ಗೆಳತಿಯಂತ ಅತ್ತಿಗೆಯ ಹುಟ್ಟುಹಬ್ಬಕ್ಕೆ ಸ್ಪೆಷಲ್ ವಿಶ್ ಮಾಡಿದ ಸಂಗೀತ ಶೃಂಗೇರಿ

Published : Jan 27, 2025, 10:55 PM ISTUpdated : Jan 28, 2025, 05:23 PM IST

ಕನ್ನಡ ಸಿನಿಮಾ ನಟಿ ಹಾಗೂ ಬಿಗ್ ಬಾಸ್ ಸ್ಪರ್ಧಿ ಸಂಗೀತಾ ಶೃಂಗೇರಿ ತಮ್ಮ ಅತ್ತಿಗೆಯ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭ ಕೋರಿದ್ದಾರೆ.   

PREV
17
ಗೆಳತಿಯಂತ ಅತ್ತಿಗೆಯ ಹುಟ್ಟುಹಬ್ಬಕ್ಕೆ ಸ್ಪೆಷಲ್ ವಿಶ್ ಮಾಡಿದ ಸಂಗೀತ ಶೃಂಗೇರಿ

ಕನ್ನಡ ಸಿನಿಮಾ ನಟಿ ಹಾಗೂ ಬಿಗ್ ಬಾಸ್ ಸೀಸನ್ 10 ರ ಸ್ಪರ್ಧಿ ಸಂಗೀತಾ ಶೃಂಗೇರಿ, ಅಭಿಮಾನಿಗಳಿಂದ ಸಿಂಹಿಣಿ ಅಂತಾನೆ ಹೆಸರು ಗಳಿಸಿರುವ ನಟಿ ಸಂಗೀತಾ ದೊಡ್ಮನೆಯಲ್ಲಿ ತಮ್ಮ ಜಬರ್ ದಸ್ತ್ ಆಟ, ಸ್ಪರ್ಧೆಯ ಮೂಲಕ ಜನಮನ ಗೆದ್ದಿದ್ದರು. 
 

27

ಸಂಗೀತಾ ಶೃಂಗೇರಿ (Sangeetha Sringeri) ಬಿಗ್ ಬಾಸ್ ಕಪ್ ಗೆಲ್ಲದಿದ್ದರೂ, ತಮ್ಮ ಗಟ್ಟಿಯಾದ ನಿಲುವು, ಕಠಿಣ ಸ್ಪರ್ಧೆಯ ಮೂಲಕ ಆಟಕ್ಕೂ ಸೈ, ಮಾತಿಗೂ ಸೈ, ಮನರಂಜನೆಗೂ ಸೈ ಎನಿಸಿಕೊಂಡಿದ್ದರು. 
 

37

ಆದರೆ ಮನೆಯಿಂದ ಹೊರಗಡೆ ಸಂಗೀತಾ ಶೃಂಗೇರಿ ಗೆಲುವಿಗೆ ನಿಜವಾದ ಕಾರಣ ಕರ್ತರು ಅಂದ್ರೆ ಅವರ ಅತ್ತಿಗೆ ಸುಚಿತ್ರ ಸಂತೋಷ್ ಕುಮಾರ್. ಇವರು ಸಂಗೀತ ಶೃಂಗೇರಿ ಅಣ್ಣನ ಹೆಂಡತಿ. ಇವರು ಸಂಗೀತಾ ಶೃಂಗೇರಿ ಬಿಗ್ ಬಾಸ್ ಮನೆಯಲ್ಲಿರುವಾಗ, ಅವರ ಸೋಶಿಯಲ್ ಮೀಡಿಯಾ ಹ್ಯಾಂಡಲ್ ಮಾಡುತ್ತಿದ್ದವರು ಸುಚಿತ್ರ. 
 

