ಡೊರೆಮನ್, ಛೋಟಾ ಭೀಮ್‌ ಧ್ವನಿ ಹಿಂದಿನ ಮುದ್ದು ಮುಖ : ಧ್ವನಿ ಕಲಾವಿದೆ ಸೋನಾಲಿ ಕೌಶಲ್

First Published | Dec 28, 2023, 12:45 PM IST

ಡೊರೆಮನ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ ಪುಟ್ಟ ಮಕ್ಕಳಿರುವ ಪ್ರತಿಮನೆಯಲ್ಲೂ ಒಬ್ಬೊಬ್ಬ ಡೊರೆಮನ್‌ ಫ್ಯಾನ್ ಇರುವುದು ಸುಳ್ಳಲ್ಲ,  ಆದರೆ ಬಹುತೇಕ ನೋಡುಗರಿಗೆ ಡೊರೆಮನ್ ಹಿಂದಿನ ಧ್ವನಿ ಯಾರು ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಅವರ ಬಗ್ಗೆ ಇಲ್ಲಿದೆ ಡಿಟೇಲ್ಸ್.

ಡೊರೆಮನ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ ಪುಟ್ಟ ಮಕ್ಕಳಿರುವ ಪ್ರತಿಮನೆಯಲ್ಲೂ ಒಬ್ಬೊಬ್ಬ ಡೊರೆಮನ್‌ ಫ್ಯಾನ್ ಇರುವುದು ಸುಳ್ಳಲ್ಲ, ಪುಟ್ಟ ಮಕ್ಕಳ ಬಾಲ್ಯವನ್ನು ಸದಾ ಖುಷಿ ಖುಷಿಯಾಗಿಡುವ ಈ ಕಾರ್ಟೂನ್‌  ಸಿರೀಸ್‌ಗಳ ಪಾತ್ರಧಾರಿ ಈ ಡೊರೆಮನ್. 

ಡೊರೆಮನ್ ಆಡುವ ಮಾತು, ಓಡಾಡುವ ಶೈಲಿಯನ್ನು ಮಕ್ಕಳು ಅನುಕರಣೆ ಮಾಡುತ್ತಾರೆ. ಆದರೆ ಬಹುತೇಕ ನೋಡುಗರಿಗೆ ಡೊರೆಮನ್ ಹಿಂದಿನ ಧ್ವನಿ ಯಾರು ಎಂಬುದು ಬಹುತೇಕರಿಗೆ ಗೊತ್ತಿಲ್ಲ. 

Tap to resize

ಹೀಗೆ ಮಕ್ಕಳಂತೆ ಮಾತನಾಡುವ ಕಾರ್ಟೂನ್‌ ಪಾತ್ರಧಾರಿ ಡೊರೆಮನ್‌ಗೆ ಧ್ವನಿ ನೀಡ್ತಿರುವವರ ಹೆಸರು ಸೋನಾಲ್ ಕೌಶಲ್‌, ತಮ್ಮ ಧ್ವನಿಯಷ್ಟೇ ಮುದ್ದಾಗಿರುವ ಸೋನಾಲ್ ಕೌಶಲ್ ಒಬ್ಬರು ವಾಯ್ಸ್‌ಒವರ್ ಆರ್ಟಿಸ್ಟ್‌ (ಹಿನ್ನೆಲೆ ಧ್ವನಿ ನೀಡುವ ಕಲಾವಿದೆ.

ಪಂಜಾಬ್‌ ಮೂಲದ ಇವರು ಮುಂಬೈನಲ್ಲಿ ನೆಲೆಕಂಡಿದ್ದು, ಈ ಹಿಂದೆ ಕಪಿಲ್ ಶರ್ಮಾ ಶೋದಲ್ಲಿ ಕಾಣಿಸಿಕೊಂಡ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. 

ಇನ್ಸ್ಟಾಗ್ರಾಮ್‌ನಲ್ಲಿ ಬಹಳ ಆಕ್ಟಿವ್ ಆಗಿರುವ ಸೋನಾಲ್ ಕೌಶಲ್ ಅವರು ಬರೀ ಡೊರೆಮನ್ ಮಾತ್ರವಲ್ಲದೇ ಹಲವು ಕಾರ್ಟೂನ್‌ ಪಾತ್ರಗಳಿಗೆ ಧ್ವನಿ ನೀಡಿ ಪುಟ್ಟ ಮಕ್ಕಳ ಅಚ್ಚುಮೆಚ್ಚಿನ ಧ್ವನಿಯಾಗಿದ್ದಾರೆ ಸೋನಾಲ್.

