ಸ್ಪೆಷಲ್ ಫೋಟೊ ಶೇರ್ ಮಾಡಿ ಪ್ರೀತಿಯ ಚೋಮು ದಿಲೀಪ್ ಶೆಟ್ಟಿ ಬರ್ತ್ ಡೇಗೆ ಸ್ಪೆಷಲ್ ಆಗಿ ವಿಶ್ ಮಾಡಿದ್ರು ಖುಷಿ ಶಿವು

First Published | Oct 16, 2024, 2:15 PM IST

ನೀನಾದೆ ನಾ ಸೀರಿಯಲ್ ನಟಿ ಖುಷಿ ಶಿವು ತಮ್ಮ ಕೋ ಸ್ಟಾರ್ ಹಾಗೂ ಆತ್ಮೀಯ ಗೆಳೆಯ ಆಗಿರುವ ದಿಲೀಪ್ ಶೆಟ್ಟಿ ಹುಟ್ಟುಹಬ್ಬದ ಸ್ಪೆಷಲ್ ಫೋಟೊಗಳ ಜೊತೆ ವಿಶ್ ಮಾಡಿದ್ದಾರೆ. 
 

ಕನ್ನಡ ಕಿರುತೆರೆಯ ಮುದ್ದಾದ ಜೋಡಿಗಳಲ್ಲಿ ಸದ್ಯ ಮೋಸ್ಟ್ ಫೇವರಿಟ್ ಗಳಲ್ಲಿ ಒಂದು ಜೋಡಿ ಅಂದ್ರೆ ಅದು ವಿಕ್ರಮ್ ಮತ್ತು ವೇದಾ (Vikram and Vedha). ಅಂದ್ರೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನೀನಾದೆನಾ ಸೀರಿಯಲ್ ಜೋಡಿ ವಿಕ್ರಮ್ ವೇದಾನ ಜೊತೆಯಾಗಿ ನೋಡಿದ್ರೇನೆ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಖುಷಿ. 
 

ವಿಕ್ರಮ್ ಮತ್ತು ವೇದಾ ಖ್ಯಾತಿಯ ದಿಲೀಪ್ ಶೆಟ್ಟಿ (Dileep Shetty)ಮತ್ತು ಖುಷಿ ಶಿವು ತೆರೆ ಮೇಲೆ ಮಾತ್ರವಲ್ಲ ತೆರೆಹಿಂದೆ ಕೂಡ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದು, ಇಬ್ಬರ ಮಧ್ಯೆ ಏನೋ ನಡಿತಿದೆ ಎನ್ನುವ ಗುಸು ಗುಸು ಕೂಡ ಕೇಳಿ ಬರ್ತಿದೆ. ಇಬ್ಬರು ಜೊತೆಯಾಗಿಯೇ ಇರಲಿ ಅನ್ನೋದು ಕೂಡ ಅಭಿಮಾನಿಗಳ ಆಶಯ. ಇದೀಗ ಖುಷಿ ಶೇರ್ ಮಾಡಿದ ಸ್ಪೆಷಲ್ ಪೋಸ್ಟ್ ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಹುಟ್ಟಿಸಿದೆ.ಲ್ 
 

Tap to resize

ಇವತ್ತು ವಿಕ್ರಮ್ ಖ್ಯಾತಿಯ ದಿಲೀಪ್ ಶೆಟ್ಟಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು ಈ ಹಿನ್ನೆಲೆಯಲ್ಲಿ ಖುಷಿ (Kushi Shivu) ತಮ್ಮ ಇನ್’ಸ್ಟಾಗ್ರಾಂ ಪೇಜ್ ನಲ್ಲಿ ಇಬ್ಬರ ಒಂದಷ್ಟು ಮುದ್ದಾದ ಅನ್ ಸೀನ್ ಫೋಟೊಗಳನ್ನು ಪೋಸ್ಟ್ ಮಾಡಿದ್ದು, ಅದರ ಜೊತೆಗೆ ಪ್ರೀತಿಯ ಗೆಳೆಯ ಚೋಮುವಿಗೆ ತುಂಬಾ ಮುದ್ದಾ ವಿಶ್ ಮಾಡಿದ್ದಾರೆ. 
 

ಖುಷಿ-ದಿಲೀಪ್ ಸಮುದ್ರ ತೀರದಲ್ಲಿ ಕುಳಿತಿರೋ ಫೋಟೊ, ಮುಖಕ್ಕೆ ಕೇಕ್ ಹಚ್ಚಿ ಕ್ಯೂಟ್ ಫೇಸ್ ಮಾಡಿರೋ ಫೋಟೊ, ವಿಕ್ರಮ್ ಗೆ ಎರಡು ಜುಟ್ಟು ಕಟ್ಟಿ ಹೂಮುಡಿಸಿರುವ ತುಂಬಾನೆ ಮುದ್ದು ಮುದ್ದಾದ ಫೋಟೊಗಳನ್ನು ಹಂಚಿಕೊಂಡಿರುವ ಖುಷಿ ಹ್ಯಾಪಿ ಬರ್ತ್ ಡೇ ಚೋಮು ಎಂದು ಬರೆದುಕೊಂಡಿದ್ದಾರೆ. 
 