47

ಸಂಗೀತಾ ಶೃಂಗೇರಿಗೆ ಅತ್ತಿಗೆ ಅಂದ್ರೆ ಮೋಸ್ಟ್ ಫೇವರಿಟ್. ಅವರು ತುಂಬಾನೆ ಕ್ಲೋಸ್ ಆಗಿರೋದು ಕೂಡ ಅತ್ತಿಗೆ ಜೊತೆಗೆ. ದೊಡ್ಮನೆಯಲ್ಲಿ ಸಂಗೀತಾ ಅತ್ತಾಗ, ಬೇಸರವಾದಾಗ ಹೇಳುತ್ತಿದುದು ಸುಚಿ ಅನ್ನೋ ಹೆಸರನ್ನೇ, ಅಷ್ಟೇ ಯಾಕೆ, ಈ ಸಲ ರಕ್ಷಾಬಂಧನ ಸಂದರ್ಭದಲ್ಲೂ ಅಣ್ಣನ ಜೊತೆಗೆ, ತನಗಾಗಿ ಎಲ್ಲವನ್ನು ಎದುರಿಸಿದ ಅತ್ತಿಗೆಗೂ ರಾಖಿ ಕಟ್ಟಿ ಸಂಭ್ರಮಿಸಿದ್ದರು ಸಂಗೀತಾ. 
 

57

ಇದೀಗ ತನ್ನ ಪ್ರೀತಿಯ ಅತ್ತಿಗೆಯ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವಿಶೇಷವಾದ ಫೋಟೊಗಳನ್ನು ಶೇರ್ ಮಾಡಿ, ಮುದ್ದಾದ ನೋಟ್ ಬರೆದಿದ್ದಾರೆ. ಇದನ್ನ ನೋಡಿದ್ರೆ ಗೊತ್ತಾಗುತ್ತೆ, ಸಂಗೀತಾ ಹಾಗೂ ಸುಚಿ ನಡುವೆ ಇರುವ ಸಂಬಂಧ ಎಂತದ್ದು ಅನ್ನೋದು. 
 

67

ಅತ್ತಿಗೆಯ ವಿಶೇಷ ಫೋಟೊಗಳನ್ನು ಹಂಚಿಕೊಂಡು ಹ್ಯಾಪಿ ಬರ್ತ್ ಡೇ ಮೈ ಮೋಸ್ಟ್ ಲವಿಂಗ್ ಅತ್ತಿಗೆ. ಮೇಕ್ ಓವರ್ ಕಲಾವಿದರಾಗುವ ನಿಮ್ಮ ಹೊಸ ಸಾಹಸ ಯಶಸ್ವಿಯಾಗಲಿ ಮತ್ತು ಫಲಪ್ರದವಾಗಲಿ, ಲವ್ ಯೂ, ನನಗಾಗಿ ಯಾವಾಗಲೂ ಜೊತೆಗಿರೋದಕ್ಕೆ ಥ್ಯಾಂಕ್ಯೂ ಎಂದು ಬರೆದುಕೊಂಡಿದ್ದಾರೆ. 
 

77

ಗೆಳತಿಯಂತಹ ಅತ್ತಿಗೆ ಜೊತೆ ತೆಗೆದಂತಹ ಸುಂದರ ಕ್ಷಣದ ಫೋಟೊಗಳು ಹಾಗೂ ಫ್ಯಾಮಿಲಿ ಜೊತೆಗೆ ಕೇಕ್ ಕತ್ತರಿಸಿ ಸಂಭ್ರಮಿಸಿದ ಫೋಟೊಗಳನ್ನು ಶೇರ್ ಮಾಡಿದ್ದಾರೆ. ಜೊತೆಗೆ ಅತ್ತಿಗೆ ಹಾಗೂ ಅಣ್ಣನ ಜೊತೆಗೆ ಔಟಿಂಗ್ ಗೆ ತೆರಳಿ ಎಂಜಾಯ್ ಮಾಡಿರುವ ಫೋಟೊಗಳನ್ನು ಸಹ ತಮ್ಮ ಇನ್’ಸ್ಟಾ ಸ್ಟೋರಿಯಲ್ಲಿ ಶೇರ್ ಮಾಡಿದ್ದಾರೆ. 
 

click me!

Recommended Stories