ತಮ್ಮನ ಉಪನಯನ ಫೋಟೋ ಹಂಚಿಕೊಂಡ ಪಾರು : ದೇವರ ಮಗು ಸಾಕುತ್ತಿರುವ ದೇವತೆ ಎಂದ ಜನ

Published : Jul 28, 2024, 05:59 PM IST

ಪಾರು ಸೀರಿಯಲ್ ಖ್ಯಾತಿಯ ನಟಿ ಮೋಕ್ಷಿತಾ ಪೈ ತಮ್ಮ ವಿಶೇಷ ಚೇತನ ತಮ್ಮನ ಉಪನಯನ ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.   

PREV
17
ತಮ್ಮನ ಉಪನಯನ ಫೋಟೋ ಹಂಚಿಕೊಂಡ ಪಾರು : ದೇವರ ಮಗು ಸಾಕುತ್ತಿರುವ ದೇವತೆ ಎಂದ ಜನ

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಪಾರು (Peeru) ನೆನಪಿದೆ ಅಲ್ವಾ? ಖಂಡಿತಾ ನೆನಪಿರುತ್ತೆ. ಆರು ವರ್ಷಗಳ ಕಾಲ ಪ್ರೇಕ್ಷಕರನ್ನು ರಂಜಿಸಿದ ಧಾರಾವಾಹಿಯಲ್ಲಿ ಪಾರು ಪಾತ್ರದಲ್ಲಿ ಮಿಂಚಿದ ಚೆಲುವೆ ಮೋಕ್ಷಿತಾ ಪೈ. ಇವರು ತಮ್ಮ ಪರ್ಸನಲ್ ಲೈಫ್ ನಿಂದಲೂ ಸದಾ ಸುದ್ದಿಯಲ್ಲಿರುತ್ತಾರೆ. 
 

27

ಪಾರು ಸೀರಿಯಲ್ ಬಳಿಕ ಮೋಕ್ಷಿತಾ (Mokshitha Pai) ಹೆಸರಿಗಿಂತ ಪಾರು ಹೆಸರಿನ ಮೂಲಕವೇ ಖ್ಯಾತಿ ಪಡೆದಿರುವ ಮೋಕ್ಷಿತ, ಇಲ್ಲಿವರೆಗೂ ಯಾವುದೇ ಕಾಂಟ್ರವರ್ಸಿಗೂ ಒಳಗಾಗದೆ ತಮ್ಮ ಒಳ್ಳೆತನ, ಒಳ್ಳೆಗುಣಗಳಿಂದಲೇ ಜನರ ಮನಸಲ್ಲಿ ಉಳಿದಿದ್ದಾರೆ. ಅದರಲ್ಲೂ ತಮ್ಮ ವಿಶೇಷ ಚೇತನ ಸಹೋದರನ ಆರೈಕೆ ಮಾಡುವ ಇವರ ಗುಣವನ್ನು ಎಲ್ಲರೂ ಮೆಚ್ಚಿಕೊಳ್ಳುವವರೆ. 
 

37

ಹೆಚ್ಚಾಗಿ ಎಲ್ಲರನ್ನೂ ತಮ್ಮ ಅಭಿನಯದ ಮೂಲಕ ರಂಜಿಸುತ್ತಾ, ತಮ್ಮ ಮಾತುಗಳ ಮೂಲಕ ರಂಜಿಸುತ್ತಾ, ಯಾವಾಗ್ಲೂ ನಗುನಗುತ್ತಲೇ ಇರುವ ಮೋಕ್ಷಿತಾ ಪೈ ಅವರಿಗೆ ಒಬ್ಬ ವಿಶೇಷ ಚೇತನ ತಮ್ಮ ಇರೋ ವಿಷ್ಯ ನಿಮಗೆ ಗೊತ್ತೇ ಇದೆ. ಹೆಚ್ಚಾಗಿ ನಟಿ ತಮ್ಮ ಸಹೋದರನ ಫೋಟೋ, ಅವನೊಂದಿಗಿನ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಪ್ರೀತಿಯನ್ನು ಹೊರ ಹಾಕುತ್ತಲೇ ಇರುತ್ತಾರೆ. 
 

