ಬ್ಯಾಕ್ ಲೆಸ್ ಗೌನಲ್ಲಿ ರಾಣಿಯಂತೆ ಮೆರಿತಿದ್ದಾರೆ ವೈಷ್ಣವಿ ಗೌಡ…ನಟಿಯ ಸೌಂದರ್ಯಕ್ಕೆ ತೆಲುಗು ವೀಕ್ಷಕರು ಕೂಡ ಫಿದಾ

First Published | Oct 16, 2024, 12:14 PM IST

ಕಿರುತೆರೆ ನಟಿ ಸೀತಾರಾಮದ ಬ್ಯೂಟಿ ವೈಷ್ಣವಿ ಗೌಡ, ಬ್ಯಾಕ್ ಲೆಸ್ ವೈಟ್ ಗೌನಲ್ಲಿ ಸಖತ್ತಾಗಿ ಮಿಂಚಿತ್ತಿದ್ದು, ನಟಿಯ ಈ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. 
 

ಕನ್ನಡ ಕಿರುತೆರೆಯ ಎವರ್ ಗ್ರೀನ್ ಬ್ಯೂಟಿ, ಗುಳಿಕೆನ್ನೆ ಚೆಲುವೆ ವೈಷ್ಣವಿ ಗೌಡ (Vaishnavi Gowda). ಅಗ್ನಿ ಸಾಕ್ಷಿ ಧಾರಾವಾಹಿಯಲ್ಲಿ ಸನ್ನಿಧಿಯಾಗಿ ಮನೆಮಾತಾಗಿದ್ದ ನಟಿ ಸದ್ಯ ಸೀತಾ ರಾಮ ಧಾರಾವಾಹಿಯ ಸೀತಾ ಆಗಿ ಜನ ಮನ ಗೆದ್ದಿದ್ದಾರೆ ಈ ಚೆಲುವೆ. 
 

ವೀಕ್ಷಕರ ಫೇವರಿಟ್ ನಟಿಯಾಗಿರುವ ವೈಷ್ಣವಿ ಗೌಡ, ಸೋಶಿಯಲ್ ಮೀಡಿಯಾದಲ್ಲಿ (Social media) ಸಖತ್ ಆಕ್ಟೀವ್ ಆಗಿದ್ದು, ತಮ್ಮ ಫೋಟೊ ಶೂಟ್, ವಿಡಿಯೋ, ರೀಲ್ಸ್, ಕಾಮಿಡಿ ವಿಡಿಯೋಗಳ ಮೂಲಕ ಅಭಿಮಾನಿಗಳ ಜೊತೆ ಕನೆಕ್ಟ್ ಆಗುತ್ತಿರುತ್ತಾರೆ. 
 

Tap to resize

ಮಾಡರ್ನ್ ಡ್ರೆಸ್ ಗೂ ಸೈ, ಟ್ರೆಡಿಷನಲ್ ವೇರ್ ಗೂ ಸೈ ಎನ್ನುವ ವೈಷ್ಣವಿ, ಈ ಬಾರಿ ತಮ್ಮ ಇನ್’ಸ್ಟಾಗ್ರಾಂ ಖಾತೆಯಲ್ಲಿ ಬಿಳಿ ಬಣ್ಣದ ಸುಂದರವಾದ ಬ್ಯಾಕ್ ಲೆಸ್ ಗೌನ್ ಧರಿಸಿ ಫೋಟೊ ಶೂಟ್ ಮಾಡಿಸಿದ್ದನ್ನ ಶೇರ್ ಮಾಡಿದ್ದು, Queen Time ಅಂತ ಕ್ಯಾಪ್ಶನ್ ಬೇರೆ ಕೊಟ್ಟಿದ್ದಾರೆ. 
 

ಸಿಂಪಲ್ ಆಂಡ್ ಎಲಿಗೆಂಟ್ ಆಗಿರುವ ಬಿಳಿ ಬಣ್ಣದ ಗೌನ್ ನಲ್ಲಿ ವೈಷ್ಣವಿ ಗೌಡ ನಿಜವಾಗಿಯೂ ರಾಣಿಯಂತೆ ಕಾಣಿಸಿಕೊಂಡಿದ್ದಾರೆ. ಇವರ ಈ ಲುಕ್ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟ ಆಗಿದ್ದು, ತೆಲುಗು ಅಭಿಮಾನಿಗಳು ಸಹ ನೀವಂದ್ರೆ ನಮಗೆ ತುಂಬಾ ಇಷ್ಟ, ತುಂಬಾನೆ ಮುದ್ದಾಗಿ ಕಾಣಿಸ್ತೀರ ಅಂತ ಕಾಮೆಂಟ್ ಮಾಡಿದ್ದಾರೆ. 
 

