ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾದ ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ ಒಂದರಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡು, ತನ್ನ ಮುದ್ದು ಮುದ್ದು ಮಾತುಗಳಿಂದ, ಅದ್ಭುತ ನಟನೆ, ಟ್ಯಾಲೆಂಟ್‌ನಿಂದಲೇ ಜನಪ್ರಿಯತೆ ಪಡೆದ ಬಾಲಕಿ ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಅಂಜನಿ ಕಶ್ಯಪ್ (Vanshika Anjani Kashyapa). ಬಳಿಕ ಗಿಚ್ಚಿ ಗಿಲಿಗಿಲಿಯಲ್ಲೂ ಭಾಗವಹಿಸಿ ಸೈ ಎನಿಸಿಕೊಂಡಿದ್ದರು.
ಸೋಶಿಯಲ್ ಮೀಡಿಯಾದಲ್ಲೂ(social media) ಸಖತ್ ಆಕ್ಟೀವ್ ಆಗಿರುವ ವಂಶಿಕಾರ ಇನ್ಸ್ಟಾಗ್ರಾಂ ಖಾತೆಯಿಂದ ಹೊಸದೊಂದು ವಿಡೀಯೋ ಶೇರ್ ಆಗಿದೆ. ಈ ವಿಡೀಯೋದಲ್ಲಿ ವಂಶಿಕಾ ಬ್ಯೂಟಿ ಸಲೂನ್ ಗೆ ತೆರಳಿ ತಮ್ಮ ಕೂದಲಿಗೆ ಕೆಂಪು ಬಣ್ಣದ ಹೇರ್ ಕಲರಿಂಗ್ ಮಾಡಿಸಿಕೊಳ್ಳೋದನ್ನು ಹಾಗೂ ಬಣ್ಣ ಬಳಿದ ಕೂದಲಿನೊಂದಿಗೆ ಸ್ಟೈಲ್ ಆಗಿ ಹೆಜ್ಜೆ ಹಾಕೋದನ್ನು ಕಾಣಬಹುದು. ಇದೀಗ ಈ ವಿಡಿಯೋ ಸಿಕ್ಕಾಪಟ್ಟೆ ಕೋಪಕ್ಕೆ ಗುರಿಯಾಗಿದ್ದು, ಈ ಸಣ್ಣ ವಯಸ್ಸಿಗೆ ಮಗುವಿಗೆ ಹೇರ್ ಕಲರ್ ಮಾಡಿಸಿದಕ್ಕಾಗಿ ವಂಶಿಕಾ ಪೋಷಕರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
ನೆಟ್ಟಿಗರೊಬ್ಬರು ದೇವರೆ… ನೀವು ಆ ಮಗುವಿನ ಬಾಲ್ಯವನ್ನು, ಆಕೆಯನ್ನು ಮುಗ್ಧತೆಯನ್ನೇ (innocense)ಅವಳಿಂದ ಕಿತ್ತುಕೊಳ್ಳುತ್ತಿದ್ದೀರಿ. ಯಾವ ಕಾರಣಕ್ಕಾಗಿ ಈ ಡ್ರಾಮಾ, ಶೋ ಆಫ್ ಎಲ್ಲಾ. ಆಕೆ ಅಪ್ಪನಂತೆ ತುಂಬಾನೆ ಟ್ಯಾಲೆಂಟೆಡ್ ಆಗಿರುವ ಮಗು. ನಾವೆಲ್ಲರೂ ಆಕೆಯ ಟ್ಯಾಲೆಂಟನ್ನು, ಆಕೆ ಹೇಗಿದ್ದಾಳೋ ಹಾಗೆ ಇಷ್ಟಪಡ್ತೀವಿ. ಆದ್ರೆ ನಿಮ್ಮ ತಿರ್ಪೆ ಶೋಕಿಗೆ, ಶೋ ಆಫ್ ಗೆ ಆ ಮಗುವಿನ ಜೀವನ ಯಾಕೆ ಹಾಳು ಮಾಡ್ತೀರಿ ಎಂದಿದ್ದಾರೆ.
ಮತ್ತೊಬ್ಬರು ಈ ವಯಸ್ಸಿಗೆ ಇದೆಲ್ಲಾ ಬೇಕಾ? ಇದು ಒಳ್ಳೆಯದಲ್ಲ. ನೀವು ಮಗುವನ್ನು ಅನಾರೋಗ್ಯಕರವಾಗಿ ಮಾಡ್ತಿದ್ದೀರಿ. ಆಕೆಯ ಮುಗ್ಧತೆ ಕಳೆದು ಹೋಗುತ್ತಿದೆ. ಪೋಷಕರಾಗಿ ಸ್ವಲ್ಪನಾದ್ರೂ ಜವಾಬ್ಧಾರರಾಗಿರಿ. ಆಕೆಯ ನ್ಯಾಚುರಲ್ ಸೌಂದರ್ಯವನ್ನು ಹಾಳೂ ಮಾಡಬೇಡಿ. ಕೆಮಿಕಲ್ ಯಾರದ್ರೂ ಮಗುವಿಗೆ ಹಚ್ಚುತ್ತಾರ ಎಂದಿದ್ದಾರೆ.
ಇನ್ನೊಬ್ಬರು ಹೇರ್ ಸ್ಟೈಲ್ ಓಕೆ. ಆದರೆ ಹೇರ್ ಕಲರ್ (hair colors) ಯಾಕೆ? ಅವಳ ವಯಸ್ಸಿಗೆ ಅದು ಹಾನಿಕಾರಕ. ಬೆಳಿಯೋ ಮಗುಗೆ ಹೇರ್ ಕಲರ್ ಕೆಮಿಕಲ್ ಒಳ್ಳೇದಲ್ಲ. ಫೈನಲ್ ಆಗಿ ಅವಳು ನಿಮ್ಮ ಮಗಳು. ನಿಮ್ಮ ಜವಾಬ್ದಾರಿ . ನೀವು ತಿಳಿದೇ ಹೇರ್ ಕಲರ್ ಮಾಡಿಸಿದ್ರೆ, ಮತ್ತೆ ಮುಂದುವರೆಸ ಬೇಡಿ ಎಂದು ಸಲಹೆ ಕೂಡ ನೀಡಿದ್ದಾರೆ.
ಮಗದೊಬ್ರು ಇನ್ನು ಶೋಕಿ ಮಾಡೋಕೆ ವಯಸ್ಸಿಗೆ. ಆರಾಮವಾಗಿ ಚಿಕ್ಕೋಳ ಥರ ಇರೋಕೆ ಬಿಡಿ. ಹೀಗೆ ಮಾಡಿ ಆಕೆಯ ಹೇರ್ ಥಿಕ್ ನೆಸ್ ಹೋಗುತ್ತೆ ನೋಡಿ, ಮತ್ತೆ ಕಾಲೇಜಿಗೆ ಹೋಗುವಾಗ ವಿಗ್ ಹಾಕಿಕೊಂಡು ಹೋಗೋಹಾಗೆ ಆಗುತ್ತೆ. ಯಾವ ಶಾಲೆಯಲ್ಲಿ ಇಷ್ಟು ಸಣ್ಣ ಮಕ್ಕಳಿಗೆ ಹೇರ್ ಕಲರ್ ಮಾಡಿಸಿದ್ರೆ ಬಿಡ್ತಾರೆ ಎಂದು ಸಹ ಜನ ಪ್ರಶ್ನಿಸಿದ್ದಾರೆ.
ಮಕ್ಕಳಿಗೆ ಕಲರ್ ಬಳಕೆ ಮಾಡಲೇಬೇಡಿ. ಇದರಲ್ಲಿರುವ ಕೆಮಿಕಲ್ ಕಲರ್, ಬೊಟೋಕ್ಸ್ ಎಲ್ಲವೂ ಮಗುವಿಗೆ ಹಾಳು. ಇದನ್ನೆಲ್ಲಾ 17 ವರ್ಷದ ನಂತರ ಮಾಡ್ಬೇಕು. ಹೇರ್ ಡ್ರೆಸ್ ಮಾಡೋರು ಪ್ರೊಫೆಷನಲ್ಸ್ ಅಲ್ವಾ? ಅವರಿಗೆ ಇದೆಲ್ಲಾ ಗೊತ್ತಿಲ್ವ? ಎಂದು ಇನ್ನೊಬ್ಬರು ಕೇಳಿದ್ದಾರೆ. ಇಂತಹ ಕೆಮಿಕಲ್ ಹಾಕಿ ಮಗುವಿನ ಆರೋಗ್ಯ ಹಾಳು ಮಾಡಬೇಡಿ. ಇನ್ನು ನಿಮ್ಮನ್ನ ಫಾಲೋ ಮಾಡೋದು ಕಷ್ಟ. ಅನ್ ಫಾಲೋ ಮಾಡ್ತೀವಿ ಎಂದು ಹೇಳಿ ಕೆಲವರು ಅನ್ ಫಾಲೋ ಕೂಡ ಮಾಡಿದ್ದಾರೆ.
ಇನ್ನೊಬ್ಬರು ಇಂಥದ್ದನ್ನೆಲ್ಲಾ ಪ್ರಮೋಟ್ ಮಾಡೋದ್ರಿಂದ ಏನ್ ಮೆಸೇಜ್ ಕೊಡ್ತೀರಾ? ಪೋಷಕರಿಗೆ ಸ್ವಲ್ಪ ಸೆನ್ಸ್ ಬೇಕು. ದುಡ್ಡೆ ಎಲ್ಲಾ ಅಲ್ಲ. ಇದು ಆಕೆಯ ಬಾಲ್ಯವನ್ನು ಎಂಜಾಯ್ ಮಾಡುವ ಸಮಯ. ತಂದೆ -ತಾಯಿಯಾಗಿ ನೀವು ನಿಮ್ಮ ಜವಾಬ್ಧಾರಿ ಮರೆತಿದ್ದೀರಿ. ನಟನೆ ಓಕೆ, ಆದರೆ ಇದು ತುಂಬಾನೆ ಜಾಸ್ತಿ ಆಯ್ತು, ನಿಮ್ಮ ಮೇಲಿನ ಗೌರವ ಹೋಯ್ತು ಎಂದು ಕ್ಲಾಸ್ ತೆಗೆದಿದ್ದಾರೆ.
ಹದಿನೆಂಟು ವರ್ಷ ವರೆಗೂ ಕೂದಲಿಗೆ ಬಣ್ಣ ಹಾಕೋ ಹಾಗಿಲ್ಲ ಇಷ್ಟ್ ಮಾತ್ರ ಗೊತ್ತಿಲ್ವಾ ಯಾವ ಪಾರ್ಲರ್ ಅದು. ಯಾವ ಪಾರ್ಲರ್ ಕೂಡಾ ಪ್ರೋತ್ಸಾಹಕೊಡಲ್ಲ ಮಕ್ಕಳಿಗೆ ಬಣ್ಣ ಹಾಕು ವುದಕ್ಕೆ, ಈ ವಯಸ್ಸಿಗೆ ಮಕ್ಳಿಗೆ ಇಲ್ದೆ ಇರೋ ಶೋಕಿ ಎಲ್ಲ ಹಾಕ್ರೋ ಕಲಿಸ್ತೀರಾ? ನಿಮ್ಮ ಶೋಕಿಗೆ ಮಗುನ ಯಾಕೆ ಬಲಿ ಕೊಡ್ತೀರಾ ಎಂದು ಬೇಸರದಿಂದ ಕೇಳಿದ್ದಾರೆ ಹಲವರು.