ಏನೋ ಆಗಬೇಕಾದ್ದು, ಇನ್ನೇನೋ ಆಗೋಹಾಗೆ ಮಾಡಿ, ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಟ್ಟು ಪ್ರೇಕ್ಷಕರಿಗೇ ಟೆನ್ಷನ್ ಕೊಟ್ಟ ಸೀರಿಯಲ್ ಪುಣ್ಯವತಿ. ಪದ್ಮಿನಿಗೆ ಕಟ್ಟಬೇಕಿದ್ದ ತಾಳಿ, ಪೂರ್ವಿ ಕುತ್ತಿಗೆಯಲ್ಲಿದೆ, ಅಮ್ಮಾಜಿಗೂ ರಹಸ್ಯ ಗೊತ್ತಾಗುತ್ತಾ?
ಕಲರ್ಸ್ ಕನ್ನಡದಲ್ಲಿ (Colors Kannada) ಬರುತ್ತಿರುವ ಸೀರಿಯಲ್ ಗಳಲ್ಲಿ ಪುಣ್ಯವತಿ ಇತ್ತೀಚಿನ ದಿನಗಳಲ್ಲಿ ಬಹಳ ಕುತೂಹಲವನ್ನು ಮೂಡಿಸಿದೆ. ಒಂದು ವಾರದಿಂದ ಅದ್ದೂರಿಯ ಮದುವೆ ಶೂಟಿಂಗ್ ತೋರಿಸುತ್ತಿದ್ದ ಸೀರಿಯಲ್‌ನಲ್ಲಿ ಇದೀಗ ಸಡನ್ ಟ್ವಿಸ್ಟ್ ಕೊಟ್ಟು, ಪ್ರೇಕ್ಷಕರು ಊಹಿಸದೇ ಇರುವಂತಹ ತಿರುವನ್ನು ನೀಡಿದ್ದಾರೆ.
27
ನಂದನ್ ಮತ್ತು ಪದ್ಮಿನಿ ಇಬ್ಬರೂ ಪ್ರೀತಿಸಿ, ಆದಾದ ಬಳಿಕ ಇಬ್ಬರ ಅಂತಸ್ತು ಬೇರೆಯಾದರೂ ಮನೆಯವರೇ ಒಪ್ಪಿ ಇಬ್ಬರ ಮದುವೆಗೆ ಅದ್ಧೂರಿಯ ತಯಾರಿ ನಡೆಯುತ್ತೆ. ಇನ್ನೇನು ಎಲ್ಲಾ ಶಾಸ್ತ್ರಗಳು ಸರಾಗವಾಗಿ ನಡೆದು, ಮದುವೆ ಆಗಿಯೇ ಬಿಡುತ್ತದೆ ಎನ್ನುವಾಗಲೇ ಭಾರಿ ದೊಡ್ಡ ಟ್ವಿಸ್ಟ್ ಕೊಟ್ರು ನಿರ್ದೇಶಕರು.
37
ನಂದನ್ ನನ್ನು ಮದ್ವೆ ಆಗಬೇಕಾಗಿದ್ದ, ಪದ್ಮಿನಿ ವಿಲನ್ ಕಾಟದಿಂದಾಗಿ ಆಕೆಯ ಜಾಗದಲ್ಲಿ ಒಲ್ಲದ ಮನಸಿನಿಂದ ಯಾರಿಗೂ ತಿಳಿಯದಂತೆ, ಅತ್ತೆ ಹೇಳಿದಂತೆ ಅವಳ ತಂಗಿ ಪೂರ್ವಿ ಕುಳಿತುಕೊಳ್ಳುವಂತಾಯಿತು. ಇನ್ನೇನು, ಪದ್ಮಿನಿ ಮತ್ತೆ ಕಲ್ಯಾಣ ಮಂಟಪಕ್ಕೆ ಬಂದು ಮುಟ್ಟುತ್ತಾಳೆ ಎನ್ನುವಷ್ಟರಲ್ಲಿ ಪೂರ್ವಿ ಮತ್ತು ನಂದನ್ ಮದ್ವೆ ಆಗಿಯೇ ಹೋಯ್ತು.
