ರಿಯಲ್‌ ಲೈಫ್‌ ನಲ್ಲಿ ವಿಕ್ರಮ್‌ -ವೇದಾ ಮಧ್ಯೆ ಸಂಥಿಂಗ್... ಸಂಥಿಂಗ್..., ಲೈಲಾ ಮಜ್ನು ಎಂದ ಫ್ಯಾನ್ಸ್!

First Published | May 25, 2024, 8:35 PM IST

ಸ್ಟಾರ್ ಸುವರ್ಣ (Star Suvarna)ದಲ್ಲಿ ಪ್ರಸಾರವಾಗುತ್ತಿರುವ ನೀನಾದೆ ನಾ ಧಾರವಾಹಿ  ಪ್ರೇಕ್ಷಕರ ಮನ ಗೆದ್ದಿದೆ. ಇದರ ನಾಯಕ-ನಾಯಕಿ ಕಿರುತೆರೆಯ ಮೋಸ್ಟ್ ಫೇವರಿಟ್ ಜೋಡಿ ಎನಿಸಿಕೊಂಡಿದ್ದಾರೆ. ಇದೀಗ ಇವರಿಬ್ಬರ ಮಧ್ಯೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದೆ ಎಂದು ಗಾಸಿಪ್‌ ಎದ್ದಿದೆ.

ವಿಕ್ರಮ್ ಮತ್ತು ವೇದಾ (Vikram and Vedha) ಅನ್ನೋದಕ್ಕಿಂತ ಗುಂಡ ಮತ್ತು ಬೇತಾಳ ಕರೆದುಕೊಳ್ಳುವ ನಾಯಕ ನಾಯಕಿ ಜೋಡಿಯನ್ನು ತೆರೆಯಲ್ಲಿ ಜನ ಮೆಚ್ಚಿಕೊಂಡಿದ್ದಾರೆ.  ಆದರೆ ಈ ಜೋಡಿಯನ್ನು ನೋಡಿದಾಗ ವೀಕ್ಷಕರು ಈ ಜೋಡಿ ಮಧ್ಯೆ ಏನೋ ಇದೆ ಎಂದು ಊಹಿಸಿದ್ದಾರೆ.

ಇದಕ್ಕೆ ಕಾರಣವಿದೆ. ತೆರೆಯ ಹಿಂದಿನ ದೃಶ್ಯಗಳು,ಶೂಟಿಂಗ್ ಸೆಟ್‌ ನಲ್ಲಿನ ಕೆಲವೊಂದು ತರಲೆ ತುಂಟಾದ ದೃಶ್ಯಗಳು ವೈರಲ್ ಆಗುತ್ತಿದೆ. ಜೊತೆಗೆ ಇವರಿಬ್ಬರೂ ತುಂಬಾ ಕ್ಯೂಟ್‌ ಜೋಡಿ. ರಿಯಲ್‌ ಲೈಫ್‌ ನಲ್ಲಿ ಜೋಡಿಯಾದರೆ ಚೆನ್ನ ಎಂದು ನೆಟ್ಟಿಗರು ಮೀಮ್ಸ್ ಮಾಡುತ್ತಿರುತ್ತಾರೆ.

Tap to resize

ಮಾತ್ರವಲ್ಲ ಇತ್ತೀಚೆಗೆ ತೆಲುಗು ವಾಹಿನಿಯಲ್ಲಿ ನನ್ನ ಬೆಸ್ಟ್ ಫ್ರೆಂಡ್ ಎಂದು ಖುಷಿಯನ್ನು ಪರಿಚಯಿಸಿದ್ದಾರೆ. ಅಲ್ಲಿಂದ ಇವರಿಬ್ಬರೂ ಪ್ರೀತಿಯಲ್ಲಿ ಇದ್ದಾರೆ ಎಂದು ಅಭಿಮಾನಿಗಳು ಬಲವಾಗಿ ನಂಬಿದ್ದಾರೆ.

ದಿಲೀಪ್ ತೆಲುಗು ಧಾರವಾಹಿಯೊಂದರಲ್ಲಿ ಅಭಿನಯಿಸುತ್ತಿದ್ದು, ಈ ವಾಹಿನಿಯ ಕಾರ್ಯಕ್ರಮವೊಂದಕ್ಕೆ ಖುಷಿಯನ್ನು ದಿಲೀಪ್ ಅವರ ವಿಶೇಷ ಸ್ನೇಹಿತೆ ಎಂದು ಸಪ್ರೈಸ್‌ ಆಗಿ ಕರೆಸಲಾಗಿತ್ತು. ಆಗಲೇ ಇಬ್ಬರ ನಡುವಿನ ಗೆಳೆತನದ ಬಗ್ಗೆ ಎಲ್ಲರಿಗೂ ಅನುಮಾನ ಮೂಡಿತ್ತು. ಅಲ್ಲದೆ ಇತ್ತೀಚೆಗೆ ಇಬ್ಬರೂ ಜೊತೆಯಾಗಿ ಯೂ ಟ್ಯೂಬ್ ಚಾನೆಲ್ ಒಂದನ್ನು ಕೂಡ ಆರಂಭಿಸಿದ್ದಾರೆ. 

