ಬಹುಕಾಲದ ಗೆಳೆಯನ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಯನಾ ನಾಗರಾಜ್

First Published Jun 17, 2024, 5:42 PM IST

ಪಾಪ ಪಾಂಡು, ಗಿಣಿರಾಮ ಸೀರಿಯಲ್ ಗಳಲ್ಲಿ ಮಿಂಚಿದ ನಟಿ ನಯನಾ ನಾಗರಾಜ್ ಇದೀಗ ತಮ್ಮ ಬಹುಕಾಲದ ಗೆಳೆಯನ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 
 

ಸ್ಯಾಂಡಲ್‌ವುಡ್‌ನಲ್ಲಿ ಈಗ ಮದುವೆಯ ಸಂಭ್ರಮ. ಇತ್ತೀಚೆಗಷ್ಟೇ ನಟಿ ಹಾಗೂ ಬಿಗ್ ಬಾಸ್ ಸ್ಪರ್ಧಿ ಸಿರಿ ವೈವಾಹಿಕ ಜೀವನಕ್ಕೆ ಕಾಲಿಟ್ಟು ಸುದ್ದಿಯಾಗಿದ್ದರು. ಇದೀಗ ನಯನಾ ನಾಗರಾಜ್ (Nayana Nagraj) ಸಪ್ತಪದಿ ತುಳಿದಿದ್ದಾರೆ. 
 

ಹೌದು,ಕೆಲ ತಿಂಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದ, ನಟಿ ನಯನಾ ನಾಗರಾಜ್ ತಮ್ಮ ಬಹುಕಾಲದ ಗೆಳೆಯ ಸುಹಾಸ್ ಶಿವಣ್ಣ (Suhas Shivanna) ಜೊತೆ ಜೂನ್ 16 ರಂದು ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 
 

ನಯನಾ ನಾಗರಾಜ್ ಅವರು ‘ಪಾಪ ಪಾಂಡು’ ಹಾಗೂ ‘ಗಿಣಿರಾಮ’ ಧಾರಾವಾಹಿಗಳಲ್ಲಿ ನಟಿಸಿದ್ದರು. ಗಿಣಿರಾಮ ಧಾರಾವಾಹಿಯ ಮಹತಿ ಶಿವರಾಮ್ ದೇಶಪಾಂಡೆ ಪಾತ್ರ ಅವರಿಗೆ ಹೆಚ್ಚಿನ ಹೆಸರು ಹಾಗೂ ಜನಪ್ರಿಯತೆ ತಂದುಕೊಟ್ಟಿತು. ಇವರೊಬ್ಬ ಉತ್ತಮ ಗಾಯಕಿಯೂ ಹೌದು. 
 

ನಯನಾ ತಮ್ಮ ಬಹು ಕಾಲದ ಗೆಳೆಯ ಸುಹಾಸ್ ಶಿವಣ್ಣ ಅವರೊಂದಿಗೆ ಸಪ್ತಪದಿ ತುಳಿದಿದ್ದಾರೆ. ಈ ಜೋಡಿ ಹತ್ತು ವರ್ಷಗಳಿಂದ ಪ್ರೀತಿಸುತ್ತಿತ್ತು. ಆದರೆ ತಮ್ಮ ಪ್ರೀತಿ ಬಗ್ಗೆ ನಯನಾ ಎಲ್ಲೂ ಬಹಿರಂಗವಾಗಿ ಹೇಳಿಕೆ ನೀಡಿರಲಿಲ್ಲ, ಸೋಶಿಯಲ್ ಮಿಡಿಯಾದಲ್ಲೂ ಹಂಚಿಕೊಂಡಿರಲಿಲ್ಲ. 
 

ಕೆಲ ತಿಂಗಳ ಹಿಂದೆ ಈ ಜೋಡಿ ಕುಟುಂಬಸ್ಥರ ಸಮ್ಮುಖದಲ್ಲಿ ಸರಳವಾಗಿ ತಮ್ಮ ಮನೆಯಲ್ಲಿಯೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆವಾಗಲೇ ನಯನಾ ತಮ್ಮ ಹತ್ತು ವರ್ಷಗಳ ಪ್ರೀತಿ, ಮನೆಯವರನ್ನು ಒಪ್ಪಿಗೆ, ನಿಶ್ಚಿತಾರ್ಥದ ಬಗ್ಗೆ ಹಂಚಿಕೊಂಡಿದ್ದರು. 
 

ಸುಹಾಸ್ ಶಿವಣ್ಣ ಕೂಡ ರಂಗಭೂಮಿಯಲ್ಲಿ ಗುರುತಿಸಿಕೊಂಡವರು. ಇವರಿಬ್ಬರು ಹಾಡುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ. 
 

ಇನ್ನು ಈ ಜೋಡಿಯ ಮದುವೆಗೆ ಗಿಣಿರಾಮ ಸೀರಿಯಲ್ ನಲ್ಲಿ ಮಹತಿಗೆ ಜೋಡಿಯಾಗಿದ್ದ ಶಿವರಾಂ ಆಲಿಯಾಸ್ ರಿತ್ವಿಕ್ ಮಠದ್ ದಂಪತಿ, ನಟ ಸಿಹಿ ಕಹಿ ಚಂದ್ರು ಕುಟುಂಬ, ಚಂದನ ಅನಂತಕೃಷ್ಣ (Chandana Anantakrishna) ಮುಂತಾದವರು ಆಗಮಿಸಿ ಶುಭ ಹಾರೈಸಿದ್ದಾರೆ.
 

Latest Videos

click me!