ನಿಶ್ಚಿತಾರ್ಥ ಫೋಟೋ ಹಾಕಿ ದೃಷ್ಟಿಯಾಗುತ್ತೆ ಅಂತ ಒಂದ್ ವಾರ ಭಯಗೊಂಡಿದ್ದೆ; ನಯನಾ ನಾಗರಾಜ್

First Published | Jun 26, 2024, 11:55 AM IST

ನಟಿ ನಯನಾ ನಾಗರಾಜ್‌ಗೆ ದೃಷ್ಟಿಯಾಗುವುದರಲ್ಲಿ ವಿಪರೀತ ನಂಬಿಕೆ. ಈ ಬಗ್ಗೆ ಸ್ವತಃ ನಟಿಯೇ ಯೂಟ್ಯೂಬ್ ಚಾನೆಲ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ..

ನಟಿ ನಯನಾ ನಾಗರಾಜ್, ಗಿಣಿರಾಮ ಹಾಗೂ ಪಾಪಾ ಪಾಂಡುವಿನ ನಟನೆಗಾಗಿ ಕಿರುತೆರೆ ವೀಕ್ಷಕರ ಮನ ಗೆದ್ದಿದ್ದಾರೆ. ಜೊತೆಗೆ ಆಕೆ ಗಾಯಕಿ ಕೂಡಾ. 

ಕೆಲ ತಿಂಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದ, ನಟಿ ನಯನಾ ತಮ್ಮ ಬಹುಕಾಲದ ಗೆಳೆಯ ಸುಹಾಸ್ ಶಿವಣ್ಣ (Suhas Shivanna) ಜೊತೆ ಜೂನ್ 16 ರಂದು ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 

Tap to resize

ನಯನಾ ನಾಗರಾಜ್ 10 ವರ್ಷ ಪ್ರೀತಿಸಿದ ಹುಡುಗನ ಜೊತೆ ಮದುವೆಯಾಗಿದ್ದಾರೆ. ಸಂದರ್ಶನವೊಂದರಲ್ಲಿ ನಟಿ ತನ್ನ ಪ್ರೀತಿ, ಮದುವೆ, ವೃತ್ತಿಯ ಬಗ್ಗೆ ಮಾತನಾಡಿದ್ದಾರೆ. 

ಈ ಸಂದರ್ಭದಲ್ಲಿ ನಟಿ ತಾನು ದೃಷ್ಟಿ ಎಂಬುದನ್ನು ನಂಬುವುದಾಗಿ ಹೇಳಿದ್ದು, ಈ ಕುರಿತ ತಮ್ಮ ಅನುಭವ, ಭಯ, ನಂಬಿಕೆ ಬಿಚ್ಚಿಟ್ಟಿದ್ದಾರೆ. 

ನಾನು ಈ ಕೆಟ್ಟ ದೃಷ್ಟಿಯನ್ನು ನಂಬುತ್ತೇನೆ. ಏಕೆಂದರೆ ನಾನದರಿಂದ ಸಾಕಷ್ಟು ಅನುಭವಿಸಿದ್ದೇನೆ ಎನ್ನುವ ನಯನಾ, ಜನ ಅದೇನಿಲ್ಲ ಅನ್ಬೋದು, ಆದ್ರೆ ನಿಜವಾಗ್ಲೂ ಕೆಟ್ಟ ದೃಷ್ಟಿ ಎಂಬುದಿದೆ. ನಾನದರಿಂದ ಸೇಫ್ ಆಗಿರಲು ಬಯಸುತ್ತೇನೆ ಎಂದಿದ್ದಾರೆ. 

