ನೀನಾದೆ ನಾ ಧಾರಾವಾಹಿಯಲ್ಲಿ ಮಂಗಳೂರು ದಸರಾ ವೈಭವ… ಶಾರದೆಯ ಸನ್ನಿಧಿಯಲ್ಲಿ ಅಮ್ಮನ್ನನ್ನು ಸೇರ್ತಾನ ವಿಕ್ರಂ!

First Published | Oct 7, 2024, 3:18 PM IST

ನೀನಾದೆ ನಾ ಧಾರಾವಾಹಿಯ ಹೊಸ ಅಧ್ಯಾಯದಲ್ಲಿ ಅಮ್ಮನ ನೆನಪಿನಲ್ಲಿ ಅಮ್ಮನ ಸನ್ನಿಧಾನಕ್ಕೆ ಬಂದಿದ್ದಾನೆ ವಿಕ್ರಂ, ಅಮ್ಮ ಸಿಗ್ತಾಳ ಗೊತ್ತಿಲ್ಲ. ಆದ್ರೆ ಸೀರಿಯಲ್ ಮೂಲಕ ನೀವು ಮಂಗಳೂರು ದಸರಾವನ್ನು ಕಣ್ತುಂಬಿಸಿಕೊಳ್ಳಬಹುದು. 
 

ನೀನಾದೆ ನಾ (Neenade Naa) ಹಳೆ ಕಥೆ ಮುಗಿದು ಇದೀಗ ಪ್ರೀತಿಯ ಹೊಸ ಅಧ್ಯಾಯ ಆರಂಭವಾಗಿದ್ದು, ಕಥೆ ಮಂಗಳೂರು ಭಾಗದಲ್ಲೇ ನಡೆಯುತ್ತಿದೆ. ಮಂಗಳೂರಿನಲ್ಲಿ ನಡೆಯುವ ದ್ವೇಷದಿಂದ ಆರಂಭವಾಗುವ ಪ್ರೇಮ ಕಥೆ ಇದಾಗಿದ್ದು, ವೀಕ್ಷಕರಿಗಂತೂ ಕಥೆ ಸಿಕ್ಕಾಪಟ್ಟೆ ಇಷ್ಟವಾಗಿದೆ. 
 

ವಿಕ್ರಂ ಇಲ್ಲೂ ಸಹ ರೌಡಿಯಾಗಿಯೇ ಕಾಣಿಸಿಕೊಂಡಿದ್ದಾರೆ. ಸೀರಿಯಲ್ ಆರಂಭವಾಗಿ ತಿಂಗಳುಗಳು ಕಳೆದರೂ ವಿಕ್ರಂ ಮತ್ತು ವೇದಾ ನಡುವೆ ಪ್ರೀತಿ ಇನ್ನೂ ಹುಟ್ಟಿಯೇ ಇಲ್ಲ. ಒಬ್ಬರನ್ನೊಬ್ಬರು ಕಂಡರೆ ಹಾವು -ಮುಂಗುಸಿಯಂತೆ ಜಗಳವಾಡುತ್ತಿರುತ್ತಾರೆ. ವೇದಾ ಬಳಿ ಸಾಲ ವಸೂಲಿ ಮಾಡಲು ಹಲವು ರೀತಿಯಲ್ಲಿ ಆ ಮನೆಯ ನೆಮ್ಮದಿ ಕೆಡಿಸಿದ್ದಾನೆ ವಿಕ್ರಮ್. 
 

