BBK 12: ಅಶ್ವಿನಿ ಗೌಡ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಗಿಲ್ಲಿ ನಟ, ಅತ್ತ ರಘುಗೆ ಹೊಂಡ ತೋಡಿದ್ರು!

Published : Nov 22, 2025, 10:48 AM IST

BBK 12 Updates: ಬಿಗ್‌ ಬಾಸ್‌ ಮನೆಯಲ್ಲಿ ಅಶ್ವಿನಿ ಅವರೇ ಅಂತ ಕರೆದಿಲ್ಲ, ಅಶ್ವಿನಿ ಎಂದು ಕರೆದರು ಎಂದು ರಘು ಗೌಡ ವಿರುದ್ಧ ಅಶ್ವಿನಿ ಕೂಗಾಡಿದ್ದರು. ಇದಕ್ಕಾಗಿ ದೊಡ್ಡ ಜಗಳ ಮಾಡಿ, ಉಪವಾಸ ಸತ್ಯಾಗ್ರಹ ಕೂಡ ಮಾಡಿದ್ದರು. ರಘು ಮಾತ್ರ ಅಶ್ವಿನಿಗೆ ಕ್ಷಮೆ ಕೇಳಿರಲಿಲ್ಲ. 

PREV
15
ಬಿಗ್‌ ಬಾಸ್‌ ಮಧ್ಯೆ ಪ್ರವೇಶ ಮಾಡಬೇಕು

ನಾನು ತಪ್ಪು ಮಾಡಿಲ್ಲ. ಅಶ್ವಿನಿ ಅವರು ಇಪ್ಪತ್ತು ನಿಮಿಷ ಬಾಯಿಗೆ ಬಂದಹಾಗೆ ಮಾತಾಡಿದರು. ಕ್ಷಮೆ ಕೇಳೋದಿಲ್ಲ ಎಂದು ರಘು ಪಟ್ಟು ಹಿಡಿದರು. ಅಶ್ವಿನಿ ಅವರು ಸುಮ್ಮನೆ ಉಪವಾಸ ಸತ್ಯಾಗ್ರಹ ಮಾಡಿದರು, ಬಿಗ್‌ ಬಾಸ್‌ ಮಧ್ಯೆ ಪ್ರವೇಶ ಮಾಡಬೇಕು ಎಂದು ಪಟ್ಟು ಹಿಡಿದರು.

25
ಅಶ್ವಿನಿಗೆ ಕ್ಷಮೆ ಕೇಳಲಿಲ್ಲ

ಪದೇ ಪದೇ ಗಿಲ್ಲಿ ನಟ ಅವರು ರಘುಗೆ ಅಶ್ವಿನಿ ಬಳಿ, ಕ್ಷಮೆ ಕೇಳಬೇಡ, ಕ್ಷಮೆ ಕೇಳದಿದ್ರೆ ಸುಮ್ಮನೆ ಇರೋದಿಲ್ಲ ಎಂದು ಹೇಳಿದ್ದರು. ಹೀಗಾಗಿಯೋ ಏನೋ, ಒಮ್ಮೆಯೂ ರಘು ಅವರು ಅಶ್ವಿನಿಗೆ ಕ್ಷಮೆ ಕೇಳಲಿಲ್ಲ. ಗಿಲ್ಲಿ ನಟ ಮಾತ್ರ ಯಾವುದೇ ಕಾರಣಕ್ಕೂ ಕ್ಷಮೆ ಕೇಳಬೇಡ ಎಂದು ಅಶ್ವಿನಿಗೆ ಹೇಳಿದ್ದರು.

35
ಏಕಾಗ್ರತೆ ಹಾಳುಮಾಡಬೇಕಿತ್ತು

ಟಾಸ್ಕ್‌ವೊಂದರಲ್ಲಿ ಗಿಲ್ಲಿ ನಟ ಅವರು ಮಾತನಾಡಿ, ಅಶ್ವಿನಿ ಗೌಡ ಅವರ ಏಕಾಗ್ರತೆ ಹಾಳುಮಾಡಬೇಕಿತ್ತು. ಆಗ ಗಿಲ್ಲಿ ಅವರು, “ಹೊಡೆಯುತ್ತೇನೆ, ಹಲ್ಲು ಉದುರಿಸುವೆ, ಕಿತಾಪತಿ ಹೆಂಗಸು, ತಲೆ ಚಿಪ್ಪು ಉದುರುವ ಹಾಗೆ ಮಾಡುತ್ತೀನಿ” ಎಂದೆಲ್ಲ ಹೇಳಿದ್ದರು. ಗಿಲ್ಲಿ ನಟ ಅವರು ಪರ್ಸನಲ್‌ ಆಗಿ ತಗೊಂಡು ಮಾತನಾಡಿದ್ದರು.

45
ಅಶ್ವಿನಿ ಗೌಡಗೆ ಬೇಸರ

ಗಿಲ್ಲಿ ನಟ ಅವರು ಮಾತನಾಡಿದ್ದು ಅಶ್ವಿನಿ ಗೌಡಗೆ ಬೇಸರ ತಂದಿತ್ತು. 12 ನಿಮಿಷ ಟೈಮ್‌ ಆಗಿದೆ ಎಂದು ಗೊತ್ತಿದ್ದರೂ ಕೂಡ ಅವರು ಮಾತನಾಡದೆ ಹಾಗೆ ಕೂತಿದ್ದರು. ಗಿಲ್ಲಿ ನಟ, ಕಾವ್ಯ ಶೈವ ಏನು ಮಾತನಾಡಬೇಕು ಎಂದು ಕೇಳಿಸಿಕೊಳ್ಳಬೇಕಿತ್ತಂತೆ. ಇದೆಲ್ಲವೂ ಗಿಲ್ಲಿ ನಟನಿಗೆ ಅರ್ಥವಾಗಿತ್ತು.

55
ಕ್ಷಮೆ ಕೇಳಿದ ಗಿಲ್ಲಿ ನಟ

ಗಿಲ್ಲಿ ನಟ ಅವರು ಆಮೇಲೆ ಅಶ್ವಿನಿ ಗೌಡಗೆ ಕ್ಷಮೆ ಕೇಳಿದ್ದಾರೆ. “ನಿಮ್ಮ ಕೈಯನ್ನು ಕಾಲು ಎಂದು ತಿಳಿದುಕೊಂಡು ಕ್ಷಮೆ ಕೇಳ್ತೀನಿ. ಇದು ಆಟ, ಆಟದ ಬರದಲ್ಲಿ ನಿಮಗೆ ನೋವುಂಟು ಮಾಡುವ ಮಾತನಾಡಿದ್ದೇನೆ” ಎಂದು ಹೇಳಿದ್ದರು. ಆಮೇಲೆ ರಘು ಪ್ರಶ್ನೆ ಮಾಡಿದಾಗ, “ಸುಮ್ಮನೆ ಕೇಳಿದೆ” ಎಂದಿದ್ದಾರೆ. ಮತ್ತೆ ಗಿಲ್ಲಿ ಉಲ್ಟಾ ಹೊಡೆದಿದ್ದಾರೆ. ರಘು ಹಾಗೂ ಸ್ಪಂದನಾ ಅವರು, “ನಮಗೆ ಹೊಂಡ ತೋಡಿದೆ” ಎಂದಿದ್ದಾರೆ.

Read more Photos on
click me!

Recommended Stories