ಪ್ರೊಮೋದಲ್ಲಿ ಹುಬ್ಬಳ್ಳಿ ಸುರಂಗದ ಮೂಲಕ ಸಾಗುವ ರೈಲಿನಲ್ಲಿ ಶರಣ್ ಹಾಗೂ ತಾರಾ ತಿಂಡಿಯನ್ನು ಹಂಚಿಕೊಳ್ಳುತ್ತಾ, ಹಳೆಯ ಕಥೆಗಳನ್ನು ಹೇಳುತ್ತಾ ಸಾಗುತ್ತಾರೆ. ಮನೆಗೆ ಬಂದವರಿಗೆ ಒಂದು ತುತ್ತಾದರೂ ತಿನಿಸಬೇಕು ಎಂದು ನಮ್ಮ ಅತ್ತೆ ಯಾವಾಗಲೂ ಹೇಳುವವರು ಎನ್ನುವ ತಾರಾ, ಊರಲ್ಲಿ ದಾರಿಯಲ್ಲಿ ಸಿಕ್ಕಿದವರನ್ನೆಲ್ಲಾ ಟ್ರಾಕ್ಟರ್ ಗೆ ಹತ್ತಿಸಿ, ಹಳೆಯ ಚಿತ್ರ ಗೀತೆ ಕೇಳುತ್ತಾ, ಅಮ್ಮ ಕೊಟ್ಟ ಬುತ್ತಿ ತಿನ್ನುವ ನೆನೆಪೇ ಚೆಂದ ಎನ್ನುತ್ತಾರೆ ಶರಣ್ (Sharan).