ನಿಜ ಹೇಳಿ ಇದು ಜಾತ್ರೆ ಕನ್ನಡಕ ಅಲ್ವಾ?; 'ಕಾವೇರಿ ಕನ್ನಡ ಮೀಡಿಯಂ' ಪ್ರಿಯಾ ಆಚಾರ್ ಕಾಲೆಳೆದ ನೆಟ್ಟಿಗರು!

First Published | Jul 25, 2024, 6:47 PM IST

ಖಾಸಗಿ ಬ್ರಾಂಡ್ ಪ್ರಚಾರದಲ್ಲಿ ಬ್ಯುಸಿಯಾದ ಕಾವೇರಿ ಮೇಡಂ. ಬೋಲ್ಡ್‌ ಫೋಟೋ ನೋಡಿ ಎಲ್ಲರೂ ಶಾಕ್.....

'ಗಟ್ಟಿಮೇಳ' ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ವೀಕ್ಷಕರ ಗಮನ ಸೆಳೆದ ಪ್ರಿಯಾ ಆಚಾರ್‌ ಈಗ ಕಾವೇರಿ ಕನ್ನಡ ಮೀಡಿಂನಲ್ಲಿ ಸಖತ್ ಮಿಂಚುತ್ತಿದ್ದಾರೆ.

ಪಾರು ಧಾರಾವಾಹಿ ನಟ ಸಿದ್ದು ಮೂಲಿಮನಿ ಅವರನ್ನು ಪ್ರೀತಿಸಿದ ಪ್ರಿಯಾ ಕಳೆದ ವರ್ಷ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

Tap to resize

ಧಾರಾವಾಹಿ ಮತ್ತು ಸಿನಿಮಾಗಳ ಜೊತೆ ಪ್ರಿಯಾ ಆಚಾರ್ ಆಗಾಗ ಖಾಸಗಿ ಬ್ರಾಂಡ್‌ಗಳ ಪ್ರಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಮಾಡುತ್ತಿದ್ದಾರೆ.

ಇತ್ತೀಚಿಗೆ ಫೋನ್ ಅಂಗಡಿವೊಂದರಲ್ಲಿ ಪ್ರಚಾರ ಮುಗಿದ ನಂತರ ಫೋಟೋಶೂಟ್ ಮಾಡಿಸಿದ್ದಾರೆ. ಆಗ ಪ್ರಿಯಾ ಧರಿಸಿರುವ ಗ್ಲಾಸ್‌ ಲುಕ್ ವೈರಲ್ ಆಗುತ್ತಿದೆ.

ಸೀಮೆಂಟ್ ಬಣ್ಣದ ಡೆನಿಮ್‌ ಸ್ಕರ್ಟ್‌ಗೆ ಕಪ್ಪು ಬಣ್ಣದ ಟೀ-ಶರ್ಟ್ ಧರಿಸಿರುವ ಪ್ರಿಯಾ ನೀಲಿ ಬಣ್ಣದ ಕೂಲಿಂಗ್ ಕ್ಲಾಸ್ ಧರಿಸಿದ್ದಾರೆ.  ಕೈಯಲ್ಲೊಂದು ಫೋಟೋ ಹಿಡಿದುಕೊಂಡಿದ್ದಾರೆ.

ಏನ್ ಮೇಡಂ ನೀವು ಇಷ್ಟು ಸೂಪರ್ ಆಗಿ ರೆಡಿಯಾಗಿ ಮಸ್ತ್‌ ಆಗಿ ಕಾಣಿಸುತ್ತಿದ್ದೀರಿ ಆದರೆ ಜಾತ್ರೆ ಕನ್ನಡಕ ಹಾಕಿದ್ದೀರಾ ಯಾಕೆ ಎಂದು ಕಾಮೆಂಟ್‌ನಲ್ಲಿ ಕಾಲೆಳೆದಿದ್ದಾರೆ. 

Latest Videos

click me!