ಪ್ರೆಗ್ನೆನ್ಸಿಯಲ್ಲಿ ದಪ್ಪ ಆಗೋದ್ರ ಬಗ್ಗೆ ತಲೆ ಕೆಡಿಸ್ಬೇಡಿ, ಸ್ಟ್ರೆಚ್ ಮಾರ್ಕ್ ಬ್ಯೂಟಿಫುಲ್ ಅಂತಿದ್ದಾರೆ ಗರ್ಭಿಣಿ ನೇಹಾ ಗೌಡ

First Published | Aug 27, 2024, 1:47 PM IST

ಕಿರುತೆರೆ ನಟಿ ಲಕ್ಷ್ಮೀ ಬಾರಮ್ಮ ಖ್ಯಾತಿಯ ಗೊಂಬೆ ನೇಹಾ ಗೌಡ ಪ್ರೆಗ್ನೆನ್ಸಿಯಲ್ಲಿ ಉಂಟಾಗೋ, ಸ್ಟ್ರೆಸ್, ದಪ್ಪ ಆಗೋದು, ಸ್ಟ್ರೆಚ್ ಮಾರ್ಕ್ ಬಗ್ಗೆ ಹೇಳಿದ್ದೇನು ನೋಡಿ. 
 

ಕನ್ನಡ ಕಿರುತೆರೆಯ ಜನಪ್ರಿಯ ನಟಿ ಲಕ್ಷ್ಮೀ ಬಾರಮ್ಮ ಧಾರಾವಾಹಿ ಗೊಂಬೆ ನೇಹಾ ಗೌಡ (Neha Gowda), ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗಷ್ಟೇ, ಅದ್ಧೂರಿಯಾಗಿ ಸೀಮಂತ, ಬೇಬಿ ಶವರ್ ಸೆಲೆಬ್ರೇಟ್ ಮಾಡಿದ್ದರು. ಹೆಚ್ಚಾಗಿ ಖಾಸಗಿ ಕಾರ್ಯಕ್ರಮಗಳಲ್ಲೂ ಗರ್ಭಿಣಿ ನೇಹಾ ಕಾಣಿಸಿಕೊಳ್ಳುತ್ತಿರುತ್ತಾರೆ. 

ಇದೀಗ ಸ್ಟಾರ್ ಸುವರ್ಣ ವಾಹಿನಿಯ ಬೊಂಬಾಟ್ ಭೋಜನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟಿ ನೇಹಾ, ಗರ್ಭಿಣಿ ಮಹಿಳೆಯರಿಗೆ ಪ್ರೆಗ್ನೆನ್ಸಿ ಟಿಪ್ಸ್ (pregnancy tips) ಕೊಟ್ಟಿದ್ದಾರೆ. ಜೊತೆಗೆ ಈ ಟೈಮಲ್ಲಿ ತಾವು ಏನೆಲ್ಲಾ ಮಾಡ್ತಿದ್ದಾರೆ ಅನ್ನೋದನ್ನೂ ಹೇಳಿದ್ದಾರೆ. 
 

Tap to resize

ಪ್ರೆಗ್ನೆನ್ಸಿ ಟೈಮಲ್ಲಿ ಸ್ಟ್ರೆಸ್, ಮೆಂಟಲ್ ಸ್ಟ್ರೆಸ್, ಮೂಡ್ ಸ್ವಿಂಗ್ ಎಲ್ಲವನ್ನು ಮಹಿಳೆಯರು ಎದುರಿಸಬೇಕಾಗಿ ಬರುತ್ತೆ. ನಾನು ಪ್ರೆಗ್ನೆಂಟ್ ಅಂತ ಗೊತ್ತಾದಾಗ, ಮೊದಲೇ ಮೆಂಟಲಿ ಪ್ರಿಪೇರ್ ಆಗಿದ್ದೆ, ಇದೆಲ್ಲಾ ಮೈಂಡ್ ಸೆಟ್, ಇದೆಲ್ಲಾ ಆಗೋದಿಲ್ಲ, ನಾನು ಈ ತರ ಮಾಡ್ಬಾರ್ದು ಅಂತ ಅಂದುಕೊಂಡಿದ್ದೆ ಆದ್ರಿಂದ ಸ್ಟ್ರೆಸ್ ಕಂಟ್ರೋಲ್ ಮಾಡೋದಕ್ಕೆ ಸಹಾಯ ಆಯ್ತು ಎಂದಿದ್ದಾರೆ ನೇಹಾ ಗೌಡ. 
 

ಇದಲ್ಲದೇ ಮೆಡಿಟೇಷನ್ (meditation), ಯೋಗ ನಿರಂತರವಾಗಿ ಮಾಡಿಕೊಂಡು ಬಂದಿರೋದರಿಂದ ಮನಸ್ಸು ಶಾಂತವಾಗಿರುತ್ತೆ. ನಾನು ಕೂಡ ಯಾವಾಗ್ಲೂ ಶಾಂತವಾಗಿರೋದಕ್ಕೆ, ಸಂತೋಷವಾಗಿರೋದಕ್ಕೆ ಯೋಗ ತುಂಬಾನೆ ಸಹಾಯ ಮಾಡಿದೆ ಅಂದಿದ್ದಾರೆ ನೇಹಾ ಗೌಡ. 
 

ಪ್ರೆಗ್ನೆನ್ಸಿ ಅನ್ನೋದು ಬ್ಯೂಟಿಫುಲ್ ಫೇಸ್ ಆಫ್ ಲೈಫ್ ಅಂತ ಎಲ್ಲರೂ ಹೇಳ್ತಾರೆ, ನಿಜಾ, ಇದನ್ನ ನಾನೂ ಅನುಭವಿಸಿದ್ದೇನೆ, ಹಾಗಾಗಿ ಯಾವುದೇ ವಿಷ್ಯದ ಬಗ್ಗೆ ಒತ್ತಡ ತೆಗೋಬೇಡಿ, ಆದಷ್ಟು ಪಾಸಿಟಿವ್ ಆಗಿರಿ, ತುಂಬಾನೆ ಎಕ್ಸ್’ಪೆಕ್ಟೇಶನ್ ಇಟ್ಕೊಳ್ಬೇಡಿ ಎಂದು ಟಿಪ್ಸ್ ನೀಡಿದ್ದಾರೆ ನೇಹಾ. 
 

ಅಷ್ಟೇ ಅಲ್ಲ ಅಯ್ಯೋ ಪ್ರೆಗ್ನೆನ್ಸಿಲಿ ದಪ್ಪ ಆಗೋಗ್ಬಿಡ್ತೀನಿ, ಇನ್ನೇನೋ ಆಗತ್ತೆ, ಸ್ಟ್ರೆಚ್ ಮಾರ್ಕ್ (strech mark) ಬರುತ್ತೆ, ಅನ್ನೋದ್ರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ಡೆಲಿವರಿ ಆಗಿ, ಮಗುವನ್ನ ಕೈಯಲ್ಲಿ ಎತ್ತಿಕೊಂಡಾಗ ಎಲ್ಲಾ ನೋವು ಮರೆತೋಗುತ್ತೆ. ಸ್ಟ್ರೆಚ್ ಮಾರ್ಕ್ ಇದೆಲ್ಲಾ ಬ್ಯೂಟಿಫುಲ್ ಮಾರ್ಕ್ ಅದನ್ನ ಖುಷಿಯಿಂದ ಸ್ವೀಕಾರ ಮಾಡ್ಬೇಕು ಎಂದಿದ್ದಾರೆ ಲಕ್ಷ್ಮೀ ಬಾರಮ್ಮ ನಟಿ. 

Latest Videos

click me!