Tap to resize

ನೀನಾದೆ ನಾ ಹಳೆ ಕಥೆಗಿಂತ ತುಂಬಾನೆ ವಿಭಿನ್ನವಾಗಿರುವ ಕಥೆ ಇದಾಗಿದೆ. ಆದರೆ ಈ ಕಥೆಯಲ್ಲಿ ಇಬ್ಬರಿಗೂ ಒಂದೊಂದು ಫ್ಲಾಶ್ ಬ್ಯಾಕ್ ಇದೆ. ಅದು ಇದುವರೆಗೆ ಏನು ಅನ್ನೋದು ರಿವೀಲ್ ಆಗಿಲ್ಲ, ಅದು ರಿವೀಲ್ ಆದರೆ ವಿಕ್ರಮ್ ಮತ್ತು ವೇದಾ ಒಂದಾಗುವ ಸಾಧ್ಯತೆ ಇದೆ. ವಿಕ್ರಂ ರೌಡಿಯಾಗೋದಕ್ಕೂ ಒಂದು ಕಥೆ ಇರಬಹುದು. 
 

ಇದೀಗ ಹೆತ್ತಮ್ಮನ ನೆನಪಿನಲ್ಲಿ ವಿಕ್ರಂ ತಾಯಿ ದರ್ಶನ ಮಾಡಲು ಬಂದಿದ್ದಾರೆ. ವಿಕ್ರಂ ಅಮ್ಮ ಹೇಳಿದ ದಸರಾ ಹಬ್ಬದ ಕಥೆಗಳು, ಅಪ್ಪ-ಅಜ್ಜ ರೌಡಿಗಳು ಅನ್ನೋದನ್ನ ಅಮ್ಮ ಹೇಳಿದ್ದು ಎಲ್ಲವೂ ನೆನಪಾಗುತ್ತೆ. ಪ್ರತಿವರ್ಷ ನವರಾತ್ರಿ ಬಂದಾಗ ಇಲ್ಲಿಗೆ ಬರ್ತೀನಿ, ಅಮ್ಮನ ನೆನಪಾಗುತ್ತೆ, ಯಾಕೆ ಹೀಗಾಗುತ್ತೆ ಗೊತ್ತಾಗ್ತಿಲ್ಲ. ಅಮ್ಮ ಹೇಳ್ತಾಳೆ ಆ ದೇವಿಗೆ ಎಲ್ಲರನ್ನೂ ಒಂದು ಮಾಡೋ ಶಕ್ತಿ ಇದೆಯಂತೆ, ಹಾಗಿದ್ರೆ ನನ್ನನ್ನ ಅಮ್ಮನಿಂದ ಯಾಕೆ ದೂರ ಮಾಡಿದ್ರು ದೇವಿ ಅಂತ ತನ್ನಲ್ಲೇ ಪ್ರಶ್ನೆ ಕೇಳ್ತಾನೆ ವಿಕ್ರಂ. 
 

ಇದೆಲ್ಲಾ ಸೀನ್ ಗಳು ನಡೆದಿರೋದು ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ. ಮಂಗಳೂರು ದಸರಾ (Mangalore Dasara) ವೈಭವನ್ನು ನೀವು ಈ ಧಾರಾವಾಹಿಯಲ್ಲಿ ಕಣ್ತುಂಬಿಕೊಳ್ಳಬಹುದು. ನವದುರ್ಗೆಯರು, ತಾಯಿ ಶಾರದೆ, ದೀಪಾಲಂಕಾರದಿಂದ ಜಗಮಗಿಸುವ ಗೋಕರ್ಣನಾಥ ಕ್ಷೇತ್ರವನ್ನು ಸಹ ನೀವು ಕಾಣಬಹುದು. 
 

