ಪಾರು ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಲೋಕಕ್ಕೆ ಪಾದಾರ್ಪಣೆ ಮಾಡಿದ ಸುಂದರಿ ಮೋಕ್ಷಿತಾ ಪೈ, ಇದೀಗ ಬಿಗ್ ಬಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ.
ಬಿಗ್ ಬಾಸ್ ಸೀಸನ್ 11ರಲ್ಲಿ ಸ್ಪರ್ಧಿಸುತ್ತಿರುವ ಮೋಕ್ಷಿತಾ ಪೈ, ಕಾಲಿಡುತ್ತಿದ್ದಂತೆ ನರವಾಸಿ ಆಗಿಬಿಟ್ಟಿದ್ದರು. ಸ್ವರ್ಗ ಮತ್ತು ನರಕ ಒಂದಾದ ಮೇಲೆ ಉಗ್ರಂ ಮಂಜು ಮತ್ತು ಗೌತಮಿ ಜಾದವ್ ಜೊತೆ ಹೆಚ್ಚಿಗೆ ಸಮಯ ಕಳೆಯುತ್ತಿದ್ದರು.
ಒಮ್ಮೆ ಮೋಕ್ಷಿತಾ ಪೈ ಎಲಿಮಿನೇಟ್ ಆಗುವ ಸ್ಪರ್ಧಿಗಳ ಟಾಪ್ 2 ಪಟ್ಟಕ್ಕೆ ಬಂದಾಗ ಕಾರಿನಲ್ಲಿ ಒಂದು ರೌಂಡ್ ಹೋಗಿ ಬರುತ್ತಾರೆ. ತಾನು ಸೇಫ್ ಆಗಿದ್ದೀನಿ ಎಂದು ತಿಳಿಯುತ್ತಿದ್ದಂತೆ ಖುಷಿಯಿಂದ ಬರುವ ಬದಲು ಕಾಲೆಳೆದವರಿಗೆ ಕ್ಲಾಸ್ ತೆಗೆದುಕೊಳ್ಳುತ್ತಾರೆ.
ತ್ರಿವಿಕ್ರಮ್ ತಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು ಎನ್ನುವ ಕಾರಣಕ್ಕೆ ಮೋಕ್ಷಿತಾ ಆರಂಭದಿಂದಲೂ ತ್ರಿವಿಕ್ರಮ್ ವಿರುದ್ಧ ಧ್ವನಿ ಎತ್ತುತ್ತಾರೆ. ಯಾರು ಏನೇ ಹೇಳಲಿ ಏನೇ ಮಾಡಿದರೂ ಅದು ತ್ರಿವಿಕ್ರಮ್ ಕಾರಣ ಎನ್ನುವ ಆರೋಪ ಮಾಡುತ್ತಾರೆ.
ಜೋಡಿ ಟಾಸ್ಕ್ ಸಮಯದಲ್ಲಿ ಮೋಕ್ಷಿತಾ ಪೈ ಜೊತೆ ಆಟವಾಡಬೇಕು ಎಂದು ತ್ರಿವಿಕ್ರಮ್ ತಮ್ಮ ಆಸೆ ವ್ಯಕ್ತ ಪಡಿಸುತ್ತಾರೆ. ಅಲ್ಲಿಂದ ಇಬ್ಬರೂ ತಕ್ಕಮಟ್ಟಕ್ಕೆ ಆಗಾಗ ಮಾತನಾಡಿಕೊಂಡು ಬರುತ್ತಿದ್ದರು ಈಗ ಸ್ನೇಹ ಚೆನ್ನಾಗಿದೆ.
ಆದರೆ ಯಾವಾಗ ಉಗ್ರಂ ಮಂಜು ಮತ್ತು ಗೌತಮಿ ಜಾದವ್ ತಂಡದಿಂದ ಹೊರ ಬಂದರು ಅಲ್ಲಿಂದ ಇನ್ನಿತ್ತರ ಸ್ಪರ್ಧಿಗಳ ಜೊತೆ ಹೆಚ್ಚಿನ ಸಮಯ ಕಳೆಯುವುದಕ್ಕೆ ಶುರು ಮಾಡುತ್ತಾರೆ. ಅಲ್ಲಿಂದ ಗುಂಪುಗಾರಿಗೆ ಬ್ರೇಕ್ ಬೀಳುತ್ತದೆ.
ತ್ರಿವಿಕ್ರಮ್ ಮೇಲೆ ಕಿರುಚಿ ಕೂಗಾಡುತ್ತಿದ್ದ ಮೋಕ್ಷಿತಾ ಇದೀಗ ಉಗ್ರಂ ಮಂಜು ಮತ್ತು ಗೌತಮಿ ವಿರುದ್ಧ ಗರಂ ಆಗಿದ್ದಾರೆ. ಅವರಿಬ್ಬರು ಏನೇ ಮಾಡಿದ್ದರೂ ಅದಕ್ಕೆ ವಿರುದ್ಧವಾಗಿ ಧ್ವನಿ ಎತ್ತುತ್ತಾರೆ ಅಲ್ಲದೆ ಟಾರ್ಗೆಟ್ ಮಾಡುತ್ತಾರೆ.
ಮೋಕ್ಷಿತಾ ಪೈ ತಮ್ಮ ಮತ್ತೊಂದು ಮುಖ ತೋರಿಸಿದ ಮೇಲೆ 'ಅಯ್ಯೋ ಈ ಪಾರುಗೆ ಮೂಗೇ ಇಲ್ಲ ಆದರೂ ಮೂಗಿನ ಮೇಲೆ ಎಷ್ಟು ಕೋಪ ಇದೆ ನೋಡಿ' ಎಂದು ನೆಟ್ಟಿಗರು ಕಾಮೆಂಟ್ ಮಾಡಿ ಕಾಲೆಳೆದಿದ್ದಾರೆ.