ಮುದ್ದು ಮಗನ ನಾಮಕರಣ ಸಂಭ್ರಮದಲ್ಲಿ ನಟ ದರ್ಶಕ್ ಗೌಡ - ಶಿಲ್ಪಾ ಜೋಡಿ

Published : Jun 05, 2025, 03:29 PM ISTUpdated : Jun 05, 2025, 03:32 PM IST

ಕನ್ನಡ ಕಿರುತೆರೆಯ ಜೋಡಿಗಳಾದ ದರ್ಶಕ್ ಗೌಡ ಹಾಗೂ ಶಿಲ್ಪಾ ಜೋಡಿ ತಮ್ಮ ಮಗನಿಗೆ ಮುದ್ದಾದ ಹೆಸರಿಡುವ ಮೂಲಕ ನಾಮಕರಣವನ್ನು ಸಂಭ್ರಮದಿಂದ ಆಚರಿಸಿದ್ದಾರೆ.

PREV
17

ಕನ್ನಡ ಕಿರುತೆರೆಯಲ್ಲಿ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದ ಜೋಡಿ ದರ್ಶಕ್ ಗೌಡ (Darshak Gowda) ಹಾಗೂ ಶಿಲ್ಪಾ. ಸದ್ಯ ಈ ಜೋಡಿ ಪೋಷಕರಾಗುವ ಸಂಭ್ರಮವನ್ನು ಎಂಜಾಯ್ ಮಾಡುತ್ತಿದ್ದಾರೆ. ಸದ್ಯಕ್ಕಂತೂ ಈ ಜೋಡಿಯ ಮನೆಯಲ್ಲಿ ಸಂಭ್ರಮದ ವಾತಾವರಣ ಮನೆಮಾಡಿದೆ.

27

ಹೌದು, ದರ್ಶಕ್ ಮತ್ತು ಶಿಲ್ಪಾ (Shilpa Ravi) ಜೋಡಿಯ ಮುದ್ದಿನ ಮಗನ ನಾಮಕರಣ ಸಮಾರಂಭ ನಡೆದಿದೆ. ಮಗನ ನಾಮಕರಣವನ್ನು ಅದ್ಧೂರಿಯಾಗಿ ನಡೆಸಿದ್ದು, ಮುದ್ದಾದ ಫೋಟೊಗಳನ್ನು ದರ್ಶಕ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

37

ಈ ಜೋಡಿ ತಮ್ಮ ಮಗನಿಗೆ ಪೂರಕ್ ಗೌಡ (Poorak Gowda)ಎಂದು ಹೆಸರಿಟ್ಟಿದ್ದಾರೆ. ಸದ್ಯಕ್ಕಂತೂ ಈ ಜೋಡಿ ಮಗನ ಲಾಲನೆ ಪಾಲನೆಯಲ್ಲಿ ತೊಡಗಿಕೊಂಡಿದ್ದಾರೆ. ಫೋಟೊಗಳ ಜೊತೆಗೆ ನನ್ ಜೀವನ್ದಲ್ಲಿ ತುಂಬ ನೆಮ್ಮದಿ ಕೊಡೊ ಜಾಗ ಎಂದು ಬರೆದುಕೊಂಡಿದ್ದಾರೆ.

47

ದರ್ಶಕ್ ಹಾಗೂ ಶಿಲ್ಪಾ ರವಿ ಇಬ್ಬರೂ ಹಲವು ವರ್ಷಗಳಿಂದ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಇಬ್ಬರು ಆರಂಭದಲ್ಲಿ ಸ್ನೇಹಿತರಾಗಿದ್ದು, ನಂತರ ಪ್ರೀತಿಸಿ, 2020ರ ನವಂಬರ್ 25 ರಂದು ಈ ಜೋಡಿ ಮದುವೆಯಾಗಿದ್ದರು.

57

ಇದೀಗ ಈ ಜೋಡಿ ಪೋಷಕರಾಗಿ ಭಡ್ತಿ ಪಡೆದಿದ್ದು, ಆ ಸಂಭ್ರಮದಲ್ಲಿದ್ದಾರೆ. ಶಿಲ್ಪಾ ರವಿ ಸದ್ಯ ನಟನೆಯಿಂದ ದೂರ ಉಳಿದು ಮಗುವಿನ ಲಾಲನೆ ಪಾಲನೆಯಲ್ಲಿ ತೊಡಗಿದ್ದಾರೆ. ಆದರೆ ದರ್ಶಕ್ ಸೀರಿಯಲ್ ಗಳಲ್ಲಿ (serials) ಮತ್ತೆ ಬ್ಯುಸಿಯಾಗಿದ್ದಾರೆ.

67

ದರ್ಶಕ್​ ಗೌಡ ಕಾವ್ಯಾಂಜಲಿ, ಬೆಟ್ಟದ ಹೂ ಧಾರಾವಾಹಿಯಲ್ಲಿ ನಟಿಸಿದ್ದು, ಸದ್ಯ ಪರಭಾಷೆಯಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಅವರು ಸ್ಟಾರ್ ಸುವರ್ಣ ವಾಹಿನಿಯಲ್ಲಿ (Star Suvarna) ಪ್ರಸಾರವಾಗುತ್ತಿರುವ ಅನುಪಲ್ಲವಿ ಧಾರಾವಾಹಿಯಲ್ಲಿ ಸಹ ನಟಿಸುತ್ತಿದ್ದಾರೆ.

77

ಶಿಲ್ಪಾ ರವಿ ಅವರು ಈ ಹಿಂದೆ ನಾಗಿಣಿ, ಜೀವ ಹೂವಾಗಿದೆ (Jeeva Hoovagide), ಮಾನಸ ಸರೋವರ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಸದ್ಯ ಸೀರಿಯಲ್ ಗಳಿಂದ ದೂರ ಉಳಿದಿದ್ದಾರೆ ನಟಿ.

Read more Photos on
click me!

Recommended Stories