ಮೈಸೂರು ದಸರಾದಷ್ಟು ವೈಭವದಿಂದ ಕೂಡಿರದಿದ್ದರೂ ಮಂಗಳೂರು ದಸರಾವನ್ನು ನೀವು ಒಂದು ಬಾರಿಯಾದ್ರೂ ನೋಡಬೇಕು. 'ಮಂಗಳೂರು ದಸರಾ'ವನ್ನು ಮಂಗಳೂರಿನ ಕುದ್ರೋಳಿ ಶ್ರೀ ಗೋಖರ್ಣನಾತೇಶ್ವರ ದೇವಸ್ಥಾನದವರು (Gokarnanatheshwara temple) ಆಯೋಜಿಸುತ್ತಾರೆ.ಇದನ್ನು 'ಮಾರ್ನೇಮಿ', 'ವಿಜಯದಶಮಿ', 'ನವರಾತ್ರಿ ಹಬ್ಬ'ಎಂದೂ ಕೂಡ ಕರೆಯುತ್ತಾರೆ. 'ಹುಲಿವೇಷ','ಕರಡಿ ವೇಷ'ಗಳಂತಹ ಸಾಂಸ್ಕೃತಿಕ ಕುಣಿತಗಳು ಈ ಹಬ್ಬದ ಪ್ರಮುಖ ಆಕರ್ಷಣೆಯಾಗಿದೆ.
 

ಮಂಗಳೂರು ದಸರಾ ಸಂದರ್ಭದಲ್ಲಿ ನಗರದ ಬೀದಿ ಬೀದಿಗಳು 10 ದಿನಗಳ ಕಾಲ ದೀಪಾಲಂಕಾರದಿಂದ ಜಗಮಗಿಸುತ್ತಿರುತ್ತೆ. ಮಂಗಳೂರಿನ ಹಲವೆಡೆ ವಿವಿಧ ರೀತಿಯ ಸಾಂಸ್ಕೃತಿಕ ಚಟುವಟಿಕೆಗಳು, ಆಹಾರ ಮೇಳಗಳು, ನಡೆಯುತ್ತವೆ. ಅದರಲ್ಲೂ ನವದುರ್ಗೆಯರನ್ನು ಕಣ್ತುಂಬಿಕೊಳ್ಳಲು ದೂರದೂರುಗಳಿಂದ ಜನ ಬರುತ್ತಾಳೆ. ಶಾರದಮ್ಮನ ಅಂದವನ್ನು ಕಣ್ತುಂಬಿಕೊಳ್ಳೋದೆ ಮರೆಯಲಾರದ ಅನುಭವ ನೀಡುತ್ತೆ. ಹತ್ತನೇ ದಿನ ನವದುರ್ಗೆಯರ ಸಮೇತ ಶಾರದೆ, ಗಣಪತಿಯ ಮೆರವಣಿಗೆ ಮಂಗಳೂರಲ್ಲೆಲ್ಲಾ  ತಿರುಗಿ, ದೇವಾಲಯದ ಪುಷ್ಕರಿಣಿಯಲ್ಲಿ ವಿಗ್ರಹಗಳ ವಿಸರ್ಜನೆ ನಡೆಯುತ್ತೆ. 
 

ಮಂಗಳೂರು ದಸರಾದ ಪ್ರಮುಖ ಆಕರ್ಷಣೆ ಹುಲಿವೇಶ ಕುಣಿತ. ಆರಂಭದಲ್ಲಿ ಇದನ್ನ ಹರಕೆ ಹೊತ್ತು ನಡೆಸಲಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಆಸಕ್ತ ಯುವಕರು ಮೈಗೆ ಹುಲಿಯಂತೆ ಬಣ್ಣ ಬಳಿದು, ಠಾಸೆಯ ಸದ್ದಿಗೆ ಸ್ಟೆಪ್ ಹಾಕುತ್ತಾರೆ. ನಗರದ ಹಲವೆಡೆ ದೊಡ್ಡಮಟ್ಟದಲ್ಲಿ ಹುಲಿವೇಷ ಸ್ಪರ್ಧೆಗಳು ನಡೆಯುತ್ತವೆ, ಇದನ್ನ ನೋಡೋದಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ನೀವು ಕೂಡ ಒಂದುಬಾರಿಯಾದ್ರೂ ಮಂಗಳೂರು ದಸರಾವನ್ನು ಕಣ್ತುಂಬಿ. 
 

Latest Videos

click me!