47
ಪದ್ಮಿನಿ, ಪೂರ್ವಿ, ಅತ್ತೆಗೆ ಮಾತ್ರ ಗೊತ್ತಿದ್ದ ಮದ್ವೆ ಗುಟ್ಟು ಇದೀಗ ರಟ್ಟಾಗೋ ಕಾಲ ಬಂದಿದೆ. ನಂದನ್ ಪೂರ್ವಿಯನ್ನು ಮದ್ವೆಯಾಗಿದ್ದರೂ, ಎಲ್ಲರಿಗೂ ತಿಳಿದಂತೆ ಅಲ್ಲಿದ್ದದ್ದು ಪದ್ಮಿನಿ. ಹಾಗಾಗಿ ಪೂರ್ವಿಯನ್ನು ಮದ್ವಿಯಾದ ಸತ್ಯ ಮುಚ್ಚಿಟ್ಟು, ಗುಟ್ಟು ಮಾಡ್ತಿದ್ದಾರೆ ಮೂವರು.
57
ಇಂದಿನ ಎಪಿಸೋಡ್ ನ ಪ್ರೋಮೋ ಬಿಡುಗಡೆಯಾಗಿದ್ದು, ಅದು ಮತ್ತಷ್ಟು ಕುತೂಹಲ ಮೂಡಿಸಿದೆ. ಮದುವೆಯಾಗಿ ಮೊದಲ ಬಾರಿಗೆ ನಂದನ್ ಜೊತೆ ಅವನ ಮನೆಗೆ ತಲುಪುವ ಪದ್ಮಿನಿ ಮತ್ತು ಪೂರ್ವಿಗೆ ಅಲ್ಲೊಂದು ಶಾಖ್ ಕಾದಿತ್ತು.
67
ಪದ್ಮಿನಿ ಇನ್ನೇನು ಸೇರು ಒದ್ದು, ಮನೆಯೊಳಗೆ ಕಾಲಿರಸಬೇಕು ಅನ್ನೋವಷ್ಟರಲ್ಲಿ ಯಾರಿಗೂ ತಿಳಿದಿಲ್ಲ ಎಂದಿದ್ದ ಸತ್ಯ ಅಮ್ಮಾಜಿಗೆ ತಿಳಿದು, ಪದ್ಮಿನಿಯನ್ನು ಬಾಗಿಲಲ್ಲೇ ನಿಲ್ಲಿಸುತ್ತಾರೆ. ಅಕ್ಕಿ ಸೇರು ಒದ್ದು ಬರಬೇಕಾದವಳು ನೀನಲ್ಲ, ನಂದನ್ ಹೆಂಡ್ತಿ ಅಂದಾಗ ಎಲ್ಲರೂ ಶಾಕ್ ಆಗಿದ್ದಾರೆ.
77
ಅಮ್ಮಾಜಿ ನೇರವಾಗಿ ಬಂದು, ಪೂರ್ವಿಯ ಕತ್ತಿನಲ್ಲಿದ್ದ ತಾಳಿಯನ್ನು ತೋರಿಸುತ್ತಾ.. ನಂದನ್ ತಾಳಿ ಕಟ್ಟಿರೋದು ಪೂರ್ವಿಗೆ. ಇದು ನಂಗೆ ನಿನ್ನೇನೆ ಗೊತ್ತಿತ್ತು, ಆದರೆ ಮನೆಯ ಮರ್ಯಾದೆ ಹೋಗಬಾರದು ಎಂದು ಸುಮ್ನಿದ್ದೆ ಎಂದು ಹೇಳಿದಾಗ ಎಲ್ಲರು ಶಾಕ್ ಆದ್ರು, ಅದರಲ್ಲೂ ನಂದನ್‌ಗೆ ಏನೂ ನಡೆಯುತ್ತೆ ಅನ್ನೋದೆ ತಿಳಿಯದಂತಹ ಸ್ಥಿತಿ ಉಂಟಾಗಿತ್ತು. ಮುಂದೇನಾಗುತ್ತೆ ಕಾದು ನೋಡಬೇಕು…