ನಿನಗಾಗಿ ಸೀರಿಯಲ್‌ಗೆ ಕಿಶನ್ ಬಿಳಗಲಿ ಎಂಟ್ರಿ, ನಿಜವಾದ ವಿಲನ್ ಇವರೇನಾ?

First Published | Jun 17, 2024, 5:36 PM IST

ನಿನಗಾಗಿ ಧಾರಾವಾಹಿಗೆ ಹೊಸದಾಗಿ ಎಂಟ್ರಿ ಕೊಡಲಿದ್ದಾರೆ ಬಿಗ್ ಬಾಸ್ ಖ್ಯಾತಿಯ ಕಿಶನ್ ಬಿಳಗಲಿ, ಪ್ರೊಮೋ ಕುತೂಹಲ ಮೂಡಿಸಿದ್ದು, ಇವರ ಪಾತ್ರದ ಬಗ್ಗೆ ರಿವೀಲ್ ಆಗಿಲ್ಲ. 
 

 ಸೂಪರ್ ಸ್ಟಾರ್ ಹಿರೋಯಿನ್ ರಚನಾ ಕಥೆಯನ್ನು ಹೊಂದಿರುವ ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಿನಗಾಗಿ ಧಾರಾವಾಹಿಯಲ್ಲಿ ದಿನದಿಂದ ದಿನಕ್ಕೆ ಒಂದೊಂದು ಟ್ವಿಸ್ಟ್ ಬರುತ್ತಿದೆ. ಇದೀಗ ಸೀರಿಯಲ್ ಗೆ ಹೊಸ ವಿಲ್ಲನ್ ಎಂಟ್ರಿ ಕೊಟ್ಟಿದ್ದಾರೆ. 

ರಚನಾ ಸೂಪರ್ ಸ್ಟಾರ್ (Super Star) ಆದರೂ ಸಿಂಪಲ್ ಆಗಿ ನಾರ್ಮಲ್ ಮನುಷ್ಯರಂತೆ ಬಾಳಬೇಕೆಂದು ಬಯಸುವ, ಆದರೆ ಅಮ್ಮನ ಆಸೆಯಂತೆ ಚಾಚು ತಪ್ಪದೇ ನಡೆಯುವ ಹುಡುಗಿ ರಚನಾ. ಆದರೆ ಅಮ್ಮ ಮಾತ್ರ ತನ್ನ ಮಗಳನ್ನು ಬ್ಯುಸಿನೆಸ್ ತರ ಬಳಸೋ ಚಾಲಾಕಿ. 
 

Tap to resize

ಇದೀಗ ಅಮ್ಮ, ಮಗಳಿಗೆ ಒಂದು ದಿನದ ರಜೆ ಕೊಟ್ಟಿದ್ದು, ಮಗಳು ರಚನಾ, ಅದನ್ನ ಸಾಮಾನ್ಯ ಮನುಷ್ಯಳಂತೆ ಹೇಗೆ ಆ ದಿನವನ್ನು ಕಳೆಯೋದು ಎನ್ನುತ್ತಲ್ಲೆ, ಅಮ್ಮನಿಗೆ ಥ್ಯಾಂಕ್ಸ್ ಹೇಳುತ್ತಾ ಖುಷಿಯಲ್ಲಿದ್ದಾಳೆ ರಚನಾ. ಆದ್ರೆ ವಜ್ರೇಶ್ವರಿ ಉದ್ದೇಶ ಇಲ್ಲದೇ ಏನನ್ನು ಮಾಡೋಳೆ ಅಲ್ಲ ಅನ್ನೋದು ಎಲ್ಲರಿಗೂ ಗೊತ್ತು. ಅಲ್ಲೇ ಇದೆ ಟ್ವಿಸ್ಟು. 
 

