ಕನ್ನಡದ ನಟಿ ಶೋಭಾ ಶೆಟ್ಟಿ ತೆಲುಗು ಪ್ರೇಕ್ಷಕರಿಗೂ ಪರಿಚಿತರಾಗಿದ್ದಾರೆ. ಕಾರ್ತಿಕ ದೀಪಂ ಧಾರಾವಾಹಿಯಲ್ಲಿ ಖಳನಾಯಕಿ ಮೋನಿತಾ ಪಾತ್ರದಲ್ಲಿ ಶೋಭಾ ಶೆಟ್ಟಿ ನಟನೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತೆಲಗು ಬಿಗ್ ಬಾಸ್ ಸೀಸನ್ 7 ಮತ್ತು ಇತ್ತೀಚಿನ ಕನ್ನಡ ಬಿಗ್‌ಬಾಸ್ ರಲ್ಲೂ ಸ್ಪರ್ಧಿಯಾಗಿದ್ದರು.
24
ಫೈನಲ್‌ವರೆಗೂ ಹೋಗದಿದ್ದರೂ ಟಾಪ್ 10ರಲ್ಲಿ ಸ್ಥಾನ ಪಡೆದಿದ್ದರು ಶೋಭಾ ಶೆಟ್ಟಿ. ತೆಲುಗು ಬಿಗ್ ಬಾಸ್ ನಂತರ ಕನ್ನಡ ಬಿಗ್ ಬಾಸ್‌ನಲ್ಲೂ ಸ್ಪರ್ಧಿಸಿದ್ದರು. ಕಾರ್ತಿಕ ದೀಪಂ ಧಾರಾವಾಹಿಯಲ್ಲಿ ಕಾರ್ತಿಕ್ ತಮ್ಮನ ಪಾತ್ರದಲ್ಲಿ ನಟಿಸಿದ್ದ ಯಶವಂತ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
34
ಇತ್ತೀಚೆಗೆ ಯಾವುದೇ ಧಾರಾವಾಹಿಯಲ್ಲಿ ನಟಿಸುತ್ತಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದ ಶೋಭಾ ಶೆಟ್ಟಿ ಇದೀಗ ಸೋಶಿಯಲ್ ಮೀಡಿಯಾಗೆ ಬ್ರೇಕ್ ಹಾಕುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ವೈಯಕ್ತಿಕ ಕಾರಣಗಳಿಂದ ಸೋಶಿಯಲ್ ಮೀಡಿಯಾಗೆ ಬ್ರೇಕ್ ಹಾಕಿರುವುದಾಗಿ ಶೋಭಾ ಶೆಟ್ಟಿ ತಿಳಿಸಿದ್ದಾರೆ. ಬಿಗ್ ಬಾಸ್ ನಂತರ ಅವಕಾಶಗಳು ಕಡಿಮೆಯಾಗಿವೆ ಎನ್ನಲಾಗಿದೆ. ನಿಶ್ಚಿತಾರ್ಥವಾಗಿ ವರ್ಷ ಕಳೆದರೂ ಮದುವೆ ಸುದ್ದಿಯಿಲ್ಲ. ಗಾರ್ಮೆಂಟ್ ವ್ಯವಹಾರವನ್ನೂ ಆರಂಭಿಸಿದ್ದಾರೆ ಎನ್ನಲಾಗಿದೆ.