47

ಕೆಲವು ದಿನಗಳ ಹಿಂದೆ ಮೋಕ್ಷಿತಾ ಅವರ ಸಹೋದರನ ಉಪನಯನ ಕಾರ್ಯಕ್ರಮ ಸರಳವಾಗಿ ಕುಟುಂಬದ ಸಮ್ಮುಖದಲ್ಲಿ ನಡೆದಿದ್ದು, ನಟಿ ಇದೀಗ ಸಂಭ್ರಮದ ಕ್ಷಣಗಳ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ (social media) ಹಂಚಿಕೊಂಡಿದ್ದಾರೆ. 
 

57

ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ನಟಿ ತಮ್ಮನ ಉಪನಯನ ಎಂದು ಕ್ಯಾಪ್ಶನ್ ಹಾಕಿ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅಪ್ಪ, ಅಮ್ಮ, ತಮ್ಮನ ಜೊತೆಗಿನ ಫೋಟೋ, ಉಪನಯನ ಶಾಸ್ತ್ರದ ಫೋಟೋ, ತಮ್ಮನಿಗೆ ಚಿನ್ನದ ಚೈನ್ ಹಾಕುತ್ತಿರೋ ಫೋಟೋ ಹಾಗೂ ಪಾರು ಸೀರಿಯಲ್ ನಲ್ಲಿ ತಮ್ಮನಾಗಿ ನಟಿಸಿದ್ದ ಗಗನ್ ದೀಪ್ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 
 

67

ಸಾಮಾನ್ಯವಾಗಿ ಉಪನಯನವನ್ನು 7 ರಿಂದ 15 ನೇ ವಯಸ್ಸಿನಲ್ಲಿ ಮಾಡ್ತಾರೆ. ಆದರೆ ಮೋಕ್ಷಿತಾ ತಮ್ಮನಿಗೆ 20 ವರ್ಷ ವಯಸ್ಸಾಗಿದ್ದು, ಈಗಲೂ ಮಗುವಿನಂತ ಮನಸ್ಸು ಇರೋ ಹುಡುಗ. ಹಾಗಾಗಿ ಈ ವಯಸ್ಸಿನಲ್ಲಿ ಉಪನಯನ ಮಾಡಿದ್ದಾರೆ. ಜೊತೆಗೆ ಮನೆಯಲ್ಲಿ ನವಗ್ರಹ ಹೋಮ ಕೂಡ ಮಾಡಿಸಿದ್ದಾರೆ. 
 

77

ಮೋಕ್ಷಿತಾ ಹಂಚಿಕೊಂಡ ಫೋಟೋಗಳಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು, ದೇವರು ಕೊಟ್ಟ ತಮ್ಮನನ್ನು ನೋಡಿ ಕೊಳ್ತೀರೋ ದೇವತೆ ಅಂತ ಹೇಳಿದ್ದಾರೆ. ಇದನ್ನ ನೋಡಿದ್ರೆ ಗೊತ್ತಾಗುತ್ತೆ, ತಾಯಿ ಅಂದ್ರೆ ಎರಡನೇ ಅಮ್ಮ ಎಂದು ಸಹ ಜನ ಕಾಮೆಂಟ್ ಮಾಡಿದ್ದಾರೆ. ಅಲ್ಲದೇ ದೇವರನ್ನೇ ತಮ್ಮನಾಗಿ ಪಡೆದಿರುವಿರಿ, ತಮ್ಮನಿಗೆ ಎಲ್ಲವೂ ಒಳ್ಳೆಯದಾಗಲಿ ಎಂದು ಅಭಿಮಾನಿಗಳು ಹರಸಿದ್ದಾರೆ. 
 

Read more Photos on
click me!

Recommended Stories