ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನುಸಿರಿಮನೆ ಪಾತ್ರದ ಮೂಲಕ ಕರ್ನಾಟಕದ ಮೂಲೆ ಮೂಲೆಗೂ ತಲುಪಿ, ಜನಪ್ರಿಯತೆ ಪಡೆದ ನಟಿ ಮೇಘಾ ಶೆಟ್ಟಿ (Megha Shetty). ಇವರು ನಟಿಸಿದ ಮೊದಲ್ ಸೀರಿಯಲ್ ಸೂಪರ್ ಹಿಟ್.
ಮೊದಲ ಸೀರಿಯಲ್ ಹಿಟ್ ಆಗಿದ್ದೇ ತಡ, ನಟಿ ಕಿರುತೆರೆಗೆ ಗುಡ್ ಬೈ ಹೇಳಿ, ಸದ್ಯ ಹಿರಿತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆ ಜೊತೆಗೆ ಕನ್ನಡದ ಕೆಲವು ಸೀರಿಯಲ್ ಗಳ ನಿರ್ಮಾಣ ಕೂಡ ಮಾಡ್ತಿದ್ದಾರೆ ಬೆಡಗಿ.
ಸೋಶಿಯಲ್ ಮೀಡೀಯಾದಲ್ಲಿ (Scoial media) ಆಕ್ಟೀವ್ ಆಗಿರುವ ನಟಿ ಮೇಘಾ ಶೆಟ್ಟಿ, ಹೆಚ್ಚಾಗಿ ತಮ್ಮ ಹೊಸ ಹೊಸ ಫೋಟೊ ಶೂಟ್ ಮೂಲಕ ಕಾಣಿಸಿಕೊಳ್ಳುತ್ತಿರುತ್ತಾರೆ, ಜೊತೆಗೆ ತಮ್ಮ ಸಿನಿಮಾಗಳ ಬಗ್ಗೆ ಅಪ್ ಡೇಟ್ ಕೂಡ ಕೊಡುತ್ತಿರುತ್ತಾರೆ.
ಇದೀಗ ನಟಿ ಸಿಂಪಲ್ ಆಗಿ ಲಂಗ ದಾವಣಿಯಲ್ಲಿ ಕಾಣಿಸಿಕೊಂಡಿದ್ದಾರೆ. ಗ್ರೇ ಬಣ್ಣದ ಫ್ಲೋರಲ್ ಲಂಗ, ಮರೂನ್ ಬಣ್ಣದ ಬ್ಲೌಸ್, ಕಪ್ಪು ಬಣ್ಣದ ದಾವಣಿ ಧರಿಸಿ, ಕುತ್ತಿಗೆಯಲ್ಲೊಂದು ಕಪ್ಪು ದಾರ, ಕೈಯಲ್ಲಿ ಗಾಜಿನ ಬಳೆ ಧರಿಸಿ, ಗ್ರಾಮದ ಹುಡುಗಿಯಂತೆ ಕಾಣಿಸಿಕೊಂಡಿದ್ದಾರೆ.
ತಮ್ಮ ಫೋಟೊಗಳ ಜೊತೆಗೆ ನಟಿ ‘ನಿಮ್ಮ ಪಕ್ಕದ ಮನೆ ಹುಡುಗಿ’ ಎಂದು ಕ್ಯಾಪ್ಶನ್ ಹಾಕಿದ್ದಾರೆ, ಇದನ್ನ ಮೆಚ್ಚಿಕೊಂಡಿರುವ ಅಭಿಮಾನಿಗಳು ನಮ್ಮ ಮುದ್ದು ಮೇಘ ಸುಂದರಿ. ನಮ್ಮ ಬೆಳದಿಂಗಳ ಚೆಲುವೆ. ನಿಮ್ಮ ಅಂದವ ಹೋಗಳಲು ಪದ ಪುಂಜ ಸಾಲದು, ಪಕ್ಕದಮನೆ ಹುಡುಗಿ ಅಲ್ಲ, ನಮ್ಮ ಮನೆಯ ಒಡತಿ ಎಂದು ಕೂಡ ಹಾಡಿ ಹೊಗಳಿದ್ದಾರೆ.
ಇನ್ನು ಮೇಘಾ ಶೆಟ್ಟಿ ಸಿನಿ ಜರ್ನಿ ಬಗ್ಗೆ ಹೇಳೊದಾದ್ರೆ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ತ್ರಿಬಲ್ ರೈಡಿಂಗ್’ ಚಿತ್ರದ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟು, ನಂತರ ಡಾರ್ಲಿಂಗ್ ಕೃಷ್ಣ ಜೊತೆ ದಿಲ್ ಪಸಂದ್ ಬಳಿಕ ಕೈವಾ ಸಿನಿಮಾದಲ್ಲೂ ನಟಿಸಿದ್ದರು.
ಮೇಘಾ ಶೆಟ್ಟಿ, ಸದ್ಯ ವಿನಯ್ ರಾಜ್‌ಕುಮಾರ್ (Vinay Rajkumar) ಅಭಿನಯದ ಗ್ರಾಮಾಯಣ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಆಫ್ಟರ್ ಆಪರೇಶನ್ ಲಂಡನ್ ಕೆಫೆ, ಚೀತಾ ಸಿನಿಮಾಗಳಲ್ಲೂ ಮೇಘಾ ಶೆಟ್ಟಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾಗಳು ಯಾವಾಗ ಬಿಡುಗಡೆಯಾಗುತ್ತವೆ ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.