ಬಿಗ್ ಬಾಸ್ ಸ್ನೇಹಾ ಆಚಾರ್ಯ ಪ್ರೆಗ್ನೆಂಟ್; ಫೋಟೋ ನೋಡಿ ಬೆಚ್ಚಿಬಿದ್ದ ನೆಟ್ಟಿಗರು

First Published | May 18, 2023, 4:07 PM IST

ವೈರಲ್ ಆಯ್ತು ನಟಿ ಸ್ನೇಹಾ ಆಚಾರ್ಯ ಬೇಬಿ ಬಂಪ್ ಫೋಟೋ ಶೂಟ್. ಸಾಹಸ ನೋಡಿ ಗಾಬರಿಗೊಂಡ ನೆಟ್ಟಿಗರು....
 

ಕನ್ನಡ ಕಿರುತೆರೆ ಜನಪ್ರಿಯ ನಟಿ ಹಾಗೂ ಬಿಗ್ ಬಾಸ್ ಕನ್ನಡ ಸೀಸನ್ 6ರ ಸ್ಪರ್ಧಿ ಸ್ನೇಹಾ ಆಚಾರ್ಯ ತಾಯಿ ಆಗುತ್ತಿರುವ ವಿಚಾರವನ್ನು ತುಂಬಾನೇ ಸ್ಪೆಷಲ್ ಆಗಿ ಸೋಷಿಯಲ್ ಮೀಡಿಯಾದಲ್ಲಿ ಅನೌನ್ಸ್ ಮಾಡಿದ್ದಾರೆ.

'ನಮ್ಮ ಜೀವನದ ದೊಡ್ಡ ಅಡ್ವೆಂಜರ್ ಆರಂಭವಾಗಲಿದೆ' ಎಂದು ಬರೆದುಕೊಂಡಿರುವ ಸ್ನೇಹಾ ನೀಲಿ ಬಣ್ಣದ ಗೌನ್‌ನ ಫೋಟೋ ಅಪ್ಲೋಡ್ ಮಾಡಿದ್ದಾರೆ.

Tap to resize

ಬಾತ್‌ ಟಬ್‌ನಲ್ಲಿ ಸ್ನೇಹಾ ಮಲಗಿರುವ ಫೋಟೋ ವೈರಲ್. 'ಸಮಯ ಮುಂದೂಡಬೇಕು ಆದಷ್ಟು ಬೇಗ ಮಗುವನ್ನು ಕೈಯಲ್ಲಿ ಹಿಡಿದುಕೊಳ್ಳಬೇಕು' ಎಂದು ಬರೆದುಕೊಂಡಿದ್ದಾರೆ. 

'ನಮ್ಮೊಳಗೆ ಒಂದು ಜೀವನ ಹುಟ್ಟಿ ಬೆಳೆಯುತ್ತಿದೆ ಅಂದ್ರೆ ಆ ಸುಂದರ ಕ್ಷಣವನ್ನು ಪದಗಳಲ್ಲಿ ವರ್ಣಿಸಲು ಆಗಲ್ಲ. ಮ್ಯಾಜಿಕಲ್ ಕ್ಷಣವನ್ನು ಎಂಜಾಯ್ ಮಾಡುತ್ತಿರುವೆ' ಎಂದು ಸ್ನೇಹಾ ಹೇಳಿದ್ದಾರೆ.

ಕಪಲ್ ಯೋಗ ಪೋಸ್‌ಗಳ ರೀತಿಯಲ್ಲಿ ಶ್ವೇತಾ ಶೂಟ್ ಮಾಡಿಸಿದ್ದಾರೆ. ಕಪ್ಪು ಬಣ್ಣದ ಬಾಡಿ ಫಿಟ್ ಸೂಟ್‌ ಧರಿಸಿದ್ದಾರೆ. ಈ ಪೋಸ್‌ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. 

ಒಳ್ಳೆಯದಾಗಲಿ, ನೀವು ಬದಲಾಗಿದ್ದೀರಿ ಮಗು ಚೆನ್ನಾಗಿ ಆರೋಗ್ಯವಾಗಿರಲಿ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ. 2018ರಲ್ಲಿ ನ್ಯೂಯಾರ್ಕ್‍ನ ರಾಯನ್ ಕೊಪ್ಕೊ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.  

Latest Videos

click me!