ಸುವರ್ಣ ಜಾಕ್ ಪಾಟಲ್ಲಿ ಒಂದಾದ ಬಿಗ್ ಬಾಸ್ 7ರ ಸ್ಪರ್ಧಿಗಳು : ಅಭಿಮಾನಿಗಳು ಫುಲ್ ಖುಷ್

Published : Nov 23, 2023, 12:26 PM IST

ಸ್ಟಾರ್ ಸುವರ್ಣ ಚಾನೆಲ್ ನಲ್ಲಿ ಪ್ರಸಾರವಾಗಲಿರುವ ಸುವರ್ಣ ಜಾಕ್ ಪಾಟ್ ಕಾರ್ಯಕ್ರಮದ ಪ್ರೋಮೋ ಬಿಡುಗಡೆಯಾಗಿದ್ದು, ಈ ಗ್ರ್ಯಾಂಡ್ ಶೋದಲ್ಲಿ ಬಿಗ್ ಬಾಸ್ 7 ರ ಸ್ಪರ್ಧಿಗಳು ಮತ್ತು ಕೃಷ್ಣ, ಮಿಲನ ಜೋಡಿ ನೋಡಿ ಪ್ರೇಕ್ಷಕರು ಖುಷಿಯಾಗಿದ್ದಾರೆ.   

PREV
18
ಸುವರ್ಣ ಜಾಕ್ ಪಾಟಲ್ಲಿ ಒಂದಾದ ಬಿಗ್ ಬಾಸ್ 7ರ ಸ್ಪರ್ಧಿಗಳು : ಅಭಿಮಾನಿಗಳು ಫುಲ್ ಖುಷ್

ಸ್ಟಾರ್ ಸುವರ್ಣ (Star Suvarna) ಚಾನೆಲ್‌ನಲ್ಲಿ ಹೊಚ್ಚ ಹೊಸ ಗೇಮ್ ಶೋ ಇನ್ನೇನು ಶುರುವಾಗಲಿದೆ. ಇದೇ ಭಾನುವಾರ 27 ರಿಂದ ಸಂಜೆ 7ಗಂಟೆಗೆ ಈ ಗೇಮ್ ಶೋ ಆರಂಭಗೊಳ್ಳುತ್ತಿದೆ. ಇಂಟ್ರೆಸ್ಟಿಂಗ್ ವಿಷ್ಯ ಏನಂದ್ರೆ ಮೊದಲ ಗೇಮ್ ಶೋನಲ್ಲಿ ಬಿಗ್ ಬಾಸ್ ಸೀಸನ್ 7 ಸ್ಪರ್ಧಿಗಳು ಕಾಣಿಸಿಕೊಳ್ಳಲಿದ್ದಾರೆ. 
 

28

ಅನುಪಮಾ ಗೌಡ ನಡೆಸಿಕೊಡುತ್ತಿರುವ ಈ ಕಾರ್ಯಕ್ರಮದಲ್ಲಿ ಸೆಲೆಬ್ರಿಟಿಗಳೇ (celebrities) ಇರುತ್ತಾರೆ. ಅಷ್ಟೇ ಅಲ್ಲ ಈ ಒಂದು ಶೋದಲ್ಲಿ 50 ಲಕ್ಷ ಬಹುಮಾನ ಕೂಡ ಇರುತ್ತದೆ. ಇಡೀ ಶೋದಲ್ಲಿ ಸಾಕಷ್ಟು ವಿಶೇಷ ಗೇಮ್ಸ್ ಇರುತ್ತವೆ. ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡುವುದರಲ್ಲಿ ಅನುಮಾನವೇ ಇಲ್ಲ. 

38

ಈಗಾಗಲೇ ಈ ಮನರಂಜನಾ ಶೋ (Suvarna Jackpot) ಪ್ರೋಮೋ ಬಿಡುಗಡೆಯಾಗಿದ್ದು, ಪ್ರೇಕ್ಷಕರಂತೂ ತುಂಬಾ ಖುಷಿಯಾಗಿದ್ದಾರೆ. ಯಾಕಂದ್ರೆ ಬಿಗ್ ಬಾಸ್ 7ರ ಸ್ಪರ್ಧಿಗಳು ಮತ್ತೆ ಈ ಕಾರ್ಯಕ್ರಮದ ಮೂಲಕ ಒಂದಾಗಿದ್ದಾರೆ. ಜನರ ಫೇವರಿಟ್ ಬಿಗ್ ಬಾಸ್ ಶೋನ ಫೆವರಿಟ್ ಸ್ಪರ್ಧಿಗಳನ್ನು ನೋಡಿ ಪ್ರೇಕ್ಷಕರು ಖುಷಿಯಾಗಿದ್ದಾರೆ. 
 

