾ ಹೊಸ ನಟಿ ಏನಲ್ಲ. ಈಗಾಗಲೇ ಸಿನಿಮಾಗಳಲ್ಲಿ ನಟಿಸಿದ ಅನುಭವ ಹೊಂದಿದ್ದಾರೆ. 

48

ವಿಜಯ್ ರಾಘವೇಂದ್ರ, ಅಭಿಷೇಕ್ ರಾಮ್‌ದಾಸ್ ನಟನೆಯ 'ಮರೀಚಿ' ಸಿನಿಮಾದಲ್ಲಿ, 'ಶಟ್ ದ ನಾಯ್ಸ್' ಎನ್ನುವ ಕಿರುಚಿತ್ರ ದಲ್ಲಿ ಹಾಗೂ, 'ನಾನು ನನ್ನ ಕನಸು', 'ಅಭಿಲಾಷ' ಎನ್ನುವ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 

58

ಈ ಹೊಸ ಸೀರಿಯಲ್ ಪ್ರೋಮೋ ನೋಡಿ ಜನ ಮೆಚ್ಚಿಕೊಂಡಿದ್ದಾರೆ. ಹುಟ್ಟಿದಾಗಿನಿಂದ ತಂದೆಯನ್ನೇ ಕಾಣದ ಹುಡುಗಿ, ಒಂದು ಫೋಟೋ ಹಿಡಿದು ಕೊಂಡು, ತಂದೆಯನ್ನು ಹುಡುಕಿಕೊಂಡು ಸಿಟಿ ಕಡೆ ಹೊರಡುವ ಕತೆ ಇದಾಗಿದೆ. ಇನ್ನು ಸೀರಿಯಲ್ ಹೇಗೆ ಬರಲಿದೆ ಕಾದು ನೋಡಬೇಕು. 

68

ಗಂಡ ಹೆಂಡ್ತಿ
ಇನ್ನು ಮಧ್ಯಾಹ್ನ 2. 30 ಕ್ಕೆ ಗಂಡ ಹೆಂಡ್ತಿ' (Ganda Hendti) ಧಾರಾವಾಹಿ ಪ್ರಸಾರವಾಗಲಿದೆ. ಇದರಲ್ಲಿ ನಾಯಕಿಯಾಗಿ ನಿರುಶಾ ಗೌಡ ನಟಿಸುತ್ತಿದ್ದಾರೆ. ನಿರುಶಾ ಈ ಹಿಂದೆ ಸಿರಿ ಕನ್ನಡ ವಾಹಿನಿಯ 'ಅಮ್ಮನ ಮದುವೆ' ಧಾರಾವಾಹಿಯಲ್ಲಿ ನಟಿಸಿದ್ದರು. 

78

ಕನ್ನಡದಲ್ಲಿ ಸಾಕಷ್ಟು ಸೀರಿಯಲ್‌ನಲ್ಲಿ ನಟಿಸಿ ಸದ್ಯ 'ಲಕ್ಷಣ' ಧಾರಾವಾಹಿಯಲ್ಲಿ ನಟಿಸುತ್ತಿರುವ ನಟ ಜಗನ್ ಚಂದ್ರಶೇಖರ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಇದು ಮದುವೆಯಾಗದೆ, ಹೊಟ್ಟೆಯಲ್ಲಿ ಮಗುವನ್ನು ಇಟ್ಟುಕೊಂಡು ಸಮಾಜ ಎದುರಿಸಲು ನಿಂತಿರುವ ಹೆಣ್ಣಿನ ಕಥೆ. 
 

88

ಶಾಂತಂ ಪಾಪಂ 
ಕಲರ್ಸ್ ಕನ್ನಡ ವಾಹಿನಿಯಲ್ಲಿ ಮತ್ತೆ  'ಶಾಂತಂ ಪಾಪಂ' ಆರಂಭವಾಗಲಿದೆ. ಧಾರಾವಾಹಿ ಸೀಸನ್ 5 ಆರಂಭವಾಗಲಿದ್ದು, ಇದು ಪ್ರತಿದಿನ ಮಧ್ಯಾಹ್ನ 3 ಗಂಟೆಗೆ ಪ್ರಸಾರವಾಗಲಿದೆ. ಇದರಲ್ಲಿ ಕ್ರೈಂ ಲೋಕದ ಸ್ಟೋರಿಗಳು ತೆರೆ ಮೇಲೆ ಬರಲಿವೆ.

Read more Photos on
click me!

Recommended Stories