ಈ ಸಂಬಂಧ ಇಂಟ್ರಸ್ಟಿಂಗ್ ವಿಷಯವೊಂದನ್ನು ಹಂಚಿಕೊಂಡಿರುವ ನಟಿ, ತನ್ನ ಎಂಗೇಜ್‌ಮೆಂಟ್ ಆದ ಬಳಿಕ 1 ವಾರ ಗೆಳೆಯನೊಂದಿಗೆ ಫೋಟೋ ಶೇರ್ ಮಾಡಬೇಕೋ ಬೇಡವೋ ಎಂದು ಚರ್ಚಿಸಿದ್ದರಂತೆ! 

ನಯನಾ ತಂದೆ, ಅಕ್ಕ ಎಲ್ಲರೂ ಕಣ್ಣು ಬೀಳತ್ತೆ ಬೇಡ ಎನ್ನುತ್ತಿದ್ದರು. ಆದರೆ, ನಟಿಗೆ ಜಗತ್ತಿಗೆ ತನ್ನ ಹುಡುಗನ್ನ ಪರಿಚಯಿಸೋಕೆ ಎಕ್ಸೈಟ್‌ಮೆಂಟ್.

ಕಡೆಗೂ ಗಟ್ಟಿ ಮನಸ್ಸು ಮಾಡಿ ಫೋಟೋ ಶೇರ್ ಮಾಡಿದ ಮೇಲೆ ಒಂದು ವಾರ ಅಯ್ಯೋ ದೃಷ್ಟಿ ಆದ್ರೆ, ಏನಾದ್ರೂ ಕೆಟ್ಟಾದಾದ್ರೆ ಎಂದು ಆತಂಕದಲ್ಲೇ ಕಳೆದಿದ್ರಂತೆ ನಯನಾ. ಅಂತೂ ಹುಡುಗನೊಂದಿಗೆ ತಮ್ಮ ಅಮ್ಮನ ಬಳಿ ಪೊರಕೆಯಲ್ಲಿದೃಷ್ಟಿ ತೆಗೆಸಿಕೊಂಡ ಮೇಲೇ ಸಮಾಧಾನವಾಗಿದ್ದು ಎಂದು ತಿಳಿಸಿದ್ದಾರೆ. 

'ಆಗ ಪೊರಕೆ ಜೋರಾಗಿ ಪಟ ಪಟ ಎಂತು, ಪೂರ್ತಿ ಮನೆ ವಾಸನೆ ಬಂತು- ಆಗ ಅಮ್ಮ ಅಂದ್ರು ಫೋಟೋ ಹಾಕ್ಬೇಡ ಅಂದ್ರೆ ಕೇಳಲ್ಲ ನೋಡು ಎಷ್ಟು ದೃಷ್ಟಿ ಆಗಿದೆ ಅಂತ' ಎಂದು ನಯನಾ ಹೇಳಿದ್ದಾರೆ. 

ಇನ್ನು ಈ ಕೆಟ್ಟ ದೃಷ್ಟಿಯ ಬಗ್ಗೆ ಮತ್ತಷ್ಟು ಮಾತಾಡಿರುವ ನಯನಾ, ಜನ ಬಾಯಿ ಬಿಟ್ಟು ಹೇಳದಿದ್ರೂ ದೃಷ್ಟಿಯಾಗುತ್ತೆ, ಅಥವಾ ಅವಳ ಲೈಫಲ್ಲಿ ಏನೋ ಅಗ್ತಿದೆ, ನನ್ ಲೈಫಲ್ಲಿ ಏನೂ ಆಗ್ತಿಲ್ಲ ಎಂದುಕೊಳ್ಳೋದೂ ಒಂದು ರೀತಿ ಕಣ್ಣು ಹಾಕೋದು- ಅವರು ಹೊಟ್ಟೆಉರಿ ಪಟ್ಟುಕೊಳ್ಳದಿದ್ದರೂ ತಲೆಯಲ್ಲಿ ನಡೆಯೋ ಯೋಚನೆಗಳೇ ಸಾಕು ದೃಷ್ಟಿಯಾಗೋಕೆ ಎಂದಿದ್ದಾರೆ.
 

Latest Videos

click me!