ಅದ್ಧೂರಿಯಾಗಿ ವರಮಹಾಲಕ್ಷ್ಮಿ ಹಬ್ಬ ಆಚರಿಸಿದ ನಮ್ರತಾ ಗೌಡ… ಪೂಜೆಯಲ್ಲಿ ಭಾಗಿಯಾದ ಕಿರುತೆರೆ ತಾರೆಯರು

First Published | Aug 17, 2024, 2:24 PM IST

ನಟಿ ಮತ್ತು ಬಿಗ್ ಬಾಸ್ ಸ್ಪರ್ಧಿ ನಮ್ರತಾ ಗೌಡ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬ ಆಚರಿಸಲಾಗಿತ್ತು, ಈ ಸಂಭ್ರಮದಲ್ಲಿ ಬಿಗ್ ಬಾಸ್ ತಾರೆಯರು ಭಾಗವಹಿಸಿ ಸಂಭ್ರಮಿಸಿದ್ದಾರೆ. 
 

ನಿನ್ನೆ ಆಗಸ್ಟ್ 16ರ ರಂದು ರಾಜ್ಯಾದ್ಯಂತ ವರಮಹಾಲಕ್ಷ್ಮೀ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗಿದೆ. ಈ ಸಂದರ್ಭದಲ್ಲಿ ನಟಿ ನಮ್ರತಾ ಗೌಡ (Namratha Gowda) ಕೂಡ ಬಹಳ ಅದ್ಧೂರಿಯಾಗಿ ಹಬ್ಬ ಆಚರಿಸಿಕೊಂಡಿದ್ದಾರೆ. 
 

ಕಳೆದ ವರ್ಷ ಹೊಸ ಮನೆ ಗೃಹಪ್ರವೇಶ ಮಾಡಿಕೊಂಡಿದ್ದ ನಟಿ ನಮ್ರತಾ ಗೌಡ, ತಮ್ಮ ಹೊಸ ಮನೆಯಲ್ಲಿ ಇದೀಗ ಮೊದಲ ಬಾರಿಗೆ ವರಮಹಾಲಕ್ಷ್ಮಿ ಹಬ್ಬವನ್ನು (Varamahalakshmi) ಆಚರಿಸಿಕೊಂಡಿದ್ದು, ಕಿರುತೆರೆಯ ತಾರೆಯರು ಆಗಮಿಸಿದ್ದು, ಪೂಜೆಯನ್ನು ಅದ್ಧೂರಿಯಾಗಿ ನೆರವೇರಿಸಿದ್ದಾರೆ. 
 

Tap to resize

ನಮ್ರತಾ ಗೌಡ ತಮ್ಮ ಇನ್’ಸ್ಟಾಗ್ರಾಂನಲ್ಲಿ ಹಬ್ಬದ ಸಂಭ್ರಮದ ಫೋಟೊ ಆಲ್ಬಂ ಶೇರ್ ಮಾಡಿದ್ದು, ಕಾರ್ಯಕ್ರಮದಲ್ಲಿ ಭಾಗಿಯಾದ ಅತಿಥಿಗಳು, ಅಲಂಕಾರಗೊಂಡ ವರಮಹಾಲಕ್ಷ್ಮಿ, ನಮ್ರತಾ ಗೌಡ ಕುಟುಂಬ ಸದಸ್ಯರ ಫೋಟೊಗಳನ್ನು ಸಹ ಕಾಣಬಹುದು. 
 

ನಮ್ರತಾ ಗೌಡ ಧೃತಿ ವಸ್ತ್ರಮ್ ಅವರ ಪೀಚ್ ಬಣ್ಣದ ಸಿಲ್ಕ್ ಸೀರೆ ಧರಿಸಿ, ಕುತ್ತಿಗೆಗೆ ಹೆವಿ ನೆಕ್ಲೆಸ್, ಅದಕ್ಕೆ ಮ್ಯಾಚ್ ಆಗುವ ದೊಡ್ಡದಾದ ಜುಮುಕಿ, ಮುಂದಾಲೆ, ಬಳೆ ಜೊತೆಗೆ ಮೂಗಿಗೆ ನತ್ತು ಧರಿಸಿ ತುಂಬಾನೆ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. 
 

ಫೋಟೊಗಳನ್ನು ನೋಡುತ್ತಿದ್ದರೆ ಬಹಳ ಅದ್ದೂರಿಯಾಗಿಯೇ ನಮ್ರತಾ ತಮ್ಮ ಹೊಸ ಮನೆಯಲ್ಲಿ ವರಮಹಾಲಕ್ಷ್ಮೀ ಹಬ್ಬವನ್ನ ಆಚರಿಸಿಕೊಂಡಂತೆ ಕಾಣಿಸ್ತಿದೆ. ಪೂಜೆಯ ಸಂಭ್ರಮದಲ್ಲಿ ನಮ್ರತಾ ಸ್ನೇಹಿತರು, ಕುಟುಂಬದ ಸದಸ್ಯರು ಜೊತೆಗೆ ಬಿಗ್ ಬಾಸ್ ಸೀಸನ್ 11 ರಲ್ಲಿ ಜೊತೆಯಾಗಿದ್ದ ಸದಸ್ಯರನ್ನು ಸಹ ಕಾಣಬಹುದು. 
 

