ಬನ್ರೋ ಈಗ ಕಾಮೆಂಟ್ ಮಾಡಿ; ಮೈ ತುಂಬಾ ಬಟ್ಟೆ ಹಾಕೊಂಡು ಮಂಡಿ ಹತ್ರ ಪ್ಯಾಂಟ್ ಹರ್ಕೊಂಡ ಗೀತಾ!

First Published | Sep 12, 2023, 4:36 PM IST

ಸಖತ್ ಸಿಂಪಲ್ ಆಂಡ್ ಸೂಪರ್ ಆಗಿ ಕಾಣಿಸಿಕೊಂಡ ಭವ್ಯಾ ಗೌಡ. ಖಾಸಗಿ ಕಾರ್ಯಕ್ರಮದ ಲುಕ್ ಫುಲ್ ವೈರಲ್......

 ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗೀತಾ ಧಾರಾವಾಹಿಯಲ್ಲಿ ಮಿಂಚುತ್ತಿರುವ ಗೀತಾ ಉರ್ಫ್ ಭವ್ಯಾ ಗೌಡ ಸೂಪರ್ ಕ್ಲಾಸಿ ಆಗಿ  ಕಾಣಿಸಿಕೊಂಡಿದ್ದಾರೆ.

ಕೆಲವು ದಿನಗಳ ಹಿಂದೆ ಟ್ರಾನ್ಸ್‌ಪರೆಂಟ್ ಸೀರೆ ಧರಿಸಿದ್ದಕ್ಕೆ ಟ್ರೋಲ್ ಆದ ಗೀತಾ ಈಗ ಮಾಡರ್ನ್‌ ಲುಕ್‌ನಲ್ಲಿ ಮತ್ತೊಂದು ಫೋಟೋ ಅಪ್ಲೋಡ್ ಮಾಡಿದ್ದಾರೆ.

Tap to resize

ಅಂಗಡಿ ಒಂದರ ಓಪನಿಂಗ್ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ ಭವ್ಯಾ ಗೌಡ ನೀಲಿ ಬಣ್ಣದ ಜೀನ್ಸ್‌ ಪ್ಯಾಂಟ್‌ಗೆ ಹೂಗಳ ಶರ್ಟ್‌ ಧರಿಸಿದ್ದಾರೆ. 

ಸೀರೆ ಟ್ರಾನ್ಸ್‌ಪರೆಂಟ್ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದರು. ಈಗ ಗೀತಾ ಧರಿಸಿರುವ ಶರ್ಟ್‌ ಕೂಡ ಟ್ರಾನ್ಸ್‌ಪರೆಂಟ್ ಇದೆ ಆದರೂ ಪರ್ವಾಗಿಲ್ಲ ಮೈ ಕವರ್ ಆಗಿದೆ ಎಂದಿದ್ದಾರೆ.

ಇನ್ನು ಪದೇ ಪದೇ ಭವ್ಯಾ ಗೌರನ್ನು ಟಾರ್ಗೆಟ್ ಮಾಡುತ್ತಿರುವ ಟ್ರೋಲಿಗರಿಗೆ 'ಬನ್ರೋ ಈಗ ಕಾಮೆಂಟ್ ಮಾಡಿ ಎಷ್ಟು ಸಿಂಪಲ್ ಆಗಿ ಮೈ ಕವರ್ ಮಾಡಿಕೊಂಡಿದ್ದಾರೆ ನೋಡಿ' ಎಂದು ಅಭಿಮಾನಿಗಳು ಹೇಳಿದ್ದಾರೆ.

ಈಗ ಭವ್ಯಾ ಗೌಡ ಕಾಣಿಸಿಕೊಂಡಿರುವ ಲುಕ್ ಚೆನ್ನಾಗಿ ಆದರೆ ಮಂಡಿ ಭಾಗದಲ್ಲಿ ಪ್ಯಾಂಟ್‌ ಯಾಕೆ ಹರಿದುಕೊಂಡಿದ್ದಾರೆ ಎಂದು ಮತ್ತೊಮ್ಮೆ ನೆಟ್ಟಿಗರು ಕಾಮೆಂಟ್ ಮಾಡಿ ಪ್ರಶ್ನೆ ಮಾಡಿದ್ದಾರೆ.

ಗೀತಾ ಉರ್ಫ್‌ ಭವ್ಯಾ ಗೌಡ ಮಾತ್ರ ಇಷ್ಟೊಂದು ಸ್ಟೈಲಿಷ್ ಆಗಿಲ್ಲ ಅವರ ಮೂರು ಸಹೋದರಿಯರು ಕೂಡ ಸೂಪರ್ ಸ್ಟೈಲಿಷ್ ಆಗಿದ್ದು ಉಡುಪುಗಳನ್ನು ಶೇರ್ ಮಾಡುತ್ತಾರೆ. 

Latest Videos

click me!