ಮತ್ತೆ ಮಗುವಿನ‌ ಹುಟ್ಟಿದಬ್ಬದ ಫೋಟೋ ಶೇರ್ ಮಾಡಿದ ನೇಹಾ ಗೌಡ : ಗೊಂಬೆ ಮಗೂನಾ? ಕೇಳ್ತಿದ್ದಾರೆ ಜನ!

Published : May 27, 2024, 02:17 PM IST

ಲಕ್ಷ್ಮೀ ಬಾರಮ್ಮ ನಟಿ ನೇಹಾ ರಾಮಕೃಷ್ಣ ಮಗುವಿನ ಜೊತೆಗಿನ ಫೋಟೋ ಶೇರ್ ಮಾಡಿದ್ದು, ಅಭಿಮಾನಿಗಳು ದತ್ತು ತೆಗೊಂಡ್ರಾ ಎಂದು ಮತ್ತೆ ನಟಿಯನ್ನು ಪ್ರಶ್ನಿಸುತ್ತಿದ್ದಾರೆ.   

PREV
17
ಮತ್ತೆ ಮಗುವಿನ‌ ಹುಟ್ಟಿದಬ್ಬದ ಫೋಟೋ ಶೇರ್ ಮಾಡಿದ ನೇಹಾ ಗೌಡ : ಗೊಂಬೆ ಮಗೂನಾ? ಕೇಳ್ತಿದ್ದಾರೆ ಜನ!

ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿದ್ದ ಲಕ್ಷ್ಮೀ ಬಾರಮ್ಮ ಸೀರಿಯಲ್ ನಲ್ಲಿ ಗೊಂಬೆಯಾಗಿ ಅಭಿನಯಿಸುವ ಮೂಲಕ ಜನಮನ ಗೆದ್ದ ನಟಿ ನೇಹಾ ರಾಮಕೃಷ್ಣ (Neha Ramakrishna). ನಂತರ ನಮ್ಮ ಲಚ್ಚಿ ಸೀರಿಯಲ್ಲಲ್ಲೂ ಮಿಂಚಿದರು. ಕೆಲವೊಂದು ಸೀರಿಯಲ್‌ಗಳಲ್ಲಿ ಅತಿಥಿ ಪಾತ್ರದಲ್ಲೂ ನಟಿಸಿದ್ದರು. 
 

27

ಇವರ ಗಂಡ ಸಹ ಈಗ ಜನರಿಗೆ ಚಿರಪರಿಚಿತ ರಾಜಾ ರಾಣಿ (Raja Rani) ಸೀಸನ್ ಒಂದರಲ್ಲಿ ಜೊತೆಯಾಗಿ ಭಾಗವಹಿಸಿದ ನೇಹಾ ಮತ್ತು ಚಂದನ್ ಜೋಡಿ, ಈ ಸೀಸನ್‌ನ ವಿನ್ನರ್ ಕಿರೀಟವನ್ನು ಮುಡಿಗೇರಿಸಿಕೊಂಡರು. ಇವರಿಬ್ಬರದು ಸುಮಾರು 25 ವರ್ಷಗಳ ಲವ್. 
 

37

ಸದ್ಯ ಚಂದನ್ (Chandan) ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಂತರಪಟ ಸೀರಿಯಲ್‌ನಲ್ಲಿ ನಾಯಕ ಸುಶಾಂತ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಈ ಸೀರಿಯಲ್ ಕೂಡ ಜನ ಮೆಚ್ಚುಗೆಗೆ ಪಾತ್ರವಾಗಿದೆ. ನಟನೆಗೆ ಹೊಸಬರಾದ ಚಂದನ್ ಕೂಡ ಸದ್ಯ ತಮ್ಮ ಅದ್ಭುತ ನಟನೆಯಿಂದ ಜನಮನ ಗೆದ್ದಿದ್ದಾರೆ. 
 

47

ರಾಜಾರಾಣಿ ಕಾರ್ಯಕ್ರಮದಲ್ಲಿ ನೇಹಾ ತಮಗೆ ನಮ್ಮದೇ ಆದ ಮಗು ಬೇಡ. ಯಾವುದಾದರು ಹೆಣ್ಣು ಮಗುವನ್ನು ದತ್ತು ತೆಗೆದು ಕೊಳ್ಳುವುದು ತಮ್ಮ ಕನಸು ಎಂದು ಹೇಳಿಕೊಂಡಿದ್ದರು. ಬಳಿಕ ನೇಹಾ ಯಾವುದೇ ಮಗುವಿನ ಜೊತೆ ಕಾಣಿಸಿಕೊಂಡರೂ ದತ್ತು ತೆಗೆದುಕೊಂಡ್ರಾ ಅಂತ ಜನ ಪ್ರಶ್ನಿಸುತ್ತಿದ್ದಾರೆ. 
 