ವೈಷ್ಣವಿ ತುಂಬಾನೆ ಸುಂದರವಾಗಿ ಕಾಣಿಸ್ತಿದ್ದೀರಾ, ರಾಣಿ ಥರಾನೆ ಕಾಣಿಸ್ತಿದ್ದೀರ. ಕುರುಬನ ರಾಣಿ, ಈ ಸ್ಟೈಲ್, ಈ ಡ್ರೆಸ್ ನಿಮಗೆ ಪರ್ಫೆಕ್ಟ್ ಆಗಿ ಕಾಣಿಸುತ್ತೆ, ಮಿಲ್ಕಿ ಬ್ಯೂಟಿ, ನಿಮ್ಮ ಹುಡುಗ ಈ ಫೋಟೊ ನೋಡಿದ್ರೆ ಪಕ್ಕಾ ಫಿದಾ, ಯಾಕಿಷ್ಟು ಚಂದ ನೀವು ಎಂದೆಲ್ಲಾ ಕಾಮೆಂಟ್ ಜೊತೆಗೆ, ಹಾರ್ಟ್ ಇಮೋಜಿಗಳ ಸುರಿಮಳೆಯನ್ನೇ ಸುರಿಸಿದ್ದಾರೆ. 
 

ವೈಷ್ಣವಿ ಗೌಡ ವಿಡಿಯೋಗಳು, ಫೋಟೊಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿರುತ್ತೆ, ಹೆಚ್ಚಿನ ಜನ ನಟಿಯನ್ನ ಕೇಳೋದೆ ಯಾವಾಗ ಮದ್ವೆ ಆಗ್ತೀರಿ ಅಂತ. ಯಾಕಂದ್ರೆ ವಯಸ್ಸು 32 ಆದ್ರೂ ಇನ್ನೂ ಸಿಂಗಲ್ ಆಗಿದ್ದಾರೆ ವೈಷ್ಣವಿ. ಸೀತಾ ರಾಮರ ಜೋಡಿಯನ್ನು ಆನ್ ಸ್ಕ್ರೀನ್ ನಲ್ಲಿ ನೋಡಿ ಖುಷಿ ಪಡೋ ಅಭಿಮಾನಿಗಳು, ಆಫ್ ಸ್ಕ್ರೀನ್ ನಲ್ಲೂ ಗಗನ್ ಮತ್ತು ವೈಷ್ಣವಿ ಜೋಡಿಯಾದ್ರೆ ತುಂಬಾನೆ ಚೆನ್ನಾಗಿರುತ್ತೆ ಅಂತ ಹೇಳುತ್ತಿರುತ್ತಾರೆ. 
 

ಇನ್ನು ಸೀರಿಯಲ್ ಕಥೆ ಬಗ್ಗೆ ಹೇಳೋದಾದ್ರೆ ಸೀತಾ ರಾಮ ಧಾರಾವಾಹಿಯಲ್ಲಿ (Sita Rama serial) ಸಿಹಿಯ ಮುದ್ದಿನ ಸೀತಮ್ಮನಾಗಿ ನಟಿಸುತ್ತಿರುವ ವೈಷ್ಣವಿ ಗೌಡ, ಸದ್ಯಕ್ಕಂತೂ ತನ್ನ ಮಗಳು ಎಲ್ಲಿ ತನ್ನ ಕೈತಪ್ಪಿ ಹೋಗುತ್ತಾಳೋ ಎನ್ನುವ ಚಿಂತೆಯಲ್ಲಿದ್ದಾರೆ. ಮೇಘಶ್ಯಾಮ ದಂಪತಿಗಳು ಬಾಡಿಗೆ ತಾಯಿಯ ಮೂಲಕ ಮಗು ಪಡೆಯೋದಕ್ಕೆ ಪ್ರಯತ್ನಿಸಿದ್ದು, ಈಗ ಮಗುವಿನ ಹುಡುಕಾಟದಲ್ಲಿದ್ದು, ರಾಮ್ ಕೂಡ ತನ್ನ ಗೆಳೆಯ ಶ್ಯಾಮ್ ಗೆ ಸಾಥ್ ನೀಡುತ್ತಿದ್ದು, ಸೀತಾಗೂ ಸಿಹಿ ಮೇಘ ಶ್ಯಾಮ್ ಮಗಳು ಅನ್ನೋದು ತಿಳಿದಿದೆ. ಮುಂದೆ ಕಥೆ ಎಲ್ಲಿಗೆ ಸಾಗುತ್ತೆ? ಎಲ್ಲರಿಗೂ ಸತ್ಯ ಗೊತ್ತಾಗುತ್ತಾ? ಅನ್ನೋದನ್ನ ನೋಡಬೇಕು. 
 

Latest Videos

click me!