ಕೀರ್ತಿ ಕಥೆ ಮುಗಿಸಿದ ಕಾವೇರಿ... ಕೀರ್ತಿನ ಯಾರಾದ್ರೂ ಉಳಿಸಿ, ನ್ಯಾಯ ಕೊಡ್ಸಿ... ಕಣ್ಣೀರಿಟ್ಟ ವೀಕ್ಷಕರು!

First Published | Aug 7, 2024, 7:03 PM IST

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿಯ ಬಂಡವಾಳವನ್ನು ಬಯಲು ಮಾಡಲು ಬಂದ ಕೀರ್ತಿಯನ್ನೇ ಕಾವೇರಿ ಬೆಟ್ಟದಿಂದ ತಳ್ಳುವ ಮೂಲಕ ಕೀರ್ತಿ ಕಥೆ ಮುಗಿಸಿದ್ದಾಳೆ. ಪ್ರೋಮೋ ಪ್ರಸಾರವಾಗುತ್ತಿದ್ದಂತೆ ವೀಕ್ಷಕರು ಕಿಡಿ ಕಾರಿದ್ದಾರೆ. 

ಲಕ್ಷ್ಮೀ ಬಾರಮ್ಮ (Lakshmi Baramma) ಧಾರಾವಾಹಿ ಮುಂದಕ್ಕೆ ಹೋಗ್ತಾನೆ ಇಲ್ಲ ಒಂದು ತಿಂಗಳಿನಿಂದ ಅದೇ ದೃಶ್ಯಗಳನ್ನ ನೋಡಿ ನೋಡಿ ಸಾಕಾಯ್ತು ಎಂದು ವೀಕ್ಷಕರು ಟೀಕೆ ಮಾಡುತ್ತಿರುವಾಗ್ಲೇ ಇದೀಗ ಸೀರಿಯಲ್‌ನಲ್ಲಿ ದೊಡ್ಡದೊಂದು ಟ್ವಿಸ್ಟ್ ಕೊಟ್ಟಿದ್ದಾರೆ, ಆದರೆ ಈ ಟ್ವಿಸ್ಟ್ ವೀಕ್ಷಕರಿಗೆ ಮಾತ್ರ ಇಷ್ಟವಾಗಿಲ್ಲ. 
 

ಕಾವೇರಿಯ ಎಲ್ಲಾ ಮೋಸಗಳನ್ನು ಬಯಲು ಮಾಡೋದಕ್ಕೆ ಕೀರ್ತಿ ಆಕೆಯನ್ನ ಬೆಟ್ಟಕ್ಕೆ ಕರೆದುಕೊಂಡು ಹೋಗಿ ಆಕೆಯಿಂದ ಎಲ್ಲಾ ನಿಜಗಳನ್ನೂ ಬಾಯಿ ಬಿಡಿಸಿದ್ದಾಳೆ. ಇದೆಲ್ಲಾ ಆಗಿ ಇಬ್ಬರ ನಡುವೆ ಜಿದ್ದಾ ಜಿದ್ದಿ ನಡೆದು, ಕೀರ್ತಿಯನ್ನೇ ಕಾವೇರಿ ಬೆಟ್ಟದ ಮೇಲಿಂದ ತಳ್ಳುವ ಮೂಲಕ ಕೀರ್ತಿ ಕಥೆಗೆ ಅಂತ್ಯ ಹಾಡಿದ್ದಾರೆ. 
 

Tap to resize

ಆಂಟಿ ನನ್ನನ್ನ ಕಾಪಾಡಿ ಎಂದು ಕೀರ್ತಿ ಬೆಟ್ಟದ ಅಂಚಲ್ಲಿ ರಕ್ಷಣೆಗಾಗಿ ಕೂಗ್ತಿದ್ರೆ, ಕಾವೇರಿ ನನ್ನ ಮಗನನ್ನು ನನ್ನಿಂದ ದೂರ ಮಾಡೋಕೆ ಬಂದೋರನ್ನ ನಾನು ಸುಮ್ನೆ ಬಿಡೋದೇ ಇಲ್ಲ ಎಂದು ಹೇಳ್ತಾ ಕೀರ್ತಿಯ ಕೈಗಳಿಗೆ ಮೆಟ್ಟುವ ಮೂಲಕ ಆಕೆ ಪ್ರಪಾತಕ್ಕೆ ಬೀಳುವಂತೆ ಮಾಡಿದ್ದಾಳೆ. ಇದನ್ನೆಲ್ಲಾ ನೋಡಿ ವೀಕ್ಷಕರು ಕಣ್ಣೀರಿಟ್ಟಿದ್ದಾರೆ. 
 

