ಐ ಲವ್ ಯೂ ಕ್ಯಾಪ್ಟನ್ ಎಂದ ಲಾಯರ್ ಜಗದೀಶ್ ಎದೆ ಮೇಲೆ ಕಾಲಿಟ್ಟ ಹಂಸ… ದೊಡ್ಮನೆಯಲ್ಲಿ ಏನಾಗ್ತಿದೆ?

Published : Oct 08, 2024, 12:04 PM ISTUpdated : Oct 08, 2024, 12:08 PM IST

ತನ್ನನ್ನು ಸ್ವರ್ಗದಿಂದ ನರಕಕ್ಕೆ ಕಳುಹಿಸಿರೋ ಕ್ಯಾಪ್ಟನ್ ಹಂಸಾಗೆ ಲಾಯರ್ ಜಗದೀಶ್ ವಿಪರೀತ ಕಾಟ ಕೊಡುತ್ತಿದ್ದು, ಕೊನೆಗೆ ಐ ಲವ್ ಯೂ ಅಂತಾನೂ ಹೇಳಿದ್ದಾರೆ. ಇದೇನು ಹೊಸ ಲವ್ ಸ್ಟೋರಿ ಶುರುವಾಗಿದ್ಯಾ ದ್ದೊಡ್ಮನೆಲಿ.   

PREV
17
ಐ ಲವ್ ಯೂ ಕ್ಯಾಪ್ಟನ್ ಎಂದ ಲಾಯರ್ ಜಗದೀಶ್ ಎದೆ ಮೇಲೆ ಕಾಲಿಟ್ಟ ಹಂಸ… ದೊಡ್ಮನೆಯಲ್ಲಿ ಏನಾಗ್ತಿದೆ?

ಮೊದಲನೇ ವಾರದಲ್ಲಿ ತಮ್ಮ ಗಲಾಟೆ, ಗದ್ದಲ, ಬಿಗ್ ಬಾಸ್ ಗೆ (Bigg Boss Season 11) ಆವಾಜ್ ಹಾಕುವ ಮೂಲಕ ಸದ್ದು ಮಾಡಿದ ಲಾಯರ್ ಜಗದೀಶ್, ಕಿಚ್ಚನ ಪಂಚಾಯಿತಿಯಲ್ಲಿ ಸಾರಿ ಕೂಡ ಕೇಳಿದ್ರು. ಇದಾದ ನಂತ್ರ ಎರಡನೇ ವಾರ ಬಿಗ್ ಬಾಸ್ ಹೇಗಿರಬಹುದು ಎನ್ನುವ ಕುತೂಹಲ ಜನರಿಗಿತ್ತು. ಈ ವಾರ ಜಗದೀಶ್ ಜಾಲಿ ಮೂಡ್ ನಲ್ಲಿರೋವಂತೆ ಕಾಣಿಸುತ್ತಿದೆ. 
 

27

ಈಗಾಗಲೇ ಮನೆಯವರೆಲ್ಲರಿಗೂ ಧರ್ಮ ಮತ್ತು ಐಶ್ವರ್ಯ ಸಿಂಧೋಗಿ ನಡುವೆ ಅನುಮಾನ ಮೂಡಿದೆ. ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ನಡಿತಿದೆ ಎಂದು ಮನೆಯವರು ಹಾಗೂ ವೀಕ್ಷಕರು ಕೂಡ ಹೇಳ್ತಿದ್ದಾರೆ. ಇದರ ನಡುವೆ ಜಗದೀಶ್(Lawyer Jagadish) ಈ ವಾರ ರೋಮ್ಯಾಂಟಿಕ್ ಮೂಡ್ ಗೆ ಜಾರಿದಂತೆ ಕಾಣಿಸುತ್ತಿದೆ. ಕ್ಯಾಪ್ಟನ್ ಆಗಿರೋ ಹಂಸ ಅವರನ್ನ ತಮ್ಮ ತರಲೆಗಳಿಂದ ಸಿಕ್ಕಾಪಟ್ಟೆ ಕಾಡಿಸುತ್ತಿದ್ದಾರೆ ಜಗದೀಶ್. 
 

37

ಬಿಗ್ ಬಾಸ್ ಹೊಸದಾಗಿ ಪ್ರೊಮೋ ಬಿಡುಗಡೆ ಮಾಡಿದ್ದು, ಈ ಪ್ರೊಮೋ ಹೈ ಲೈಟ್ ಅಂದ್ರೆ ಅದು ಜಗದೀಶ್ ಮತ್ತು ಹಂಸ. ಜಗದೀಶ್ ಇಡೀ ದಿನ ಹಂಸ ಹಂಸ ಎನ್ನುತ್ತಾ ಕ್ಯಾಪ್ಟನ್ ಹಿಂದೆ ಸುತ್ತಾಡ್ತಿರೋ ವಿಡಿಯೋ ಇದಾಗಿತ್ತು ನೋಡಿದೋರು, ದೊಡ್ಮನೆಲಿ ದೊಡ್ಡೋರ ಲವ್ ಸ್ಟೋರಿ ಶುರುವಾಗಿದೆ ಎಂದು ಹೇಳುತ್ತಿದ್ದಾರೆ. 
 