ನಮ್ರತಾ ಗೌಡ ಕಿರುತೆರೆಯ ಗೆಳೆಯರಾದ ಕಾರ್ತಿಕ್ ಶರ್ಮಾ, ಶ್ರೀರಸ್ತು ಶುಭಮಸ್ತು ಖ್ಯಾತಿಯ ದರ್ಶಿನಿ ಡೆಲ್ಟಾ, ರಮ್ಯಾ ಆಚಾರ್, ನಾಗಿಣಿ 2 ಧಾರಾವಾಹಿಯಲ್ಲಿ ಜೊತೆಯಾಗಿದ್ದ ಸದ್ಯ ಆಸೆ ಸೀರಿಯಲ್ ನಲ್ಲಿ ಮಿಂಚುತ್ತಿರುವ ನಿನಾದ್ ಮತ್ತವರ ಪತ್ನಿ ಕೂಡ ಆಗಮಿಸಿದ್ದರು. 
 

ಅಷ್ಟೇ ಅಲ್ಲದೇ ಬಿಗ್ ಬಾಸ್ 10ರಲ್ಲಿ ನಮ್ರತಾ ಜೊತೆಯಾಗಿದ್ದ ಸ್ಪರ್ಧಿಗಳಾದ ಸಿರಿಜಾ (Sirija), ಕಾರ್ತಿಕ್ ಮಹೇಶ್, ಸಂಗೀತ ಶೃಂಗೇರಿ, ರಕ್ಷಕ್ ಬುಲ್ಲೆಟ್, ತುಂಬು ಗರ್ಭಿಣಿಯಾಗಿರುವ ಕವಿತಾ ಗೌಡ, ಆಗಮಿಸಿದ್ದರು. 
 

ಬಿಗ್ ಬಾಸ್ ಸೀಸನ್ 10 ರ ವಿನ್ನರ್ ಆಗಿರುವ ಹಾಗೂ ನಮ್ರತಾ ಗೌಡ ಫ್ರೆಂಡ್ ಆಗಿರುವ ಕಾರ್ತಿಕ್ ಮಹೇಶ್(Karthik Mahesh) ತಮ್ಮ ತಾಯಿ ಮತ್ತು ತಂಗಿ ಮಗುವಿನ ಜೊತೆಗೆ ನಮ್ರತಾ ಮನೆಯ ಹಬ್ಬಕ್ಕೆ ಆಗಮಿಸಿದ್ದರು. ನಮ್ರತಾ ಗೌಡ ಕಾರ್ತಿಕ್ ತಂಗಿ ಮಗನ ಜೊತೆಗೆ ಕೂಡ ಫೋಟೊ ತೆಗೆಸಿಕೊಂಡಿದ್ದಾರೆ.  
 

ಕಾರ್ತಿಕ್ ಮತ್ತು ನಮ್ರತಾ ಜೊತೆಯಾಗಿರುವ ಫೋಟೊಗಳನ್ನು ನೋಡಿರುವ ಅಭಿಮಾನಿಗಳು ಫುಲ್ ಖುಷಿಯಾಗಿದ್ದು, ನಮ್ರತಾ ಮೇಡಂ ಬರೋವರ್ಷ ಮಹಾಲಕ್ಷ್ಮಿ ಪೂಜೆ ಕಾರ್ತಿಕ್ ಸರ್ ಮನೆಯಲ್ಲಿ ಮಾಡ್ಬೇಕು ಅನ್ನೋದು ನಮ್ಮ ಅಸೆ. ಆದಷ್ಟು ಬೇಗ ಕಾರ್ತಿಕ್ ಸರ್ ನಿವು ಮದುವೆ ಆಗಿ ಎಂದಿದ್ದಾರೆ. 
 

ಇನ್ನು ನಟಿ ಸಂಗೀತ ಶೃಂಗೇರಿ (Sangeetha Sringeri)ತಮ್ಮ ಅತ್ತಿಗೆ ಸುಚಿ ಜೊತೆ ಆಗಮಿಸಿದ್ದು, ಕೆಂಪು ಬಣ್ಣದ ಜರತಾರಿ ಸೀರೆಯುಟ್ಟು, ಆಂಟಿಕ್ ಜ್ಯುವೆಲ್ಲರಿ ಧರಿಸಿ, ತುಂಬಾನೆ ಸುಂದರವಾಗಿ ಕಾಣಿಸುತ್ತಿದ್ದಾರೆ. ಕಾಮೆಂಟ್ ಪೂರ್ತಿಯಾಗಿ ಅಭಿಮಾನಿಗಳು ಸಂಗೀತಾಗೆ ಮೆಚ್ಚುಗೆ ಸೂಚಿಸಿದ್ದಾರೆ. 
 

ಬಿಗ್ ಬಾಸ್ ಮುಗಿದ ಬಳಿಕ ನಮ್ರತಾ ಗೌಡ ರೀಲ್ಸ್, ಡ್ಯಾನ್ಸ್, ವಿಡಿಯೋ ಶೂಟ್ ನಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಅಭಿಮಾನಿಗಳು ನಮ್ರತಾರನ್ನು ಮತ್ತೆ ತೆರೆ ಮೇಲೆ ನೋಡೋದಕ್ಕೆ ಬಯಸಿದ್ದಾರೆ. ಆದರೆ ನಮ್ರತಾ ನಟನೆ ಬಗ್ಗೆ ಇಲ್ಲಿವರೆಗೆ ಏನೂ ಮಾಹಿತಿ ನೀಡಿಲ್ಲ. 
 

Latest Videos

click me!