ಕೀರ್ತಿ ಸತ್ರೆ ಈ ಸೀರಿಯಲ್‌ಗೆ ಅರ್ಥಾನೆ ಇರಲ್ಲ . ಬೇರೆ ಏನಾದ್ರೂ ಟ್ವಿಸ್ಟ್ ಹಾಕಿ.  ಕೆಟ್ಟವರಿಗೆ ಒಳ್ಳೇದೇ ಆಗೋದೇ ಆದ್ರೆ ಇಂಥ ಸೀರಿಯಲ್‌ಗೆ ಅರ್ಥಾನೆ ಇಲ್ಲ. ಕೀರ್ತಿ ಬದುಕಿ ಬರಲಿ, ಯಾರಾದ್ರೂ ಕೀರ್ತಿಯನ್ನು ಬದುಕಿಸಲಿ, ಈ ಸೀರಿಯಲ್ ನೋಡ್ತಿದ್ದಿದ್ದೇ ಕೀರ್ತಿಗೋಸ್ಕರ ಆಕೆ ಬದುಕಿ ಬರಲಿ, ಕೀರ್ತಿಗೆ ನ್ಯಾಯ ಸಿಗಲಿ ಎಂದು ಬೇಡ್ಕೊಳ್ತಿದ್ದಾಳೆ ವೀಕ್ಷಕರು. 
 

ಕೀರ್ತಿ ಯಾವುದೇ ಕಾರಣಕ್ಕೂ ಸಾಯಬಾರದು ಅವರನ್ನ ಮಹಾಲಕ್ಷ್ಮೀ ಮತ್ತೆ ವೈಷ್ಣವ್ ಅವರು ಅಥವಾ ಬೇರೆಯರಾದ್ರೂ ಅವರನ್ನು ಕಾಪಾಡಬೇಕು ಪಾಪ ಕೀರ್ತಿ ಪ್ಲೀಸ್ ಅವರನ್ನು ಯಾರಾದ್ರೂ ಕಾಪಾಡಿರಲಿ ಪಾ ದೇವರೇ ಎಂದು ಸಹ ಬೇಡಿಕೊಂಡಿದ್ದಾರೆ ಜನ. ಅಷ್ಟೇ ಅಲ್ಲ ಪಾಪ ಕೀರ್ತಿ ನನಗೆ ಇವತ್ತಿನ ಎಪಿಸೋಡ್ ನೋಡಿ ಕಣ್ಣೀರು ಬಂತು. ಕೀರ್ತಿ ಸತ್ತೋದರೆ ಈ ಸೀರಿಯಲ್ ನೋಡಲ್ಲ ಎಂದು ಕೂಡ ಹೇಳಿದ್ದಾರೆ ಜನ. 
 

ಇನ್ನು ಹೆಚ್ಚಿನ ಜನರು ಕೀರ್ತಿಯ (Keerthi) ನಟನೆಗೆ ಬೇಷ್ ಅಂದಿದ್ದು, ಈ ಧಾರಾವಾಹಿಯಲ್ಲಿ ಅದ್ಭುತವಾಗಿ ನಟಿಸುವ ಒಬ್ಬರೇ ಒಬ್ಬರು ನಟಿ ಅಂದ್ರೆ ಅದು ಕೀರ್ತಿ. ಯಾವುದೇ ಸನ್ನಿವೇಷ ಇದ್ರೂ ಅದನ್ನ ಎಷ್ಟು ಚೆನ್ನಾಗಿ ಅಭಿನಯಿಸ್ತಾರೆ. ಕೀರ್ತಿ ನಟನೆ ಅದ್ಭುತ, ಮಾರ್ವಲಸ್ ಎಂದೆಲ್ಲಾ ಹೊಗಳಿದ್ದಾರೆ. 
 

ಪ್ರೊಮೋದಲ್ಲಿ ತೋರಿಸಿದಂತೆ ಸದ್ಯ ವೈಷ್ಣವ್ ಮತ್ತು ಲಕ್ಷ್ಮೀ ಬೆಟ್ಟದ ಮೇಲೆ ಬಂದಾಗಿದೆ. ಅವರಿಬ್ಬರಿಗೆ ನಿಜ ತಿಳಿಯುತ್ತಾ? ಕೀರ್ತಿ ಮಾಡಿಟ್ಟ ವಿಡಿಯೋ ಸಿಗುತ್ತಾ? ಮರದ ಮರೆಯಲ್ಲಿ ನಿಂತು ನೋಡ್ತಿರೋ ವ್ಯಕ್ತಿ ಯಾರು? ಅವನಿಂದ ಏನಾದ್ರೂ ಸುಳಿವು ಸಿಗುತ್ತಾ? ಅಥವಾ ಕಾವೇರಿ ಇಲ್ಲಿ ಏನು ನಡೆದೇ ಇಲ್ಲ ಎನ್ನುವಂತೆ ಎಲ್ಲರನ್ನೂ ನಂಬಿಸ್ತಾಳಾ, ಕೀರ್ತಿ ನಿಜವಾಗ್ಲೂ ಸತ್ತು ಹೋಗ್ತಾಳಾ? ಅಥವಾ ನೆನಪಿನ ಶಕ್ತಿ ಕಳೆದುಕೊಳ್ತಾಳ? ಭೂತವಾಗಿ ಬಂದು ಕಾಡ್ತಾಳಾ? ಎಲ್ಲವನ್ನೂ ತಿಳಿಯೋದಕ್ಕೆ ಮುಂದಿನ ಎಪಿಸೋಡ್ ವರೆಗೂ ಕಾಯಬೇಕು. 
 

Latest Videos

click me!