ಗೋಲ್ಡನ್ ಸೀರೆಯಲ್ಲಿ ಪಾರು ಬೆಡಗಿ ಮೋಕ್ಷಿತಾ, ದೃಷ್ಟಿ ಬೊಟ್ಟು ಇಟ್ಕೊಳಿ ಎಂದ ಫ್ಯಾನ್

First Published Jun 17, 2024, 3:02 PM IST

ಪಾರು ಸೀರಿಯಲ್ ಮೂಲಕ ಮಿಂಚಿದ ನಟಿ ಮೋಕ್ಷಿತಾ ಪೈ ಇದೀಗ ಗೋಲ್ಡನ್ ಸೀರೆಯಲ್ಲಿ ಪೋಸ್ ನೀಡಿದ್ದು, ಮುದ್ದು ಬೆಡಗಿಯ ಅಂದಕ್ಕೆ ಅಭಿಮಾನಿಗಳು ಮನಸೋತಿದ್ದಾರೆ. 
 

ಝೀಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಪಾರು ಧಾರಾವಾಹಿಯ ಪಾರು ಪಾತ್ರದಲ್ಲಿ ಮಿಂಚಿದ ನಟಿ ಮೋಕ್ಷಿತಾ ಪೈ (Mokshitha Pai), ಸೀರಿಯಲ್ ಮುಗಿದು ಹಲವು ಸಮಯ ಕಳೆದರೂ, ವೀಕ್ಷಕರ ಮನಸಲ್ಲಿ ಪಾರು ಆಗಿಯೇ ವಿಶೇಷ ಸ್ಥಾನ ಪಡೆದಿದ್ದಾರೆ.

ಸೋಶಿಯಲ್ ಮೀಡೀಯಾದಲ್ಲಿ (social media) ಆಕ್ಟೀವ್ ಆಗಿರುವ ಮೋಕ್ಷಿತಾ ಪೈ, ಹೆಚ್ಚಾಗಿ ತಮ್ಮ ಟ್ರಾವೆಲ್ ಫೋಟೋಗಳನ್ನು, ರೀಲ್ಸ್ ವಿಡಿಯೋಗಳನ್ನು, ಜೊತೆಗೆ ತಮ್ಮ ರೀಯಲ್ ಲೈಫ್ ತಮ್ಮನ ಜೊತೆ ಫನ್ನಿ ವಿಡಿಯೋ ಹಾಗೂ ರಿಯಲ್ ಲೈಫ್ ತಮ್ಮನ ಜೊತೆಗಿನ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. 

ಇತ್ತೀಚೆಗಷ್ಟೆ ದುಬೈಗೆ ತೆರಳಿ ಮೋಕ್ಷಿತಾ ಕೆಲವು ದಿನಗಳ ಕಾಲ ಅಲ್ಲಿ ಎಂಜಾಯ್ ಮಾಡ್ಕೊಂಡು ಬಂದಿದ್ದಾರೆ. ಅಲ್ಲಿನ ಸುಂದರವಾದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಸುಂದರ ಫೋಟೋಗಳಿಗೆ ಅಭಿಮಾನಿಗಳು ಮನಸೋತಿದ್ದರು. 
 

ಇನ್ನು ಹೆಚ್ಚಾಗಿ ಸೀರೆಯಲ್ಲಿಯೇ ಮಿಂಚುವ ಪಾರು, ತಮ್ಮ ಸೋಶಿಯಲ್ ಮೀಡಿಯಾದಲ್ಲೂ ಹೆಚ್ಚಾಗಿ ಸೀರೆಯುಟ್ಟು ಫೋಟೋ ಶೂಟ್ ಮಾಡಿ ಹಂಚಿಕೊಳ್ಳುತ್ತಿರುತ್ತಾರೆ. ದೇಸಿ ಲುಕ್ ನಲ್ಲಿ ಮೋಕ್ಷಿತಾರನ್ನು  ನೋಡುವುದೇ ಚೆಂದ. 
 

ಹೇಳಿ ಕೇಳಿ ಮೋಕ್ಷಿತಾ ಸುಂದರಿ, ದಂತದ ಗೊಂಬೆ. ಈ ಗೊಂಬೆ ಗೋಲ್ಡನ್ ಬಣ್ಣದ ಅಥವಾ ದಂತದ ಬಣ್ಣದ ಪ್ಲೈನ್ ಸೀರೆಯುಟ್ಟಿದ್ದು, ಅದಕ್ಕೆ ಅದೇ ಐವರಿ ಬಣ್ಣದ ಮೇಲೆ ಫ್ಲೋರಲ್ ವರ್ಕ್ ಇರುವಂತಹ ಸ್ಲೀವ್ ಲೆಸ್ ಬ್ಲೌಸ್ ಧರಿಸಿದ್ದಾರೆ. 
 

ಮೋಕ್ಷಿತ ಹೊಸ ಫೋಟೋ ಶೂಟ್ (Photoshoot)  ಮತ್ತು ಅಂದಕ್ಕೆ ಅಭಿಮಾನಿಗಳು ಮನಸೋತಿದ್ದಾರೆ. ತುಂಬಾನೆ ಸುಂದರವಾಗಿ ಕಾಣಿಸ್ತಿದ್ದೀರಿ, ಅದ್ಭುತವಾಗಿ ಕಾಣಿಸ್ತಿದ್ದೀರಿ. ಬ್ಯೂಟಿ, ಪಾರು ಗಾರ್ಜಿಯಸ್ ವುಮೆನ್, ಬ್ಯೂಟಿಫುಲ್ ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ. 
 

ಮತ್ತೊಬ್ಬರು ಅಭಿಮಾನಿ ಕಾಮೆಂಟ್ ಮಾಡಿ, ಮೇಡಂ ಈವಾಗ್ಲೇ ದೃಷ್ಟಿ ಬೊಟ್ಟು ಇಟ್ಕೊಳಿ, ದೃಷ್ಟಿಯಾಗುತ್ತೆ. ತುಂಬಾನೆ ಚೆನ್ನಾಗಿ ಕಾಣಿಸ್ತೀರಿ, ಯಾರ ದೃಷ್ಟಿಯೂ ನಿಮ್ಮ ಮೇಲೆ ಬೀಳದಿರಲಿ ಎಂದು ಹಾರೈಸಿದ್ದಾರೆ. 
 

Latest Videos

click me!