47

ಇಲ್ಲಿವರೆಗೆ ಹಂಸ (Hamsa) ಜೊತೆ ಬರೀ ಜಗಳಾನೆ ಮಾಡ್ತಿದ್ದ ಜಗದೀಶ್, ಇದೀಗ ಕ್ಯಾಪ್ಟನ್ ಕ್ಯಾಪ್ಟನ್ ಅಂತ ಹಂಸ ಹಿಂದೆ ಬಿದ್ದಿದ್ದಾರೆ, ಜೊತೆಗೆ ಎರಡೂ ಕೈಗಳನ್ನು ಬಿಡಿಸಿ, ಐ ಲವ್ ಯೂ ಕ್ಯಾಪ್ಟನ್ ಎಂದು ಪ್ರಪೋಸ್ ಕೂಡ ಮಾಡಿದ್ದಾರೆ. ಇದರಿಂದ ಇರಿಟೇಟ್ ಆಗಿರುವ ಹಂಸ ಕ್ಯಾಪ್ಟನ್ ಗೆ ಎಲ್ಲರೂ ಮರ್ಯಾದೆ ಕೊಡಿ ಎಂದು ಹೆಳಿದ್ದಾರೆ. 
 

57

ಅಷ್ಟೇ ಅಲ್ಲ ಹಂಸ ಅವರನ್ನ "ಹಮ್ಸ್‌" ಅಂತಲೇ ಜಗದೀಶ್ ಕರೆಯುತ್ತಿದ್ದಾರೆ. ಜೊತೆಗೆ ನಿಮಗೆ ಸ್ವಲ್ಪ ಬಿಪಿ ಜಾಸ್ತಿಯಾಗಿದೆ ಆರಾಮಾಗಿ ಕೂತ್ಕೊಳಿ ಅಂತಾನೂ ಕಾಲೆಳಿತ್ತಿದ್ದಾರೆ ಜಗದೀಶ್. ಅಷ್ಟೇ ಅಲ್ಲ ಈಗ ನರಕವಾಸಿಗಳಿಗೆ ಸ್ವರ್ಗ ವಾಸಿಗಳು ಎಲ್ಲಾ ರೀತಿಯ ಅಡುಗೆ ಮಾಡಿ ಕೊಡಬೇಕಾಗಿರೋದ್ರಿಂದ ನಂಗೆ ಚಿಕನ್ ಮಂಚೂರಿ ಮಾಡಿ ತಂದ್ಕೊಡು ಎಂದಿದ್ದಾರೆ, ಇಲ್ಲಾಂದ್ರೆ ನಿನ್ನನ್ನೆ ಮಾಡಿ ತಿಂತೀನಿ ಅಂತಾನೂ ರೇಗಿಸಿದ್ದಾರೆ ಜಗ್ಗಣ್ಣ. 
 

67

ಇದಿಷ್ಟು ಸಾಲದು ಅಂತ ಅವಳ ಕಣ್ಣು ನನ್ನ ಮೇಲೆ, ನನ್ನ ಕಣ್ಣು ಅವಳ ಮೇಲೆ ಎಂದು ರೊಮ್ಯಾಂಟಿಕ್ ಆಗಿ ಹಾಡು ಹೇಳುತ್ತಿದ್ದಾರೆ, ಇದನ್ನೆಲ್ಲಾ ನೋಡಿ ಹಂಸ ಸ್ಥಿತಿ ನಗೋದೋ ಅಳೋದು ಅನ್ನುವಂತಾಗಿದೆ. ಆದರೂ ಎಲ್ಲೂ ಕೋಪ ಮಾಡದೇ ಹಂಸ ಕೂಡ ಸಮಾಧಾನದಲ್ಲಿ ಎಲ್ಲವನ್ನೂ ಸಹಿಸ್ಕೊಂಡು ಹೋಗ್ತಿರೋದನ್ನ ಪ್ರೊಮೋದಲ್ಲಿ ಕಾಣಬಹುದು. 
 

77

ಈ ಹಿರಿಯ ಜೋಡಿಯ ಲವ್ ಸ್ಟೋರಿಯಲ್ಲಿ ಮುಂಗಾರು ಮಳೆ ಆ ಸೀನ್ ಕೂಡ ರಿಕ್ರಿಯೇಟ್ ಆಗಿದೆ. ಲಾಯರ್ ಜಗದೀಶ್ ನೆಲದ ಮೇಲೆ ಗೋಲ್ಡನ್ ಸ್ಟಾರ್ ಗಣೇಶ್ ರೀತಿ ಮಲಗಿದ್ರೆ, ಹಂಸ ಅವರು ಪೂಜಾ ಗಾಂಧಿಯಂತೆ ಜಗದೀಶ್ ಎದೆ ಮೇಲೆ ಕಾಲಿಟ್ಟು ಮುಂದೆ ಸಾಗಿದ್ದಾರೆ. ಈ ಇಬ್ಬರ ಜೋಡಿ ಮನೆಮಂದಿಗೂ ಜೊತೆಗೆ ವೀಕ್ಷಕರಿಗೂ ಸಖತ್ ಮನರಂಜನೆ ನೀಡಿರೋದಂತೂ ಸುಳ್ಳಲ್ಲ. ಬಿಗ್ ಬಾಸ್ ನ ರಿಯಲ್ ಎಂಟರ್’ಟೇನರ್ ಅಂದ್ರೆ ಅದು ಜಗ್ಗು ಬಾಸ್ ಅಂತಿದ್ದಾರೆ ಜನ. 
 

Read more Photos on
click me!

Recommended Stories