ಕನ್ನಡ ಸೀರಿಯಲ್ ಹಾಗೂ ಬಿಗ್ ಬಾಸ್ ಮೂಲಕ ಮಿಂಚಿದ ನಟಿ ನಮ್ರತಾ ಗೌಡ (Namratha Gowda) ಸೋಶಿಯಲ್ ಮೀಡಿಯಾದಲ್ಲಿ ತುಂಬಾನೆ ಆಕ್ಟೀವ್. ನಟಿ ತಮ್ಮ ಫೋಟೊಗಳ ಮೂಲಕವೇ ಸದ್ದು ಮಾಡುತ್ತಿರುತ್ತಾರೆ.
ಬಾಲ ನಟಿಯಾಗಿ ಕನ್ನಡ ಕಿರುತೆರೆಯಲ್ಲಿ ಮಿಂಚಿದ ನಮ್ರತಾ ಗೌಡ, ಪುಟ್ಟ ಗೌರಿಯ ಮದುವೆಯಲ್ಲಿ (Putta Gowriya Maduve) ಎರಡನೇ ನಾಯಕಿಯಾಗಿದ್ದರು. ಅದಾದ ಬಳಿಕ ನಾಗಿಣಿ 2 ಸೀರಿಯಲ್ ನಲ್ಲಿ ನಾಗಿಣಿಯ ರೂಪ ತಾಳಿ ಮನರಂಜಿಸಿದ್ದರು.
ನಮ್ರತಾ ಗೌಡಗೆ ಹೆಚ್ಚು ಜನಪ್ರಿಯತೆ ತಂದು ಕೊಟ್ಟದ್ದು ಅಂದ್ರೆ ಅದು ಬಿಗ್ ಬಾಸ್ ಸೀಸನ್ 10. ಆರಂಭದಲ್ಲಿ ಹೇಟ್ ಕಾಮೆಂಟ್ ಗಳನ್ನೇ ಪಡೆದಿದ್ದ ನಟಿಯನ್ನು, ಕೊನೆ ಕೊನೆಗೆ ಎಲ್ಲರೂ ಇಷ್ಟಪಡುತ್ತಾ ಬಂದರು.
ಬಿಗ್ ಬಾಸ್ ನಿಂದ ಹೊರ ಬಂದ ಮೇಲೆ ನಟಿ ಒಂದಷ್ಟು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಅಭಿಮಾನಿಗಳು ಕಾಯುತ್ತಿದ್ದಂತೆ, ಯಾವುದೇ ಸೀರಿಯಲ್ ಆಗಲಿ, ಸಿನಿಮಾಗಳಲ್ಲಿ ನಟಿಸಿಲ್ಲ.
ಇತ್ತೀಚೆಗೆ ನಟಿ ತಮ್ಮ ಫೋಟೊಗಳನ್ನು ದುರ್ಬಳಕೆ ಮಾಡಿಕೊಂಡು, ರೇಟ್ ಫಿಕ್ಸ್ ಮಾಡಿ ಹಣ ಮಾಡುತ್ತಿರುವ ಜಾಲಗಳ ಬಗ್ಗೆ ಹಾಗೂ ಜನರಿಗೆ ತಮ್ಮ ಮೇಲೆ ಮೂಡಿದ ಕೆಟ್ಟ ಅಭಿಪ್ರಾಯದ ಬಗ್ಗೆಯೂ ಮಾತನಾಡಿ ಸುದ್ದಿಯಾಗಿದ್ದರು.
ಇದೀಗ ನಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹೊಸದಾಗಿ ಬಿಳಿ ಸೀರೆಯುಟ್ಟು ಫೋಟೊ ಶೂಟ್ ಮಾಡಿ ಶೇರ್ ಮಾಡಿದ್ದು, ನೆಟೆಡ್ ಸೀರೆಯಲ್ಲಿ ನಟಿ ದೇವಲೋಕದ ಅಪ್ಸರೆಯಂತೆ ಕಾಣಿಸ್ತಿದ್ದಾರೆ.
ನಟಿ ನಮ್ರತಾ ಗೌಡ ತಮ್ಮ ಫೋಟೊಗಳ ಜೊತೆಗೆ ಯಾವ ಕವಿಯೂ ಬರೆಯದ ಕವನ ನೀನಾಗು ಎಂದು ಬರೆದುಕೊಂಡಿದ್ದಾರೆ. ನಟಿಯ ಫೋಟೊಗಳಿಗೆ ಸಿಕ್ಕಾಪಟ್ಟೆ ಕಾಮೆಂಟ್ಸ್, ಲೈಕ್ಸ್ ಬಂದಿದೆ. ಅಭಿಮಾನಿಗಳಂತೂ ಬಿಳಿ ಸೀರೆಯಲ್ಲಿ ನಟಿಯ ಸೌಂದರ್ಯಕ್ಕೆ ಮನ ಸೋತಿದ್ದಾರೆ.