ಅಷ್ಟೇ ಅಲ್ಲ, ಅದ್ಭುತವಾದ ನಟ, ನನ್ನ ಫೇವರಿಟ್ ಪರ್ಸನ್ ಗೆ (Favorite person) ಹುಟ್ಟುಹಬ್ಬದ ಶುಭಾಶಯಗಳು. ನಿನ್ನಿಂದಾಗಿ ನಟಿಸೋ ಪ್ರತಿಯೊಂದು ಸೀನ್ ಕೂಡ ಅದ್ಭುತವಾಗಿ ಮೂಡಿ ಬರ್ತಿದೆ. ನಿನ್ನನ್ನ ನೋಡಿದ್ರೆ ಮೊದಲ ನೋಟದಲ್ಲಿ ಎಲ್ಲರೂ ತಿಳ್ಕೊಳೋದು ನೀನೊಬ್ಬ ಆಟಿಟ್ಯೂಡ್ ಇರುವಂತಹ ವ್ಯಕ್ತಿ ಎಂದು, ಆದರೆ ನಿಜವಾಗಿ ನೀವು ಡೌನ್ ಟು ಅರ್ತ್ ಆಗಿರುವ ವ್ಯಕ್ತಿ. ನನ್ನ ಜೀವನದ ಭಾಗವಾಗಿರೋದಕ್ಕೆ ಥ್ಯಾಂಕ್ಯೂ. ಯಾವಾಗ್ಲೂ ಖುಷಿಯಾಗಿರು. ನಿನ್ನ ಎಲ್ಲಾ ಕನಸುಗಳು ನನಸಾಗಲಿ ಎಂದು ಖುಷಿ ಶಿವು ಹಾರೈಸಿದ್ದಾರೆ. 
 

ಖುಷಿ ಮಾಡಿರೋ ಸ್ಪೆಷಲ್ ವಿಶ್ ನೋಡಿ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ, ಕಿರುತೆರೆಯ ಮುದ್ದಾದ ಜೋಡಿ, ದಿಲೀಪ್ ಮತ್ತು ಖುಷಿ ಮೇಡ್ ಫಾರ್ ಈಚ್ ಅದರ್, ದಿಲೀಪ್ ಅಣ್ಣ ಹ್ಯಾಪಿ ಬರ್ತ್ ಡೇ (happy birthday), ನೀವು ಖುಷಿಯವರನ್ನೇ ಮದ್ವೆಯಾಗಿ ಎಂದು ಹಾರೈಸಿದ್ದಾರೆ. ಜೊತೆಗೆ ದಿಲೀಪ್ ಗೆ ಹುಟ್ಟುಹಬ್ಬದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. 
 

ವಿಕ್ರಮ್ ಆಲಿಯಾಸ್ ದಿಲೀಪ್ ಶೆಟ್ಟಿ ಬಗ್ಗೆ ಹೇಳೋದಾದ್ರೆ ದುಬೈನಲ್ಲಿ ಕೆಲಸ ಮಾಡುತ್ತಿದ್ದ, ಈ 6 ಫೀಟ್ ಉದ್ದದ ಹುಡುಗ ದಿಲೀಪ್, ನಟನೆಗಾಗಿ ಕೈತುಂಬಾ ಸಂಬಳ ನೀಡೊ ಕೆಲಸ ಬಿಟ್ಟು ಬೆಂಗಳೂರು ಸೇರಿದ್ದರು. ಇವರು ಮಾಡೆಲ್ ಕೂಡ ಹೌದು. ಕನ್ನಡ ಹಾಗೂ ತಮಿಳು, ತೆಲುಗು ಸೀರಿಯಲ್ ನಲ್ಲಿ ನಟಿಸಿರುವ ದಿಲೀಪ್ ಶೆಟ್ಟಿ, ನೀನಾದೆ ನಾ ಸೀರಿಯಲ್ ಮೂಲಕ ಮತ್ತಷ್ಟು ಜನಪ್ರಿಯತೆ ಪಡೆದರು, ಇದೀಗ ನೀನಾದೆ ನಾ ಭಾಗ ಎರಡರಲ್ಲೂ ವಿಕ್ರಮ್ ಆಗಿ ನಟಿಸುವ ಮೂಲಕ, ತಮ್ಮ ರಗಡ್ ಲುಕ್ ನಟನೆಯ ಮೂಲಕ ಕಿರುತೆರೆ ಪ್ರೇಕ್ಷಕರ ಫೇವರಿಟ್ ನಟ ಆಗಿದ್ದಾರೆ. 
 

Latest Videos

click me!