ಇತ್ತೀಚೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಇಬ್ಬರೂ ಭಾಗಿಯಾಗಿದ್ದರು. ನಿರೂಪಕಿ ಅನುಪಮಾ ಗೌಡ ವಿಶೇಷ ಸ್ನೇಹಿತೆಯೆಂದು ದಿಲೀಪ್ ಕಾಲೆಳೆದರು. ಆಗ ಇಬ್ಬರೂ ಕೂಡ ನಾಚಿ ನೀರಾಗಿದ್ದಾರೆ. ಖುಷಿ ಬಗ್ಗೆ ಹೇಳಿ ಎಂದಾಗ ನನ್ನ ಏನೇ ಕಷ್ಟ-ಸುಖ ಇದ್ದರೂ ಆಕೆಯೊಂದಿಗೆ ಹಂಚಿಕೊಳ್ಳುತ್ತೇನೆ. ಆಕೆಯೂ ನನ್ನ ಜೊತೆ ಹಂಚಿಕೊಳ್ಳುತ್ತಾಳೆ. ಈಗ ನಾಬಿಬ್ಬರೂ ಬೆಸ್ಟ್ ಫ್ರೆಂಡ್ಸ್ ಎಂದಿದ್ದಾರೆ. 

ಆದರೆ ಇಬ್ಬರ ನಡುವಿನ ಸ್ನೇಹ ನೋಡಿದರೆ ಸ್ನೇಹಕ್ಕೂ ಮೀರಿದ ಸಂಬಂಧವಿದೆ. ಇವರಿಬ್ಬರೂ ಪರಸ್ಪರ ನಿಜ ಜೀವನದಲ್ಲೂ ಒಂದಾಗುತ್ತಿದ್ದಾರೆ ಎಂಬ ಗಾಸಿಪ್ ಹಬ್ಬಿದೆ. ಅದಕ್ಕೆ ತಕ್ಕಂತೆ ಅಭಿಮಾನಿಗಳು ನೀವು ರಿಯಲ್‌ ಲೈಫ್ ನಲ್ಲೂ  ಜೋಡಿಯಾದರೆ ರಾಧಾ ಕೃಷ್ಣರಂತೆ ಜೋಡಿಯಾಗಿರುತ್ತೀರಿ. ನಿಜ ಜೀವನದ ಜೋಡಿಯಾದರೆ ನಮ್ಮ ಹೃದಯದಲ್ಲಿ ತುಂಬಾ ಎತ್ತರದ ಸ್ಥಾನದಲ್ಲಿ ಇರುತ್ತೀರಿ ಎಂದು ಕಮೆಂಟ್ ಮಾಡಿದ್ದಾರೆ. 

6 ಅಡಿ ಕಟೌಟ್‌ ಗೆ ಮೂರಡಿ ಕಟೌಟ್‌ ಜೋಡಿಯಾದರೆ ಎಷ್ಟು ಚೆನ್ನಾಗಿರುತ್ತೆ ಎಂದು ಅವರ ಅಭಿಮಾನಿಗಳು ಆಶಿಸುತ್ತಿದ್ದು, ವಿಕ್ದ (ವಿಕ್ರಮ್‌ -ವೇದಾ)ಎಂದು ಜೊತೆಯಾಗಿ ಹೆಸರನ್ನು ಕೂಡ ಇಟ್ಟಿದ್ದಾರೆ. ನಿವೀಬ್ರು ಮದುವೆಯಾಗಿ, ಈ ಮುದ್ದಾದ ಜೋಡಿಗೆ ಯಾರ ದೃಷ್ಟಿಯೂ ಬೀಳದಿರಲಿ ಎಂದು ಫ್ಯಾನ್ಸ್ ಹಾರೈಸಿದ್ದಾರೆ. 

ಇನ್ನು ರಿಯಲ್‌ ಲೈಫ್ ಹೆಸರಾದ ದಿಲೀಪ್‌ ಮತ್ತು ಖುಷಿ ಶಿವು ಹೆಸರನ್ನು ಜೊತೆಯಾಗಿ ದಿಲ್‌ಖುಷ್‌ ಎಂಬ ಪೇಜ್ ಕೂಡ ಕ್ರೀಯೇಟ್ ಮಾಡಿದ್ದಾರೆ. ಅಭಿಮಾನಿಗಳ ಹೆಸರಿಟ್ಟಂತೆಯೇ ಇಬ್ಬರೂ ಜೊತೆಯಾಗಿ ಇದೇ ಹೆಸರಿನಲ್ಲಿ ಯೂಟ್ಯೂಬ್ ಕೂಡ ಆರಂಭಿಸಿದ್ದಾರೆ.

ಒರಟ ಗಂಡನ ವಿಕ್ರಮ್‌ ಪಾತ್ರದಲ್ಲಿ ದಿಲೀಪ್ ಶೆಟ್ಟಿ ಮತ್ತು ಗಂಡನನ್ನು ಸರಿದಾರಿಗೆ ತರುವ ದಿಟ್ಟ ಹೆಣ್ಣಿನ ವೇದಾ ಪಾತ್ರದಲ್ಲಿ ಖುಷಿ ಶಿವು ನಟಿಸುತ್ತಿದ್ದಾರೆ. ಸ್ಟಾರ್ ಸುವರ್ಣದಲ್ಲಿ ನೀನಾದೆ ನಾ ಸೀರಿಯಲ್ ಮೂಡಿಬರುತ್ತಿದ್ದು, ವಿಕ್ರಮ್‌ ಪಾತ್ರದಲ್ಲಿ  ದಿಲೀಪ್‌ ಶೆಟ್ಟಿ ಮತ್ತು ವೇದಾ ಪಾತ್ರದಲ್ಲಿ ಖುಷಿ ನಟಿಸುತ್ತಿದ್ದಾರೆ,  ರಮೇಶ್‌ ಅರವಿಂದ್‌ ನಿರ್ಮಾಣದ ಈ ಧಾರವಾಹಿಗಿದೆ.

Latest Videos

click me!