ಒಂದು ಕಾಲದಲ್ಲಿ ಕನ್ನಡ ಕಿರುತೆರೆಯಲ್ಲಿ ಸಲ್ವಾರ್, ಸೀರೆ ಎಂದು ಗೌರಮ್ಮನ ಥರ ಕಾಣಿಸಿಕೊಳ್ಳುತ್ತಿದ್ದ ನಟಿ ಜ್ಯೋತಿ ರೈ (Jyothi Rai) ಈವಾಗ ಯಾವ ರೀತಿ ಬದಲಾಗಿದ್ದಾರೆ ಅನ್ನೋದು ನಿಮಗೆ ಗೊತ್ತಿದೆ. ಜ್ಯೋತಿ ಇತ್ತೀಚೆಗಂತೂ ಸಿಕ್ಕಾಪಟ್ಟೆ ಬೋಲ್ಡ್ ಆಗಿಬಿಟ್ಟಿದ್ದಾರೆ, ಇವರ ಹೊಸ ಅವತಾರ ನೋಡಿದ್ರೆ, ಅವರು ಇವರೇನಾ ಎಂದು ಕೇಳುವಷ್ಟು ಬದಲಾಗಿದ್ದಾರೆ.
ಕನ್ನಡದಲ್ಲಿ ಬಂದೇ ಬರುತಾವ ಕಾಲ ಮೂಲಕ ನಟನೆಗೆ ಎಂಟ್ರಿ ಕೊಟ್ಟ ಜ್ಯೋತಿ ನಂತರ ಗೆಜ್ಜೆ ಪೂಜೆ, ಜೋಗುಳ, ಕಿನ್ನರಿ ಸೇರಿ ಹಲವು ಧಾರಾವಾಹಿಗಳಲ್ಲಿ ನಾಯಕಿ ಹಾಗೂ ಪೋಷಕ ನಟಿಯ ಪಾತ್ರದಲ್ಲಿ ನಟಿಸಿದ್ದರು, ಅಷ್ಟೇ ಅಲ್ಲ ತೆಲುಗಿನಲ್ಲಿ ಕೂಡ ತಾಯಿಯ ಪಾತ್ರದಲ್ಲಿ ಗುರುತಿಸಿಕೊಂಡಿದ್ದರು. ಇದೀಗ ಕಿರುತೆರೆಯಿಂದ ದೂರ ಉಳಿದಿರುವ ನಟಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ತೆಲುಗಿನ ಯುವ ನಿರ್ದೇಶಕ ಪೂರ್ವಜ್ ಜೊತೆಗೆ ತಮ್ಮ ಎರಡನೇ ಮದುವೆಯಿಂದ ಸುದ್ದಿಯಾಗಿದ್ದ ನಟಿ, ಇದೀಗ ತೆಲುಗಿನಲ್ಲಿ ಪೂರ್ತಿಯಾಗಿ ಬ್ಯುಸಿಯಾಗಿದ್ದಾರೆ. ತೆಲುಗು ಸಿನಿಮಾ, ಎರಡು ತೆಲುಗು ವೆಬ್ ಸೀರೀಸ್ ಗಳಲ್ಲಿ ಜ್ಯೋತಿ ನಟಿಸುತ್ತಿದ್ದು, ವೆಬ್ ಸೀರೀಸ್ ಗಾಗಿ (web series) ತುಂಬಾನೆ ಬೋಲ್ಡ್ ಅವತಾರ ಎತ್ತಿದ್ದಾರೆ.
ಪತಿ ಪೂರ್ವಜ್ ನಿರ್ದೇಶಿಸುತ್ತಿರುವ ಮಾಸ್ಟರ್ ಪೀಸ್ ಸಿನಿಮಾದಲ್ಲಿ ನಟಿ ಐದು ಶೇಡಿನಲ್ಲಿ ನಟಿಸುತ್ತಿದ್ದು, ಮುಂದಿನ ವರ್ಷ ರಿಲೀಸ್ ಆಗಲಿದೆ. ಇದಲ್ಲದೇ ಕನ್ನಡ, ಹಿಂದಿ, ಮಲಯಾಳಂನಲ್ಲೂ ಒಂದೊಂದು ಸಿನಿಮಾಗಳಲ್ಲಿ ಜ್ಯೋತಿ ರೈ ನಟಿಸುತ್ತಿದ್ದಾರೆ.
ಜ್ಯೋತಿ ರೈ ಈ ಹಿಂದೆ ಕನ್ನಡ ಸಿನಿಮಾಗಳಲ್ಲಿ ಹೆಚ್ಚಿನ ಅವಕಾಶ ಸಿಗದಿರೋದಕ್ಕೆ ಬೇಸರ ವ್ಯಕ್ತಪಡಿಸಿದ್ದರು. ತಮ್ಮ ಕರಿಯರ್ ಬೆಳವಣಿಗೆಗಾಗಿ ಸದ್ಯ ಕಿರುತೆರೆಯಿಂದ ದೂರ ಉಳಿದು, ಹಿರಿತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ನಟಿಗೆ ಸಿನಿಮಾಗಳಲ್ಲಿಯೂ ಅವಕಾಶ ಸಿಗುತ್ತಿದ್ದು, ಅದಕ್ಕೆ ಪತಿ ಪೂರ್ವಜ್ ಕೂಡ ಬೆಂಬಲ ನೀಡುತ್ತಿದ್ದಾರಂತೆ.
ಸೋಶಿಯಲ್ ಮೀಡಿಯಾದಲ್ಲಿ (Social media) ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿರುವ ಜ್ಯೋತಿ ರೈ ತಮ್ಮ ಹಾಟ್ ಫೋಟೊಗಳಿಂದಲೇ ಇಂಟರ್ನೆಟ್‌ನಲ್ಲಿ ಕಿಚ್ಚು ಹಚ್ಚುತ್ತಾರೆ. ಇವರು ಸೀರೆಯಲ್ಲೂ ತಮ್ಮ ಮೈಮಾಟ ಪ್ರದರ್ಶಿಸುತ್ತಾ ಸಖತ್ ಬೋಲ್ಡ್ ಆಗಿಯೇ ಪೋಸ್ ನೀಡುತ್ತಾರೆ. ಈ ಬಾರಿಯೂ ನಟಿ ಕೊಂಚ ಸೆರಗು ಕೆಳಗಿಳಿಸಿ, ಸೈಡಲ್ಲಿ ಸೊಂಟ ಕಾಣುವಂತೆ ಸೀರೆಯುಟ್ಟು ಪೋಸ್ ನೀಡಿದ್ದಾರೆ.
ಕಪ್ಪು ಬಣ್ಣದ ಶಿಮ್ಮರ್ ಸೀರೆಯಲ್ಲಿ ಜ್ಯೋತಿ ರೈ ಅಂದವನ್ನು ನೋಡಿ, ಪಡ್ಡೆಗಳು ಖುಷಿಪಟ್ಟಿದ್ದಾರೆ. ನಿಮ್ಮ ಅಂದ ಹೊಗಳಲು ಪದಗಳೇ ಸಾಲುತ್ತಿಲ್ಲ, ಸುಂದರಿ, ಎಣ್ಣೆ ಹೊಡೆಯದೇ ನಶೆ ಏರ್ತಾ ಇದೆ, ಅದ್ಭುತ ಸುಂದರಿ ನೀವು, ಅಂತೆಲ್ಲಾ ಹಾಡಿ ಹೊಗಳಿದ್ದಾರೆ.