ಕನ್ನಡ ಕಿರುತೆರೆಯಲ್ಲಿ ಹೊಸ ಹೊಸ ನಟಿಯರು ಬಂದು ಹೋಗುತ್ತಿದ್ದಾರೆ. ಆದರೆ ಕೆಲವೇ ಕೆಲವು ನಟಿಯರು ಮಾತ್ರ ನೆನಪಿನಲ್ಲಿ ಉಳಿಯುತ್ತಾರೆ. ಅಂತಹ ನಟಿಯರಲ್ಲಿ ಒಬ್ಬರು ಮಲೈಕಾ ವಸುಪಾಲ್ (Malaika Vasupal).
27
ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಹಿಟ್ಲರ್ ಕಲ್ಯಾಣ (Hitler Kalyana) ಧಾರಾವಾಹಿಯಲ್ಲಿ ಎಡವಟ್ಟು ಲೀಲಾ ಆಗಿ ಎಂಟ್ರಿ ಕೊಟ್ಟು, ಕನ್ನಡಿಗರ ಮನಗೆದ್ದ ಸುಂದರಿ ಮಲೈಕಾ ವಸುಪಾಲ್. ಆ ಸೀರಿಯಲ್ ಬಳಿಕ ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
37
ಹಿಟ್ಲರ್ ಕಲ್ಯಾಣ ಧಾರಾವಾಹಿ ಮಾಡುತ್ತಿದ್ದಾಗಲೇ (Upadyaksha) ಮಲೈಕಾ ಉಪಾಧ್ಯಕ್ಷ ಸಿನಿಮಾದಲ್ಲಿ ಚಿಕ್ಕಣ್ಣನಿಗೆ ನಾಯಕಿಯಾಗಿ ನಟಿಸುವ ಮೂಲಕ ಸದ್ದು ಮಾಡಿದ್ದರು. ಆ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದಾದ ನಂತರ ಮತ್ತೊಂದು ಸಿನಿಮಾದಲ್ಲೂ ಮಲೈಕಾ ನಟಿಸಿದ್ದಾರೆ.
ಇತ್ತಿಚೆಗಷ್ಟೇ ಡಾಲಿ ಧನಂಜಯ್ ನಿರ್ಮಾಣ ಮಾಡಿರುವ, ನಾಗಭೂಷಣ್ ನಾಯಕನಾಗಿ ನಟಿಸಿದ್ದ ವಿದ್ಯಾಪತಿ ಸಿನಿಮಾದಲ್ಲಿ ಮಲೈಕಾ ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾ ಕಾಮಿಡಿ ಎಂಟರ್ ಟೇನರ್ ಆಗಿದ್ದು, ಜನರನ್ನು ನಗಿಸಿದ್ದಂತೂ ನಿಜಾ.
57
ಸಿನಿಮಾ ಅಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಈ ಮಿಲ್ಕಿ ಬ್ಯೂಟಿ ಹೊಸ ಹೊಸ ಫೋಟೊ ಶೂಟ್ ಶೇರ್ ಮಾಡುವ ಮೂಲಕ ಜನರ ಜೊತೆ ಕನೆಕ್ಟ್ ಆಗುತ್ತಿರುತ್ತಾರೆ. ಇದೀಗ ಮತ್ತೊಂದು ಹೊಸ ಫೋಟೊ ಶೂಟ್ (photo shoot) ಮೂಲಕ ಸದ್ದು ಮಾಡ್ತಿದ್ದಾರೆ .
67
ಕ್ರೀಂ ಹಾಗೂ ಹಸಿರು ಬಣ್ಣದ ಒನ್ ಶೋಲ್ಡರ್ ಲಾಂಗ್ ಗೌನ್ ಧರಿಸಿರುವ ಮಲೈಕಾ ವಸುಪಾಲ್ ಕ್ರೀಂ ಬಿಸ್ಕಟ್ ನಂತೆ ಕಾಣಿಸ್ತಿದ್ದಾರೆ. ಇವರ ಅಂದಕ್ಕೆ ಸೋತ ಅಭಿಮಾನಿಗಳು ನಮ್ಮ ದಾವಣೆಗೆರೆ ಹುಡುಗಿ ಸೌಂದರ್ಯ ದೇವತೆ ಅಂತಿದ್ದಾರೆ.
77
ಅಷ್ಟೇ ಅಲ್ಲ ಮಲೈಕಾ ಸೌಂದರ್ಯಕ್ಕೆ ಮಾರು ಹೋಗಿರುವ ಪಡ್ಡೆಗಳು ನಿಮ್ಮ ನಗುವೊಂದೇ ಸಾಕು,ನನ್ನೆಲ್ಲಾ ಬೇಸರವನ್ನ ಕೊಲೆ ಮಾಡಲು. ರೆಕ್ಕೆ ಹೊಂದಿರುವ ದೇವತೆ, ನೋಡುತಾ ನೋಡುತಾ ನಿನ್ನನೇ ನೋಡುತಾ ಕಳೆದು ಹೋದೆ ಎಂದು ಕಾಮೆಂಟ್ ಮಾಡುವ ಮೂಲಕ ಮಲೈಕಾರನ್ನು ಹೊಗಳಿದ್ದಾರೆ.