ಲಕ್ಷ್ಮೀ ಬಾರಮ್ಮ ಸೀರಿಯಲ್‌ಗೆ ಹೊಸ ಎಂಟ್ರಿ... ಕೀರ್ತಿನೆ‌ ಪ್ಲಾಸ್ಟಿಕ್ ಸರ್ಜರಿ ಮಾಡಿ ಬಂದಿರೋದು ಅಂತಿದ್ದಾರೆ ಜನ !

First Published | Oct 16, 2024, 4:07 PM IST

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಇದೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು ಲಕ್ಷ್ಮೀ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ, ವೀಕ್ಷಕರು ಹೇಳ್ತಿದ್ದಾರೆ ಅದು ಕೀರ್ತಿ ಅಂತ, ನಿಮಗೇನು ಅನಿಸುತ್ತೆ? 
 

ಲಕ್ಷ್ಮೀ ಬಾರಮ್ಮ (Lakshmi Baramma) ಧಾರಾವಾಹಿ ನೋಡಿ ಜನರಿಗೆ ಈಗ ಬೇಜಾರಾಗಿದೆ. ಯಾಕಂದ್ರೆ, ಪ್ರತಿ ಸಲಾನೂ ಸುಳ್ಳು, ಮೋಸಕ್ಕೆ ಜಯ ಸಿಗೋದನ್ನ ಯಾರು ಇಷ್ಟಪಡ್ತಾರೆ ಅಲ್ವಾ? ಆದರೆ ಲಕ್ಷ್ಮೀ ಬಾರಮ್ಮ ಧಾರವಾಹಿಯಲ್ಲಿ ಆಗ್ತಿರೋದು ಅದೇ. ಎಲ್ಲಾ ಸಲವೂ ಕಾವೇರಿಗೆ ಗೆಲುವಾಗ್ತಿದೆ. 

ಕಾವೇರಿ ತನ್ನ ಮಗನನ್ನು ತನ್ನ ಬಳಿಯೇ ಉಳಿಸಿಕೊಳ್ಳಲು, ಮೊದಲಿಗೆ ವೈಷ್ಣವ್ -ಕೀರ್ತಿ ಪ್ರೀತಿಯನ್ನು ಬಲಿ ಕೊಟ್ಲು, ನಂತ್ರ ಲಕ್ಷ್ಮೀಯನ್ನ ಮುಗಿಸೋ ಪ್ಲ್ಯಾನ್, ಇದಾದ ನಂತ್ರ ತನ್ನ ದಾರಿಗೆ ಅಡ್ಡ ಬಂದ ಕೀರ್ತಿಯನ್ನೇ ಬೆಟ್ಟದಿಂದ ನೂಕಿ ಕೊಲೆ ಮಾಡಿದ್ಲು, ಇದೀಗ ತನ್ನ ಮೇಲೆ ಅಪವಾದ ಮಾಡ್ತಿರೋ ಲಕ್ಷ್ಮೀಯನ್ನೇ ಕೊಲ್ಲೋ ಪ್ಲ್ಯಾನ್ ಮಾಡಿದ್ದಾಳೆ ಕಾವೇರಿ. 
 

Tap to resize

ಇದು ಒಂದು ಬಾರಿಯಲ್ಲ, ಪ್ರತಿ ಸಲವೂ ಲಕ್ಷ್ಮೀ ಕಾವೇರಿಯ ಮೋಸದಾಟವನ್ನು ಬಯಲಿಗೆಳೆಯಲು ಹೋದಾಗಲೆಲ್ಲಾ, ಒಂದಲ್ಲ ಒಂದು ರೀತಿಯಾಗಿ ಲಕ್ಷ್ಮೀಗೆ ಸೋಲು ಆಗ್ತಾನೆ ಇದೆ. ಇದೀಗ ಮನೆಯವರೆಲ್ಲರಿಗೂ ಲಕ್ಷ್ಮೀ ತಲೆ ಕೆಟ್ಟಿದೆ ಎನ್ನುವ ಭಾವನೆ ಮೂಡಿಸದಕ್ಕೋಸ್ಕರ ಏನೇನೋ ಪ್ಲ್ಯಾನ್ ಮಾಡಿದ ಕಾವೇರಿ, ಕೊನೆಗೆ ರೂಮಲ್ಲಿ ಮಲಗಿರೋ ಲಕ್ಷ್ಮೀಯನ್ನೇ ರೌಡಿಗಳು ಹೊತ್ತೊಯ್ತು, ಲಕ್ಷ್ಮಿ ಕಥೆ ಮುಗಿಸುವಂತೆ ಮಾಡಿದ್ದಾಳೆ ಕಾವೇರಿ. 
 