57

ಇತ್ತೀಚೆಗೆ ಚಂದನ್ ಮತ್ತು ನೇಹಾ ಒಂದು ಮುದ್ದಾದ ಮಗುವಿನ ಜೊತೆಗೆ ಹಲವು ಫೋಟೋಗಳನ್ನು ಹಂಚಿ ಕೊಂಡಿದ್ದರು. ಮಗುವಿನ ಹುಟ್ಟು ಹಬ್ಬದ ಸಂದರ್ಭದಲ್ಲಿ ತೆಗೆದಂತಹ ಫೋಟೋ ಇದಾಗಿತ್ತು. ಜೊತೆಗೆ ಮಗುವಿಗೆ ಬರ್ತ್ ಡೇ ವಿಶ್ ಮಾಡಿ ಉದ್ದವಾದ ನೋಟ್ ಕೂಡ ಬರೆದಿದ್ದರು ನೇಹಾ. 
 

67

ನಮ್ಮ ಪ್ರೀಶಿಯಸ್ ಸಿಂಚುಗೆ 2 ನೇ ಹುಟ್ಟುಹಬ್ಬದ ಶುಭಾಶಯಗಳು! ನೀವು ಇವತ್ತು ಇದನ್ನು ಓದದಿದ್ದರೂ, ಒಂದು ದಿನ ನೀನು ನಮ್ಮ ಕುಟುಂಬಕ್ಕೆ ಎಷ್ಟು ಸಂತೋಷ ಮತ್ತು ಬೆಳಕನ್ನು ತಂದಿದ್ದಿ ಅನ್ನೋದನ್ನು ಇದನ್ನು ಓದುವ ಮೂಲಕ ತಿಳಿದುಕೊಳ್ಳುವೆ. ನಿನ್ನ ನಗು ಮತ್ತು ಇಷ್ಟು ಚಿಕ್ಕ ವಯಸ್ಸಿನಲ್ಲಿಯೂ ಎಲ್ಲವನ್ನೂ ಅರ್ಥಮಾಡಿಕೊಳ್ಳುವ ಸ್ವಭಾವ, ನಮ್ಮೆಲ್ಲರನ್ನೂ ಬೆರಗುಗೊಳಿಸುತ್ತದೆ. ನೀನು ನಮ್ಮ ಜೀವನವನ್ನು ಸಂತೋಷ ಮತ್ತು ಮ್ಯಾಜಿಕ್‌ನಿಂದ ತುಂಬಿದ್ದಿ. ನೀನು ಬೆಳೆದಂತೆ ನಿನ್ನ ನಗು ಮತ್ತು ಸಂತೋಷ ನಮ್ಮ ಜೀವನವನ್ನು ಬೆಳಗಿಸಲಿ ಎಂದು ಬರೆದುಕೊಂಡಿದ್ದಾರೆ. 
 

77

ಈ ಫೋಟೋ ಮತ್ತು ನೇಹಾ ಬರೆದಿರುವ ವಿವರಣೆ ನೋಡಿ ಹೆಚ್ಚಿನ ಜನ ಕನ್ ಫ್ಯೂಸ್ ಆಗಿದ್ದಾರೆ. ಮೇಡಂ ನಿಮ್ಮ ಮಗುನಾ? ನೀವು ದತ್ತು ತೆಗೆದುಕೊಂಡ್ರಾ? ಯಾರ ಮಗು ಇದು? ಮಗು ಥೇಟ್ ಅಮ್ಮ, ಅಪ್ಪನ ಥರಾನೆ ಮುದ್ದಾಗಿದೆ… ನಿಮ್ಮ ಮಗುನ ಯಾವಾಗ ತೋರಿಸ್ತೀರಾ? ಎಂದೆಲ್ಲಾ ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ ಅಭಿಮಾನಿಗಳು. ನಿಜವಾಗಿ ಆ ಮಗು ನೇಹಾ ಅವರ ಸೋದರ ಸಂಬಂಧಿಯೊಬ್ಬರು ಮಗು, ನೇಹಾ ಮಗುವಿಗೆ ವರಸೆಯಲ್ಲಿ ಚಿಕ್ಕಮ್ಮ ಆಗಬೇಕು. 
 

Read more Photos on
click me!

Recommended Stories