ಇವತ್ತು ಪ್ರಸಾರವಾದ ಪ್ರೊಮೋದಲ್ಲಿ ಸಪ್ರೈಸ್ ಎಂಟ್ರಿಯಾಗಿದೆ. ಅದು ಬೇರಾರೂ ಅಲ್ಲ, ಬಿಗ್ ಬಾಸ್ ಸೀಸನ್ 7 ಸ್ಪರ್ಧಿ ಮತ್ತು ಅದ್ಭುತ ಡ್ಯಾನ್ಸರ್ ಆಗಿರುವ ಕಿಶನ್ ಬಿಳಗಲಿ (Kishen Bilagali) ನಿನಗಾಗಿ ಸೀರಿಯಲ್ ಗೆ ಎಂಟ್ರಿ ಕೊಟ್ಟಿದ್ದಾರೆ. 
 

ಪ್ರೊಮೋದಲ್ಲಿ ಮುಖ ಏನೂ ರಿವೀಲ್ ಮಾಡಿಲ್ಲ, ಆದರೆ ಆತನ ಎಂಟ್ರಿಗೆ ಮನೆಯವರಲ್ಲೆಲ್ಲಾ ನಡುಕ ಹುಟ್ಟಿಸಿದ್ರೆ ವಜ್ರೇಶ್ವರಿ ಮುಖದಲ್ಲಿ ನಗು ಮೂಡಿಸಿದೆ. ಮನೆಯವರೆಲ್ಲಾ, ವಿಲನ್, ಮಂಗನ ಎಂಟ್ರಿಯಾಗಿದೆ ಎಂದು ಬೈದು ಕೊಳ್ತಿದ್ದಾರೆ. ಅಂದ್ರೆ ಇಲ್ಲಿ ನಿಜವಾದ ವಿಲನ್ ಕಿಶನ್ ಅನ್ಸುತ್ತೆ. 

ಬಿಗ್ ಬಾಸ್ ಬಳಿಕ ಕಿಶನ್ ಬಿಳಗಲಿ ಒಂದಲ್ಲ ಒಂದು ಕಾರಣದಿಂದ ಸುದ್ದಿಯಾಗುತ್ತಲೇ ಇದ್ದರು. ತಮ್ಮ ಡ್ಯಾನ್ಸ್ ವಿಡಿಯೋ, ರೀಲ್ಸ್‌ಗಳಿಂದ, ಕೆಲವು ಸಿನಿಮಾಗಳಲ್ಲಿ ವಿಲನ್ ಆಗಿ ಅಭಿನಯಿಸುವ ಮೂಲಕ, ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡದ್ದು ಬಿಟ್ಟರೆ, ಇದೇ ಮೊದಲ ಬಾರಿಗೆ ಕಿರುತೆರೆಗೆ ಅದರಲ್ಲೂ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 
 

ಹೇಳಿ ಕೇಳಿ ಕಿಶನ್ ತುಂಬಾ ಕ್ರೇಜಿ ಹುಡುಗ, ಸಿರಿಯಲ್ ಪ್ರೊಮೋ ನೋಡಿದ್ರೆ, ಅದಕ್ಕೆ ತಕ್ಕಂತ ಪಾತ್ರ ಸಿಕ್ಕಿರುವಂತಿದೆ. ಸೀರಿಯಲ್ ನಲ್ಲಿ ಕಿಶನ್ ಎಂಟ್ರಿ ಸಕ್ಕತ್ತಾಗಿ ಮೂಡಿ ಬಂದಿದೆ. ತಾನು ಎಂಟ್ರಿ ಕೊಡುವಾಗ್ಲೆ, ವಯೋಲಿನ್, ಬ್ಯಾಂಡ್, ಮ್ಯೂಸಿಕ್ ಜೊತೆ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಇನ್ನು ಇವರ ಪಾತ್ರ ಹೇಗಿರಲಿದೆ ಅನ್ನೋದನ್ನು ಕಾದು ನೋಡಬೇಕಿದೆ. 
 

Latest Videos

click me!