ಪದೇ ಪದೆ ಕಾವೇರಿಗೆ ಜಯ ಸಿಗ್ತಿರೋದನ್ನ ನೋಡಿ, ಅದೇ ಕಥೆಯನ್ನ ಎಳೆಯೋದು ನೋಡಿ ಬೇಸತ್ತಿರೋ ವೀಕ್ಷಕರು, ಇನ್ನು ಮುಂದೆ ಸೀರಿಯಲ್ ನೋಡೋದಿಲ್ಲ, ಈ ಕಥೆ ನೋಡೋದಕ್ಕೆ ಬೇಜಾರು, ಕೀರ್ತಿ ಇಲ್ಲದ ಮೇಲೆ ಕಥೆ ಯಾವುದೋ ದಾರಿಯಲ್ಲಿ ಸಾಗುತ್ತಿದೆ, ಎಲ್ಲಾ ಗೊತ್ತಾದ ಮೇಲೂ ಇಲ್ಲಿ ಏನೂ ನಡಿತಾನೆ ಇಲ್ಲ ಅಂದ್ರೆ ಅದಕ್ಕೆ ಅರ್ಥ ಏನು? ತಲೆ ಬುಡ ಇಲ್ಲದೆ ಕಥೆ ಸಾಗುತ್ತಿದೆ ಎಂದು ಛೀಮಾರಿ ಹಾಕಿದೋರೆ ಹೆಚ್ಚು. 
 

ಇದೀಗ ಲಕ್ಷ್ಮೀ ಕಾಣೆಯಾಗಿದ್ದು, ಒಂದೆಡೆ ಲಕ್ಷ್ಮಿಯನ್ನು ಹುಡುಕಿ ವೈಷ್ಣವ್ ಮತ್ತು ಕೃಷ್ಣ ಹೊರಟಿದ್ದರೆ, ಇನ್ನೊಂದೆಡೆ ಮನೆಗೆ ದುರ್ಗಾಳ ಎಂಟ್ರಿಯಾಗಿದೆ, ತಾನು ಪೊಲೀಸ್ ಎಂದು ಹೇಳುವ ದುರ್ಗಾ, ಲಕ್ಷ್ಮೀ ಕಾಣೆಯಾಗಿರೋದರ ಬಗ್ಗೆ ಕಾವೇರಿ ಬಳಿ ಪ್ರಶ್ನೆ ಮೇಲೆ ಪ್ರಶ್ನೆ ಕೇಳ್ತಿದ್ದಾಳೆ, ಜೊತೆಗೆ ಕಾವೇರಿಯನ್ನು ರೂಮಿಗೆ ಕರೆದುಕೊಂಡು ಹೋಗಿ ಲಕ್ಷ್ಮೀ ಬಗ್ಗೆ ಎಂಕ್ವೈರಿ ಮಾಡೋದಾಗಿ ಕೂಡ ಹೇಳಿದ್ದಾರೆ. 
 

ಇದನ್ನೆಲ್ಲಾ ನೋಡಿ ವೀಕ್ಷಕರಿಗೆ ಕನ್ ಫ್ಯೂಶನ್ ಶುರುವಾಗಿದ್ದು, ಇದೀಗ ಸಡನ್ ಆಗಿ ಬಂದಿರೋದು ಯಾರು? ನಿಜವಾಗಿ ಆ ದೇವಿ ದುರ್ಗಾ ಮಾತೆನೆ ಬಂದು ಕಾವೇರಿ ಬಾಯಿಯಿಂದ ಸತ್ಯ ಬಾಯಿ ಬಿಡಿಸ್ತಾಳ ಅಂತ ಕೇಳಿದ್ರೆ.ಇನ್ನೂ ಕೆಲವು ಜನರು ಇಲ್ಲ ಇದು ಖಂಡಿತವಾಗಿಯೂ ಕೀರ್ತಿನೆ ಇರಬೇಕು. ಕೀರ್ತಿ ಪ್ಲಾಸ್ಟಿಕ್ ಸರ್ಜರಿ ಮಾಡಿ ಈ ರೀತಿಯಾಗಿ ಬದಲಾಗಿ ಬಂದಿದ್ದಾಳೆ, ಇನ್ನು ಕಾವೇರಿಗೆ ಹಬ್ಬ ಕಾದಿದೆ ಎನ್ನುತ್ತಿದ್ದಾರೆ. ಆದರೆ ನಿಜವಾಗಿಯೂ ಅದು ಕೀರ್ತಿನಾ? ಅಥವಾ ದೇವಿನಾ ಇವತ್ತಿನ ಎಪಿಸೋಡ್ ನೋಡಿದ್ರೆ ಗೊತ್ತಾಗಬಹುದು. 
 

Latest Videos

click me!