ಹಲವು ಪಾತ್ರಗಳಿಗೆ ಹಿನ್ನೆಲೆ ಧ್ವನಿ ನೀಡುವುದರ ಜೊತೆಗೆ ಅವರು ಇನ್ಸ್ಟಾಗ್ರಾಮ್‌ನಲ್ಲಿ ಮಕ್ಕಳಿಗೆ ಸಂಬಂಧಿಸಿದ ಸಾಕಷ್ಟು ಹೊಸ ಬ್ರಾಂಡ್‌ಗಳು ಟಾಯ್ಸ್‌ಗಳ ಪ್ರಮೋಷನ್ ಕೂಡ ಮಾಡುತ್ತಿರುತ್ತಾರೆ

ಕೆಲ ತಿಂಗಳ ಹಿಂದಷ್ಟೇ ಪುಟ್ಟ ಮಗುವಿನ ತಾಯಿಯಾಗಿರುವ ಸೋನಾಲ್ ಕೌಶಲ್,  ಪುಟ್ಟ ಮಗುವಿನ ಜೊತೆ ಜೊತೆ ವರ್ಕ್ ಲೈಫ್ ಅನ್ನು ಬ್ಯಾಲೆನ್ಸ್ ಮಾಡುತ್ತಿದ್ದಾರೆ.

ಇನ್ಸ್ಟಾಗ್ರಾಮ್‌ನಲ್ಲಿ ಈ ಅಪರೂಪದ ಹಿನ್ನೆಲೆ ಧ್ವನಿ ಕಲಾವಿದೆಗೆ 1.8 ಮಿಲಿಯನ್ ಫಾಲೋವರ್‌ಗಳಿದ್ದಾರೆ. ಸೋನಾಲ್ ಕೌಶಲ್ ಪತಿ ಉತ್ಕರ್ಷ್ ಬಾಲಿ ಒಬ್ಬ ಫುಡ್ ಬ್ಲಾಗರ್ ಆಗಿದ್ದಾರೆ. 

ಜೊತೆಗೆ  ಹಾಗೂ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಕೂಡ ಆಗಿದ್ದು, ಈ ಜೋಡಿ ಸುಂದರವಾಗಿ ಜೀವನವನ್ನು ಎಂಜಾಯ್ ಮಾಡುತ್ತಿದ್ದು, ಫೋಟೋಗಳನ್ನು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿರುತ್ತಾರೆ. 

ಬರೀ ಡೊರೆಮನ್ ಮಾತ್ರವಲ್ಲದೇ ಸೋನಾಲ್ ಕೌಶಲ್ ಅವರು ಬಂದ್ಬುದ್ ಔರ್ ಬುಡ್ಬಕ್‌ನ ಬುದ್ದದೇವ್ ಪಾತ್ರಕ್ಕೆ, ಲಿಟ್ಲ್ ಸಿಂಗಮ್ ಬಬ್ಲಿ,  ಪಿನಾಕಿ & ಹ್ಯಾಪಿಯ ಪಿನಾಕಿ ಹಾಗೂ ಟಿಟೋ, ಛೋಟಾ ಭೀಮ್ನ ಭೀಮ್, ಸ್ಟಾರ್‌ ವಾರ್ ವಿಶನ್‌ನ ರಾಣಿ ಪಾತ್ರಗಳಿಗೆ ಧ್ವನಿ ನೀಡಿದ್ದಾರೆ. 

ಕಾರ್ಟೂನ್‌ಗಳು ಮಾತ್ರವಲ್ಲದೇ 2016ರಲ್ಲಿ ತೆರೆಕಂಡ ಬಾಲಿವುಡ್‌ ಸಿನಿಮಾ 'ಫ್ರೀಕಿ ಅಲಿ' ಯಲ್ಲಿ ಆಮಿ ಜಾಕ್ಸನ್ ನಿರ್ವಹಿಸಿದ ಮೇಘಾ ಪಾತ್ರ, ಹಾಗೂ  2019ರಲ್ಲಿ ತೆರೆಕಂಡ 'ದ ಬಾಡಿ' ಸಿನಿಮಾದಲ್ಲಿ ನಟಿ ವೇದಿಕಾ ನಿರ್ವಹಿಸಿದ ರಿತು ಪಾತ್ರಕ್ಕೂ ಧ್ವನಿ ನೀಡಿದ್ದಾರೆ ಸೋನಾಲ್

Latest Videos

click me!