ಕೆಂಪು ಬಣ್ಣದ Range Rover ಕಾರು ಖರೀದಿಸಿದ ಕಿರುತೆರೆ ನಟಿ ಡಿಂಪಿ ಗಂಗೂಲಿ!

First Published | Feb 8, 2022, 12:54 PM IST

 ಬಣ್ಣದ ಬದುಕಿನಿಂದ ದೂರ ಉಳಿಸಿರುವ ನಟಿ ಡಿಂಪಿ ಇದೀಗ ಹೊಸ ಕಾರನ್ನು ಖರೀದಿಸಿದ್ದಾರೆ. ಮಕ್ಕಳ ಜೊತೆಗೆ ನಿಂತು ಪೋಸ್ ಕೊಟ್ಟಿದ್ದಾರೆ. 
 

ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ರಾಹುಲ್ ಕಿ ದುಲ್ಹಾನಿಯಾ ಕಾರ್ಯಕ್ರಮದಲ್ಲಿ ರಾಹುಲ್ ಎಂಬಾತನನ್ನು ಡಿಂಪಿ ಮದುವೆಯಾದರು. ಇದೊಂದು ಸ್ವಯಂವರ ರೀತಿಯ ಕಾರ್ಯಕ್ರಮವಾಗಿತ್ತು.

ಆದರೆ ಈ ಮದುವೆ ಹೆಚ್ಚು ದಿನಗಳ ಕಾಲ ಉಳಿಯಲಿಲ್ಲ. ದೌರ್ಜನ್ಯದ ಕೇಸ್ ದಾಖಲಿಸಿ ಡಿಂಪಿ ವಿಚ್ಛೇದನ (Divorce) ಪಡೆದುಕೊಂಡರು.  

Tap to resize

 2015ರಲ್ಲಿ ವಿಚ್ಛೇದನ ಪಡೆದುಕೊಂಡು, ಅದೇ ವರ್ಷ ರೋಹಿತ್ ರಾಯ್ ಎಂಬ ಉದ್ಯಮಿ ಜೊತೆ ದಾಂಪತ್ಯ ಜೀವನ ಶುರು ಮಾಡಿದ್ದರು. ಈಗ ಅವರಿಗೆ ಇಬ್ಬರು ಮಕ್ಕಳಿವೆ. 

ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಡಿಂಪಿ ಬಣ್ಣದ ಜರ್ನಿಯಿಂದ ದೂರ ಉಳಿದಿದ್ದಾರೆ. ಬಸಂತ್ ಪಂಚಮಿ ದಿನ ಡಿಂಪಿ ಹೊಸ ಕಾರು ಖರೀದಿಸಿದ್ದಾರೆ. 

ಇಡೀ ಕುಟುಂಬ ಒಂದೇ ಕಾಂಬಿನೇಷನ್‌ ಉಡುಪು ಧರಿಸಿ ಕೆಂಪು ಕಾರಿನ ಮುಂದೆ ನಿಂತಿದ್ದಾರೆ. ಕಾರ್ ನಂಬರ್‌ ಬಹಿರಂಗ ಪಡಿಸಿಲ್ಲ. 'ಇಂದು ಈ ಮ್ಯಾಜಿಕ್ ನಡೆಯಿತು. ನಾವೆಲ್ಲರೂ ಸದಾ ಒಟ್ಟಿಗೆ ಸರಿಯಾಗಿ ಫೋಟೋಗೆ ನಿಂತವರೇ ಅಲ್ಲ,' ಎಂದು ಬರೆದುಕೊಂಡಿದ್ದಾರೆ.

ಇದು ಕೆಂಪು ಬಣ್ಣದ ರೇಂಜ್ ರೋವರ್ ವೆಲಾರ್ (Range Rover) ಆಗಿದ್ದು ಸುಮಾರು 80 ಲಕ್ಷ ರೂಪಾಯಿ ಎಕ್ಸ್‌ ಶೋರೂಮ್‌ ಬೆಲೆ ಎನ್ನಲಾಗಿದೆ.

Latest Videos

click me!