ಮೇಕಪ್‌ ಹಾಕಿರೋ ಬಿಗ್ ಬಾಸ್ ಮೋಕ್ಷಿತಾ ಪೈನ ನೆಟ್ಟಿಗರು ಕಂಡು ಹಿಡಿಯಲೇ ಇಲ್ಲ; ಫೋಟೋ ವೈರಲ್

Published : Jan 28, 2025, 03:06 PM IST

ಮೇಕಪ್ ಹಾಕದ ಪಾರುನ ನೋಡಿ ನೋಡಿ ಈಗ ಈ ಫೋಟೋ ಇಷ್ಟನೇ ಅಗುತ್ತಿಲ್ಲ ಅಂತಿದ್ದಾರೆ ನೆಟ್ಟಿಗರು..... 

PREV
16
ಮೇಕಪ್‌ ಹಾಕಿರೋ ಬಿಗ್ ಬಾಸ್ ಮೋಕ್ಷಿತಾ ಪೈನ ನೆಟ್ಟಿಗರು ಕಂಡು ಹಿಡಿಯಲೇ ಇಲ್ಲ; ಫೋಟೋ ವೈರಲ್

ಕನ್ನಡ ಕಿರುತೆರೆಯ ಪಾರ, ಬಿಗ್ ಬಾಸ್ ಸೀಸನ್ 11ರ ಟಾಪ್ 5ನೇ ಫೈನಲಿಸ್ಟ್‌ ಮೋಕ್ಷಿತಾ ಪೈ ಹಳೆಯ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. 

26

ನೀಲಿ ಬಣ್ಣದ ಸೆಲ್ವಾರ್‌ನಲ್ಲಿ ಮೋಕ್ಷಿತಾ ಪೈ ಫೋಟೋಶೂಟ್ ಮಾಡಿಸಿದ್ದಾರೆ. ಉದ್ದವಾದ ಕೂದಲು, ಸಿಂಪಲ್ ಆಭರಣವನ್ನು ಧರಿಸಿ ತಮ್ಮ ನಗುವಿನಿಂದ ಜನರ ಗಮನ ಸೆಳೆದಿದ್ದಾರೆ. 

36

2021 ಅಕ್ಟೋಬರ್‌ ತಿಂಗಳಿನಲ್ಲಿ ಮಾಡಿಸಿದ ಫೋಟೋಶೂಟ್ ಇದಾಗಿದ್ದು, ಅಮಿತಾ ಲೇಖಾ ಎಂಬುವವರು ಮೇಕಪ್ ಮಾಡಿದ್ದಾರೆ  ಹಾಗೂ ಓನ್‌ ಫ್ರೇಮ್‌ ಎಂಬುವವರು ಫೋಟೋ ಕ್ಲಿಕ್ ಮಾಡಿದ್ದಾರೆ. 

46

ಬಿಗ್ ಬಾಸ್ ಸೀಸನ್ 11ಕ್ಕೆ ಕಾಲಿಟ್ಟ ಮೇಲೆ ಮೋಕ್ಷಿತಾ ಪೈ ಹಳೆ ಫೋಟೋಗಳು ಸಖತ್ ವೈರಲ್ ಆಗುತ್ತಿದೆ. ಆದರೆ ಈ ಫೋಟೋ ನೋಡಿ ನೆಟ್ಟಿಗರು ಫುಲ್ ಶಾಕ್ ಆಗಿ ಹೊಸ ಫೋಟೋ ಅಂದುಕೊಂಡು ನೆಗೆಟಿವ್ ಕಾಮೆಂಟ್ ಮಾಡುತ್ತಿದ್ದಾರೆ.

56

ಅಯ್ಯೋ ಮೇಕಪ್ ಹಾಕೊಂಡ ಮೇಲೆ ಇದು ಮೋಕ್ಷಿತಾ ಅಂತಾನೇ ಅನಿಸುತ್ತಿಲ್ಲ...ಮೋಕ್ಷಿತಾ ಅಂತ ಗೊತ್ತಾಗಲಿಲ್ಲ...ನಿಮ್ಮನ್ನು ಮೇಕಪ್‌ನಲ್ಲಿ ಯಾರೂ ಕಂಡು ಹಿಡಿಯುವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ ನೆಟ್ಟಿಗರು. 

66

ಬಿಗ್ ಬಾಸ್ ಸೀಸನ್ 11ರ ಟಾಪ್‌ 5 ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ಮೋಕ್ಷಿತಾ ಪೈ ಸಖತ್ ಸರಳವಾಗಿದ್ದರು ಹಾಗೂ ಯಾವುದೇ ಬ್ರ್ಯಾಂಡೆಡ್‌ ಬಟ್ಟೆ ಹಾಕುತ್ತಿರಲಿಲ್ಲ ಹೆಚ್ಚಿಗೆ ಮೇಕಪ್ ಇರುತ್ತಿರಲಿಲ್ಲ. ಅದೇ ವೀಕ್ಷಕರಿಗೆ ಇಷ್ಟವಾಗಲು ಕಾರಣವಾಯ್ತು. 

Read more Photos on
click me!

Recommended Stories