48

ಮೊದಲ ಗೇಮ್ ಶೋನಲ್ಲಿ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಜೊತೆಗೆ ಬಿಗ್ ಬಾಸ್ 7ರ ಸ್ಪರ್ಧಿಗಳಾದ ಶೈನ್ ಶೆಟ್ಟಿ, ದೀಪಿಕಾ ದಾಸ್, ಪ್ರಿಯಾಂಕಾ ಶಿವಣ್ಣ, ಕಿಶನ್ ಬಿಳಗಲಿ, ಚೈತ್ರಾ ವಾಸುದೇವನ್, ಆರ್ ಜೆ ಪೃಥ್ವಿ ಭಾಗವಹಿಸಿದ್ದಾರೆ. 
 

58

ವರ್ಷಗಳ ನಂತರ ಶೈನ್ ಶೆಟ್ಟಿ ಮತ್ತು ದೀಪಿಕಾ ದಾಸ್ ಅವರನ್ನು ಜೊತೆಯಾಗಿ ನೋಡಿದ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಶೈನಿಕಾ ಬಿಗ್ ಬಾಸ್ 7ರ (Bigg Boss season 7) ಮೋಸ್ಟ್ ಫೆವರಿಟ್ ಜೋಡಿ. ಈ ಇಬ್ಬರ ಜೋಡಿಗೆ ಸಾಕಷ್ಟು ಅಭಿಮಾನಿ ಬಳಗವೇ ಇದೆ. 
 

68

ಸುವರ್ಣ ಜಾಕ್ ಪಾಟ್ ಪ್ರೋಮೊದಲ್ಲಿ ಸ್ಪರ್ಧಿಗಳ ಮಸ್ತಿ, ಶೈನ್ ದೀಪಿಕಾ ಜೋಡಿ, ಕಿಶನ್ ಬಿಳಗಲಿ ಮಸ್ತ್ ಡ್ಯಾನ್ಸ್ ಜೊತೆಗೆ ಸ್ಯಾಂಡಲ್ ವುಡ್ ನ ಫೇವರಿಟ್ ಕಪಲ್ಸ್ ಕೃಷ್ಣ ಮಿಲನಾ ಜೋಡಿಯ ಮಸ್ತಿ ಎಲ್ಲವೂ ಸಖತ್ ಮನೋರಂಜನೆ ನೀಡುತ್ತಿದೆ. 

78

ಇನ್ನು ಈ ಗ್ಯ್ರಾಂಡ್ ಶೋದ ಬಗ್ಗೆ ಹೇಳೊದಾದ್ರೆ ಜಾಕ್‌ಪಾಟ್ ಏಮ್ ಶೋದಲ್ಲಿ ಸೆಲೆಬ್ರಿಟಿಗಳು ಭಾಗಿ ಆಗುತ್ತಿದ್ದಾರೆ. ಸೆಲೆಬ್ರಿಟಿಗಳು ಎರಡು ತಂಡದಲ್ಲಿ ಆಡ್ತಿದ್ದಾರೆ. ವಿಶೇಷವಾಗಿ ಇಲ್ಲಿ ಸೆಲೆಬ್ರಿಟಿಗಳ ನೆನಪಿನ ಶಕ್ತಿಯ ಪರೀಕ್ಷೆ ಕೂಡ ಇಲ್ಲಿ ನಡೆಯುತ್ತೆ ಅನ್ನೋದನ್ನು ಚಾನೆಲ್ ತಿಳಿಸಿದೆ. 
 

88

ಇನ್ನು ಈ ಕಾರ್ಯಕ್ರಮದಲ್ಲಿ ಸುಮಾರು 50 ಲಕ್ಷ ಬೆಲೆ ಬಾಳುವ ಫ್ರಿಡ್ಜ್, ಟಿವಿ, ವಾಷಿಂಗ್ ಮಷಿನ್, ಲ್ಯಾಪ್‌ಟಾಪ್, ಎಲೆಕ್ಟ್ರಿಕ್ ಸ್ಕೂಟರ್ ಸೇರಿದಂತೆ ಗೃಹ ಉಪಯೋಗಿ ವಸ್ತುಗಳನ್ನ ಗೆಲ್ಲುವ ಅವಕಾಶ  ಸೆಲೆಬ್ರಿಟಿಗಳಿಗೆ ದೊರೆಯುತ್ತಿದೆ. ಇದೇ ಭಾನುವಾರದಿಂದ ಆರಂಭವಾಗಲಿರುವ ಈ ಶೋವನ್ನು ನೀವು ನೋಡಿ ಎಂಜಾಯ್ ಮಾಡಿ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories