ಒಂದೇ ಮನೆಯವರು ಅಥವಾ ಅಕ್ಕ- ತಂಗಿ ಇಬ್ರೂ ಕನ್ನಡ ಸೀರಿಯಲ್ ಗಳಲ್ಲಿ ಬ್ಯುಸಿಯಾಗಿರುವಂತಹ ದೃಶ್ಯ ನೊಡೋಕೆ ಸಿಗೋದು ತುಂಬಾನೆ ಕಡಿಮೆ. ಆದರೆ ಈ ಮುದ್ದಾದ ಅಕ್ಕ ತಂಗಿಯರು ಕನ್ನಡ ಕಿರುತೆರೆಯಲ್ಲಿ ಹಲವು ವರ್ಷಗಳಿಂದ ಮಿಂಚುತ್ತಲೇ ಇದ್ದಾರೆ.
ಹೌದು ಕನ್ನಡಲ್ಲಿ ಹಲವು ಸೀರಿಯಲ್ ಗಳಲ್ಲಿ ನಟಿಸಿ, ಸದ್ಯ ಪಾರು ಸೀರಿಯಲ್ ನಲ್ಲಿ ಅನುಷ್ಕಾ ಆಗಿ ನಟಿಸುತ್ತಿರುವ ಮಾನ್ಸಿ ಜೋಶಿ (Mansi Joshi) ಮತ್ತು ಸದ್ಯ ಕಥೆಯೊಂದು ಶುರುವಾಗಿದೆ ಸೀರಿಯಲ್ ನಲ್ಲಿ ನಟಿಸುತ್ತಿರುವ ಇಂಚರಾ ಜೋಶಿ (Inchara Joshi), ರಿಯಲ್ ಆಗಿ ಅಕ್ಕ ತಂಗಿಯರು.
ಇಬ್ಬರ ಸೋಶಿಯಲ್ ಮೀಡಿಯಾ ನೋಡಿದ್ರೆ, ಇಬ್ಬರು ಜೊತೆಯಾಗಿರುವ ಟ್ರಾವೆಲ್ ಮಾಡಿರುವ ಫೋಟೋಸ್, ವಿಡಿಯೋ ರೀಲ್ಸ್ ಎಲ್ಲವನ್ನೂ ಕಾಣಬಹುದು. ಈ ಮುದ್ದಾದ ಅಕ್ಕ ತಂಗಿಯರ ಜೋಡಿ, ಇದೀಗ ಪ್ರೀತಿಯ ತಾಯಿ ಜ್ಯೋತಿ ಜೋಶಿ ಜೊತೆ ಪ್ರೇಮ ಸೌಧಕ್ಕೆ ಟೂರ್ ಮಾಡಿ ಬಂದಿದ್ದಾರೆ.
ಸದ್ಯ ಸೀರಿಯಲ್ ನಿಂದ ಬ್ರೇಕ್ ತೆಗೆದುಕೊಂಡಿರುವ ಇಂಚರಾ ಮತ್ತು ಮಾನ್ಸಿ ತಮ್ಮ ತಾಯಿಯನ್ನು ಕರೆದುಕೊಂಡು ಆಗ್ರಾಕ್ಕೆ ತಲುಪಿದ್ದು, ಅಲ್ಲಿ ತಾಜ್ ಮಹಲ್, ಕೆಂಪು ಕೋಟಿ ಮೊದಲಾದ ಜನಪ್ರಿಯ ತಾಣಗಳಿಗೆ ಭೇಟಿಯಾಗಿ ಫೋಟೋ ತೆಗೆಸಿಕೊಂಡಿದ್ದಾರೆ.
ಮಾನ್ಸಿ ಮತ್ತು ಇಂಚರಾ ಇಬ್ಬರೂ ಸಹ ತಾಜ್ ಮಹಲ್ (Taj Mahal) ಭೇಟಿ ಸಂದರ್ಭದಲ್ಲಿ ಸೀರೆಯುಟ್ಟಿದ್ದು, ಭವ್ಯ ಪ್ರೇಮ ಸೌಧದ ಮುಂದೆ ನಿಂತು ವಿವಿಧ ಪೋಸ್ ನೀಡುತ್ತಾ ಫೋಟೋ ತೆಗೆಸಿಕೊಂಡಿದ್ದಾರೆ.
ಕೆಂಪು ಕೋಟೆಗೂ ಭೇಟಿ ನೀಡಿದ್ದು, ಅಲ್ಲಿ ಮತ್ತು ತಾಜ್ ಮಹಲ್ ನಲ್ಲಿ ಫ್ಯಾಮಿಲಿ ಜೊತೆ ಕಳೆದಂತಹ ಸುಂದರ ಕ್ಷಣಗಳನ್ನು ಮೆಲುಕು ಹಾಕುತ್ತಾ, ಸೋಶಿಯಲ್ ಮೀಡಿಯಾದಲ್ಲಿ ಫ್ಯಾಮಿಲಿ ಫೋಟೋ ಹಂಚಿಕೊಂಡಿದ್ದಾರೆ.
ಹೆಚ್ಚಾಗಿ ತಾಯಿ ಜೊತೆ ಟ್ರಾವೆಲ್ ಮಾಡುತ್ತಲೇ ಇರುವ ಮಾನ್ಸಿ ಮತ್ತು ಇಂಚರಾ, ಎರಡು ತಿಂಗಳ ಹಿಂದೆ ದುಬೈ ಪ್ರವಾಸ ಕೂಡ ಮಾಡಿದ್ದರು, ಅಲ್ಲದೇ ದೇಶದ ಹಲವು ಪ್ರವಾಸಿ ತಾಣಗಳಿಗೆ ಅಮ್ಮನ ಜೊತೆ ಭೇಟಿ ನೀಡಿ ಎಂಜಾಯ್ ಮಾಡಿದ್ದರು.
ಇನ್ನು ಸೀರಿಯಲ್ ವಿಷ್ಯಕ್ಕೆ ಬಂದ್ರೆ ಇಂಚರಾ ಸದ್ಯ ಕಥೆಯೊಂದು ಶುರುವಾಗಿದೆ ಸೀರಿಯಲ್ ನಲ್ಲಿ ಸಹನಾ ಆಗಿ ನಟಿಸುತ್ತಿದ್ದಾರೆ. ಇವರು ಈ ಹಿಂದೆ ರಂಗನಾಯಕಿಯಲ್ಲಿ ನಟಿಸಿದ್ದರು. ಇನ್ನು ಮಾನ್ಸಿ ತಮಿಳು ಸೀರಿಯಲ್ ಗಳಲ್ಲೂ ಬ್ಯುಸಿಯಾಗಿದ್ದು, ಪಾರು ಸೀರಿಯಲ್ ನಲ್ಲಿ ಆಗೋಮ್ಮೆ, ಈಗೊಮ್ಮೆ ವಿಲನ್ ಆಗಿ ಕಾಣಿಸುತ್ತಿದ್ದಾರೆ.